ಸನ್ಮಾರ್ಗ ವಾರ್ತೆ
ಹರಿಯಾಣ: ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಶೂಟರ್ಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಇಬ್ಬರು ಯುವಕರ ಹೆಸರುಗಳು ಬೆಳಕಿಗೆ ಬಂದಿವೆ. ಬರೋಡಾ ಗ್ರಾಮದ ಫೂಲ್ ಸಿಂಗ್ ಮತ್ತು ಸೋನಿಪತ್ನ ಈದ್ಗಾ ಕಾಲೋನಿಯ ರೆಹಾನ್ ಎಂದು ಗುರುತಿಸಲಾಗಿದೆ.
ಫೂಲ್ ಸಿಂಗ್ ಹೆಸರು ಪ್ರಕರಣದಲ್ಲಿ ಕೇಳಿ ಬಂದ ನಂತರ ಅವರ ತಂದೆ ನರೇಶ್ ಪ್ರತಿಕ್ರಿಯಿಸಿದ್ದು ತಮ್ಮ ಮಗ ಗೋಹಾನದಲ್ಲಿ ಕಲ್ಲು ಮತ್ತು ಟೈಲ್ ಕೆಲಸ ಕಲಿಯಲು ಹೋಗುತ್ತಿದ್ದ ಮತ್ತು ಈ ಪ್ರಕರಣದಲ್ಲಿ ಅವರು ಹೇಗೆ ಭಾಗಿಯಾಗಿದ್ದಾರೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಅಪಾದಿತ ಫೂಲ್ ಸಿಂಗ್ ಗೋಹಾನಾದಲ್ಲಿ ವಾಸಿಸುತ್ತಿದ್ದ ಮತ್ತು ಕಲ್ಲು ಮತ್ತು ಟೈಲ್ ಹಾಕುವಿಕೆಯನ್ನು ಕಲಿಯುತ್ತಿದ್ದ ಎನ್ನಲಾಗಿದೆ.
ಟೈಗರ್ ಶ್ರಾಫ್ ಗುಂಡಿನ ದಾಳಿಯಲ್ಲಿ ತಮ್ಮ ಮಗ ಭಾಗಿಯಾಗಿರುವುದನ್ನು ಫೂಲ್ ಸಿಂಗ್ ತಂದೆ ನಿರಾಕರಿಸಿದ್ದಾರೆ ಮತ್ತು ಯಾರಾದರೂ ತಮ್ಮ ಮಗನನ್ನು ದಾರಿ ತಪ್ಪಿಸಿದ್ದಾರೆಯೇ ಎಂದು ತಿಳಿದಿಲ್ಲ ಎಂದು ಹೇಳಿದರು. ಪೊಲೀಸ್ ಕ್ರಮ ಕೈಗೊಂಡಿದ್ದು ಈ ಕುರಿತಂತೆ ಹೆಚ್ಚಿನ ತನಿಖೆಯ ವಿವರಗಳನ್ನು ನಿರೀಕ್ಷಿಸಲಾಗಿದೆ.












