ಸನ್ಮಾರ್ಗ ವಾರ್ತೆ
ಲಂಡನ್: ಜೂನ್ 13 ರಂದು ಪಶ್ಚಿಮ ಲಂಡನ್ನಲ್ಲಿ ಮಹ್ರಾ ಅಲ್ ನಹ್ಯಾನ್ ಅವರು ರಸ್ತೆ ಬದಿಯ ರೈಲಿಂಗ್ಗೆ ಆತುಕೊಂಡು ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಕುಳಿತಿರುವುದು ಕಂಡು ಬಂದಿತ್ತು. ಅವರ ಬಳಿ ಇದ್ದ ಮತ್ತೊಬ್ಬ ವ್ಯಕ್ತಿಯೂ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಈ ವೇಳೆ ಚಿಕ್ಕ ಮಗುವೊಂದು ಯಾವುದೇ ಪಾದರಕ್ಷೆಗಳಿಲ್ಲದೆ ರಸ್ತೆ ಬದಿಯಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಪಾದಾಚಾರಿಗಳು ವಾಹನಗಳ ಸಂಚಾರವಿರುವ ಆ ಸ್ಥಳದಲ್ಲಿ ಮಗು ಬಹಳ ಅಪಾಯಕಾರಿಯಾಗಿ ಅತ್ತಿತ್ತ ತಿರುಗಾಡುವುದು ಕಂಡು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ ಮತ್ತು ಪೊಲೀಸರು ಬರುವವರೆಗೆ ಅಲ್ಲಿದ್ದು ಮಗುವನ್ನು ರಕ್ಷಿಸಿದ್ದಾರೆ. 32 ವರ್ಷದ ಮಹ್ರಾ ಅಲ್ ನಹ್ಯಾನ್ ಯುಎಇ (ಸಂಯುಕ್ತ ಅರಬ್ ಸಂಸ್ಥಾನ) ರಾಜ ಕುಟುಂಬಕ್ಕೆ ಸೇರಿದವರು. ಇವರ ವಿರುದ್ಧ ಲಂಡನ್ ಪೊಲೀಸರು ಮಗುವಿನ ಆರೈಕೆಯಲ್ಲಿ ನಿರ್ಲಕ್ಷ್ಯ ತೋರಿದ ಪ್ರಕರಣದಲ್ಲಿ ದೋಷಿಯೆಂದು ಕೋರ್ಟು ತೀರ್ಪು ನೀಡಿದೆ. ಮಹಿಳೆ ರಸ್ತೆ ಬದಿಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು ಮತ್ತು ಮಗು ಒಂಟಿಯಾಗಿ ತಿರುಗಾಡುತ್ತಿತ್ತು. ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಸಮುದಾಯ ಆದೇಶ (ಕಮ್ಯೂನಿಟಿ ಆರ್ಡರ್ ) ಹಾಗೂ 6,114 ಪೌಂಡ್ಗಳ ದಂಡ ವಿಧಿಸಿದೆ.












