ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮಸೀದಿಗಳು ಮತ್ತು ಇತರ ಪ್ರಾರ್ಥನಾ ಸ್ಥಳಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ‘ಮಾನಿಟರಿಂಗ್ ಕಮಿಟಿ ಆಫ್ ಇಂಡಿಯನ್ ಮುಸ್ಲಿಮ್ಸ್’ (ಎಂಸಿಐಎಂ) ನ ಸದಸ್ಯರು ಮತ್ತು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಸಂಸದರಾದ ಝಿಯಾಉರ್ ರೆಹಮಾನ್ ಬರ್ಖ್ ಮತ್ತು ಮುಹಿಬುಲ್ಲಾ ನದ್ವಿ, ಮಾಜಿ ಸಂಸದ ದಾನಿಶ್ ಅಲಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮಲಿಕ್ ಮುಅಸಿಮ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಝಿಯಾಉರ್ ರೆಹಮಾನ್ ಬರ್ಖ್ ಅವರು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ತೀವ್ರವಾಗಿ ಟೀಕಿಸಿದರು. “ನಮಗೆ ನ್ಯಾಯ ಸಿಗುವವರೆಗೆ, ನಮ್ಮ ಉಸಿರು ಇರುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.
ದೇಶದ ಸಂಪತ್ತು ಮತ್ತು ಸಾಂವಿಧಾನಿಕ ಸಂಸ್ಥೆಗಳು ನಿರ್ದಿಷ್ಟ ಸಿದ್ಧಾಂತದ ಕೈಯಲ್ಲಿವೆ ಮತ್ತು ತಮ್ಮ ಸಿದ್ಧಾಂತವನ್ನು ಹೇರುವ ಅವರ ಪ್ರಯತ್ನಗಳು ದೇಶದಲ್ಲಿ ದೊಡ್ಡ ಅಶಾಂತಿಯನ್ನುಂಟುಮಾಡುತ್ತಿವೆ ಎಂದು ಮುಹಿಬುಲ್ಲಾ ನದ್ವಿ ಹೇಳಿದರು. ಪೊಲೀಸರು ಪ್ರತಿಭಟನೆಯನ್ನು ತಡೆದು ನಾಯಕರನ್ನು ವಶಕ್ಕೆ ತೆಗೆದುಕೊಂಡರು. ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ನಾಯಕರನ್ನು ಸ್ಥಳದಿಂದ ಕರೆದೊಯ್ಯಲಾಯಿತು.
https://x.com/ANI/status/2104878421214114024?ref_src=twsrc%5Etfw%7Ctwcamp%5Etweetembed%7Ctwterm%5E2104878421214114024%7Ctwgr%5E184be861e49150badc3d9e60cbceb8f98316e1d0%7Ctwcon%5Es1_c10&ref_url=https%3A%2F%2Fadmin.mediaoneonline.com%2F












