ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಜಾನುವಾರುಗಳಿಗೆ ಮೇವು ಆಗಿ ಬಳಕೆಗೊಳ್ಳುವ ಹೊಟ್ಟನ್ನು ಉಪಯೋಗಿಸಿ ಬಿಸ್ಕತ್ ತಯಾರಿಸಿದ ಪ್ರಿಯಾ ಗೋಲ್ಡ್ ವಿರುದ್ಧ ಆಹಾರ ಸುರಕ್ಷಾ ಆಥಾರಿಟಿ ಕ್ರಮ ಕೈಗೊಂಡಿದೆ. ಪ್ರಿಯಾ ಗೋಲ್ಡ್ ಬಿಸ್ಕತ್ಅನ್ನು ಸರ್ಯ ಫುಡ್ ಆಂಡ್ ಆಗ್ರೋ ಕಂಪೆನಿ ತಯಾರಿಸುತ್ತಿದೆ. ಬಳೆಕೆದಾರರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷೆ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು. ಆಗ್ರೂ ಪ್ಲಾಂಟ್ನಲ್ಲಿ ಗಂಭೀರವಾದ ಆರೋಗ್ಯ- ಶುಚಿತ್ವ ಲೋಪಗಳನ್ನು ಕೂಡ ತನಿಖೆಯ ವೇಳೆ ಪ್ರಾಧಿಕಾರದ ಅಧಿಕಾರಿಗಳು ಗುರುತಿಸಿದರು.
ಬಿಸ್ಕತ್ನಲ್ಲಿ ಫೈಬರ್ ಸೋರ್ಸ್ ಆಗಿ ಕಂಪೆನಿ ಹೊಟ್ಟನ್ನು ಬಳಸುತ್ತಿತ್ತು. ಫ್ಯಾಕ್ಟರಿಯಲ್ಲಿ ಸಂಗ್ರಹಿಸಿಡಲಾಗಿದ ಈ ಹೊಟ್ಟುಗಳು ತುಂಬಿದ ಗೋಣಿಗಳಲ್ಲಿ ಇತ್ತು ಹಾಗೂ ಇದು ಜಾನುವಾರುಗಳ ಬಳಕೆಗಾಗಿದೆ ಎಂದು ಬರೆದಿತ್ತು.
ಫ್ಯಾಕ್ಟರಿಯ ಶುಚಿತ್ವ, ಕೀಟ ನಿಯಂತ್ರಣ, ಅಸಂಸ್ಕೃತ ವಸ್ತುಗಳ ಭಂಡಾರ, ಕಾರ್ಮಿಕರ ಶುಚಿಯ ಕುರಿತು ಗಂಭೀರ ಲೋಪ ಪತ್ತೆಯಾಗಿದೆ. ಕಂಪೆನಿಯ ಲೈಸನ್ಸ್ ಅಮಾನತಿನಲ್ಲಿಡಲಾಗಿದೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಧಿಕಾರ ಪ್ರಾಶಿಕ್ಯೂಶನ್ ಪ್ರಕ್ರಿಯೆ ಆರಂಭಿಸಲಾಗಿದೆ.












