ನಿರಂತರ ಯುದ್ಧ ಮತ್ತು ರಾಜಕೀಯ ಹಿನ್ನಡೆ; ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮುನ್ನಡೆ, ಸಂಕಷ್ಟದಲ್ಲಿ ನೆತನ್ಯಾಹು

0
331

ಸನ್ಮಾರ್ಗ ವಾರ್ತೆ

ಇಸ್ರೇಲ್‌ನ 120 ಸದಸ್ಯರ ಸಂಸತ್ತು ಅಂದರೆ ನೆಸೆಟ್ ಚುನಾವಣೆಯು ಅಕ್ಟೋಬರ್ 27 ರಂದು ನಿಗದಿಯಾಗಿದೆ. ದೇಶದ ರಚನೆಯಾದ 1948 ರಿಂದ, ಇಸ್ರೇಲ್‌ನಲ್ಲಿ 25 ಸರ್ಕಾರಗಳು ಮತ್ತು 14 ಪ್ರಧಾನಿಗಳು ಬಂದಿದ್ದಾರೆ. ಆದ್ದರಿಂದ, ಮುಂಬರುವ ಚುನಾವಣೆಯು ಇಸ್ರೇಲ್‌ಗೆ ನಿರ್ಣಾಯಕವಾಗಿದೆ.

ಅಕ್ಟೋಬರ್ 7, 2023 ರಂದು ಹಮಾಸ್ ಪ್ರತಿ-ದಾಳಿ ಮತ್ತು ಗಾಝಾದಲ್ಲಿ ಫೆಲೆಸ್ತೀನಿಯರನ್ನು ಗುರಿಯಾಗಿಸಿದ ದಾಳಿಗಳ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮೇಲಾಗಿ, 1988 ರ ನಂತರ ಸರ್ಕಾರವೊಂದು ತನ್ನ ಅವಧಿಯನ್ನು ಪೂರ್ಣಗೊಳಿಸಿ ಇಸ್ರೇಲ್‌ನಲ್ಲಿ ಸಂಸತ್ ಚುನಾವಣೆಯನ್ನು ಎದುರಿಸುತ್ತಿರುವುದು ಇದೇ ಮೊದಲ ಭಾರಿಯಾಗಿದೆ.

ಈ ಚುನಾವಣೆಯಲ್ಲಿ ಮತ ಚಲಾಯಿಸಲು ಏಳು ಮಿಲಿಯನ್‌ಗಿಂತಲೂ ಹೆಚ್ಚು ಇಸ್ರೇಲಿ ನಾಗರಿಕರು ಅರ್ಹರಾಗಿದ್ದಾರೆ. 7,331,981 ಇಸ್ರೇಲಿಗರು ಮತ ಚಲಾಯಿಸಲು ಅರ್ಹರು.

ಇದು ಒಟ್ಟು 10,305,000 ಜನಸಂಖ್ಯೆಯ ಶೇಕಡಾ 71.15 ರಷ್ಟಿದೆ. ಇಸ್ರೇಲ್‌ನಲ್ಲಿ ಕೊನೆಯ ಚುನಾವಣೆ 2022 ರಲ್ಲಿ ನಡೆದಿತ್ತು. ಈ ಚುನಾವಣೆಯಲ್ಲಿ 6,788,804 ಅರ್ಹ ಮತದಾರರಿದ್ದರು. ಇದು ಆ ಸಮಯದಲ್ಲಿ ಒಟ್ಟು 9,656,000 ಜನಸಂಖ್ಯೆಯ ಶೇಕಡಾ 70.31 ರಷ್ಟಿತ್ತು.

ವರದಿಗಳ ಪ್ರಕಾರ, ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಮತದಾನವು ಬಹಳ ಹೆಚ್ಚಿತ್ತು. ಈ ಚುನಾವಣೆಯಲ್ಲಿ ಅರ್ಹ ಮತದಾರರ ಪೈಕಿ ಶೇಕಡಾ 70.63 ರಷ್ಟು ಅಂದರೆ 4,794,593 ಜನರು ತಮ್ಮ ಮತಗಳನ್ನು ಚಲಾಯಿಸಿದರು. ಇದರ ಜೊತೆಗೆ, ಇಸ್ರೇಲಿ ನಾಗರಿಕರು ವ್ಯಕ್ತಿಗಳಿಗಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ.

120 ಸ್ಥಾನಗಳ ನೆಸೆಟ್‌ನಲ್ಲಿ ಬಹುಮತ ಸಾಧಿಸಲು 61 ಸ್ಥಾನಗಳ ಅಗತ್ಯವಿದೆ. ಆದಾಗ್ಯೂ, ಯಾವುದೇ ಪಕ್ಷವು ಸ್ವಂತ ಬಲದಿಂದ ಬಹುಮತವನ್ನು ಗೆಲ್ಲಲು ಸಾಧ್ಯವಿಲ್ಲದ ಕಾರಣ, ಒಕ್ಕೂಟ ಸರ್ಕಾರಗಳನ್ನು ರಚಿಸಬೇಕಾಗುತ್ತದೆ. ಪ್ರಸ್ತುತ, ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಸ್ಪರ್ಧೆಯಿದೆ.

ಇದರ ಜೊತೆಗೆ, ಇಸ್ರೇಲಿ ಜನತೆಯ ಒಂದು ವಿಭಾಗವು ಲಿಕ್ಕುಡ್ ಪಕ್ಷ ಮತ್ತು ಅದರ ನಾಯಕರ ವಿರುದ್ಧವೂ ಇದೆ. ಫೆಲೆಸ್ತೀನ್ ವಿರುದ್ಧದ ಯುದ್ಧ, ಸಂಘರ್ಷ, ಅಭದ್ರತೆ ಮತ್ತು ಆರ್ಥಿಕ ಹಿಂಜಿತದಂತಹ ಸಮಸ್ಯೆಗಳು ಇಸ್ರೇಲ್‌ನಲ್ಲಿ ನೆತನ್ಯಾಹುವಿನ ಭವಿಷ್ಯವನ್ನು ನಿರ್ಧರಿಸಲಿವೆ.