ಹೊಸದಿಲ್ಲಿ,ಜು.29: ಜನರ ಗುಂಪು ಹತ್ಯೆಗಳ ಹೆಸರಿನಲ್ಲಿ ಹಿಂದೂಗಳನ್ನು ಅಪಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಹಿಂದೂ ಧರ್ಮ ಮತ್ತು ಭಾರತದ ಸಂಸ್ಕಾರವನ್ನು ಅಪಮಾನಿಸುವ ಗೂಢಾಲೋಚನೆ ಇದರಲ್ಲಿದೆ ಎಂದು ಭಾಗವತ್ ಆರೋಪಿಸಿದರು.
ಜೈ ಶ್ರೀರಾಮ್ ಸಂಘಪರಿವಾರದ ಹತ್ಯೆಯ ಕೂಗು ಆಗುತ್ತಿದೆ ಎಂದು ದೇಶದ ಪ್ರಮುಖರು ಪ್ರಧಾನಿಗೆ ಪತ್ರವನ್ನು ಬರೆದ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಇರುವವರು ಕೂಡ ಹಿಂದೂ ಧರ್ಮದ ರಕ್ಷಣೆಗೆ ಒಗ್ಗಟ್ಟಾಗಿರಬೇಕು. ಸಮಾಜದಲ್ಲಿ ಜಾತಿ, ವರ್ಗ ವ್ಯತ್ಯಾಸ ಇಲ್ಲದಾಗಿಸಲು ಆರೆಸ್ಸೆಸ್ ಪ್ರಚಾರಕರು ಯತ್ನಿಸಬೇಕೆಂದು ಭಾಗವತ್ ಹೇಳಿದರು.












