ಸನ್ಮಾರ್ಗ ವಾರ್ತೆ
ಜೆರುಸಲೆಮ್ನಲ್ಲಿ ಕೊಲಂಬಿಯಾ ಸರ್ಕಾರವು ತನ್ನ ರಾಯಭಾರ ಕಚೇರಿಯನ್ನು ತೆರೆದಿರುವ ನಿರ್ಧಾರವನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸೌದಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಕೊಲಂಬಿಯಾದ ಈ ಹೆಜ್ಜೆಯು ಅಂತರರಾಷ್ಟ್ರೀಯ ಕಾನೂನು ಮತ್ತು ಅದಕ್ಕೆ ಸಂಬಂಧಿಸಿದ ನಿರ್ಣಯಗಳ ಉಲ್ಲಂಘನೆಯಾಗಿದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಜೆರುಸಲೆಮ್ ನಗರದ ಕಾನೂನುಬದ್ಧ ಮತ್ತು ಐತಿಹಾಸಿಕ ಸ್ಥಾನಕ್ಕೆ ಈ ನಿರ್ಧಾರವು ನೇರ ಧಕ್ಕೆ ತಂದಿದೆ ಹಾಗೂ ಜೆರುಸಲೆಮ್ ಕುರಿತಾದ ಅಂತರರಾಷ್ಟ್ರೀಯ ಒಮ್ಮತಕ್ಕೆ ಇದು ವಿರುದ್ಧವಾಗಿದೆ ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ.
ಈ ಪ್ರದೇಶದಲ್ಲಿ ಶಾಂತಿ ನೆಲೆಸದಂತೆ ತಡೆಯಲು ಮತ್ತು ಬಲವಂತವಾಗಿ ಹೊಸ ಪರಿಸ್ಥಿತಿಗಳನ್ನು ಹೇರಲು ಇಸ್ರೇಲ್ ಮಾಡುತ್ತಿರುವ ಕಾನೂನುಬಾಹಿರ ಪ್ರಯತ್ನಗಳನ್ನು ತಡೆಯಲು ಕೂಡಲೇ ಮುಂದಾಗಬೇಕು. ಇದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವು ತಮ್ಮ ಕಾನೂನು ಹಾಗೂ ನೈತಿಕ ಜವಾಬ್ದಾರಿಗಳನ್ನು ಪೂರೈಸಬೇಕೆಂದು ಸೌದಿ ಅರೇಬಿಯಾ ಒತ್ತಾಯಿಸಿದೆ.












