ಸನ್ಮಾರ್ಗ ವಾರ್ತೆ
ಗ್ರೇಟರ್ ನೊಯ್ಡಾ: ಉತ್ತರಪ್ರದೇಶದ ನೋಯ್ಡದಲ್ಲಿ ಐದು ಮಂದಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನೊಯ್ಡದ ರಬೂಪುರದಲ್ಲಿ ಚಾ ಮತ್ತು ನ್ಯೂಡಲ್ಸ್ ಸೇವಿಸಿ ಹಿಂದಿನ ರಾತ್ರೆ ಐದು ಮಂದಿ ಮಲಗಿದ್ದರು. ಬೆಳಗಾತ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಹೇಶ್, ಲಲಿತಾ ಇವರ ಮಕ್ಕಳಾದ ಹನ್ನೊಂದು ವರ್ಷದ ಲಡ್ಡು , ಏಳು ವರ್ಷದ ಮಿಷ್ಟಿ, ಮೂರು ವರ್ಷದ ಸಾಕ್ಷಾತ್ ಎಂದು ಗುರುತಿಸಲಾಗಿದೆ. ಘಟನೆ ಶನಿವಾರ ರಾತ್ರೆ ನಡೆದಿದೆ.
ಪ್ರಾಥಮಿಕ ತಪಾಸಣೆಯಲ್ಲಿ ಆಹಾರ ವಿಷ ಬಾಧೆ ಎಂದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು, ವಿಧಿವಿಜ್ಞಾನ ತಜ್ಞರು ಹಾಗೂ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಫಾರೆನ್ಸಿಕ್ ವರದಿ ಬಂದ ಬಳಿಕ ಸಾವಿಗೆ ನಿಖರವಾದ ಕಾರಣವನ್ನು ಗುರುತಿಸಬಹುದೆಂದು ಪೊಲೀಸರು ಹೇಳಿದ್ದಾರೆ.












