✍️ ಇಷಲ್
ಭಾರತದ ವಿರುದ್ಧ ಯುದ್ಧ ಸಾರಲು ಮ್ಯಾನ್ಮಾರ್ ಬಂಡುಕೋರರಿಗೆ ತರಬೇತಿ ನೀಡಿದ್ದ ಏಳು ಮಂದಿ ವಿದೇಶಿ ನಾಗರಿಕರನ್ನು ಕೇಂದ್ರ ಸರಕಾರ ಸದ್ದಿಲ್ಲದೆ ಬಿಡುಗಡೆಗೊಳಿಸುವುದಕ್ಕೆ ಬೇಕಾದ ಏರ್ಪಾಟು ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಮೆರಿಕಾದ ನಾಗರಿಕ ಇದರಲ್ಲಿ ಭಾಗಿಯಾಗಿರುವುದೇ ಕೇಂದ್ರ ಸರಕಾರ ಹೀಗೆ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.
2026 ಮಾರ್ಚ್ 13ರಂದು ಅಮೆರಿಕಾದ ಓರ್ವ ನಾಗರಿಕ ಮತ್ತು ಆರು ಮಂದಿ ಯುಕ್ರೇನ್ ನಾಗರಿಕರನ್ನು ಎನ್ ಐ ಎ ಬಂಧಿಸಿತ್ತು. ಇವರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಇವರು ಅನುಮತಿ ಇಲ್ಲದೆ ಮಿಜೋರಾಂ ಗೆ ಹೋಗಿ ಮ್ಯಾನ್ಮಾರ್ ಗಡಿ ದಾಟಿ ಅಲ್ಲಿನ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಮತ್ತು ಯುದ್ಧ ತರಬೇತಿ ನೀಡಿದ್ದರು ಎಂದು NIA ಆರೋಪಿಸಿತ್ತು. ಈ ಬಂಡುಕೋರ ಗುಂಪುಗಳು ಭಾರತದ ವಿರುದ್ಧ ಭಯೋತ್ಪಾದನಾ ಕೃತ್ಯದಲ್ಲಿ ತೊಡಗುವ ಉದ್ದೇಶವನ್ನು ಬಹಿರಂಗಪಡಿಸಲಾಗಿತ್ತು. ಆದ್ದರಿಂದಲೇ ಈ ಏಳು ಮಂದಿ ಆರೋಪಿಗಳ ಮೇಲೆ ಯುಎಪಿಎ ಪ್ರಕರಣದಡಿ ಕೇಸು ದಾಖಲಿಸಿತು. ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ನಡೆಸಿದ್ದಾರೆ ಎಂಬ ನೆಲೆಯಲ್ಲಿ ಯುಎಪಿ ಏ ಪ್ರಕರಣವನ್ನು NIA ದಾಖಲಿಸಿತ್ತು.
ವಿಚಿತ್ರ ಏನೆಂದರೆ 2026 ಸೆಪ್ಟೆಂಬರ್ ನಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸುವಾಗ ಯುಎಪಿಎ ಕಾಣೆಯಾಗಿತ್ತು. ಕೇವಲ ಅನುಮತಿ ಇಲ್ಲದೆ ಪ್ರವೇಶ ವೀಜಾ ಉಲ್ಲಂಘನೆ ಆರೋಪವನ್ನು ಮಾತ್ರ ಹೊರಿಸಿತು.
ಈ ಅಪರಾಧಗಳು ಗಂಭೀರ ಅಲ್ಲ. ಸುಮಾರು ಐದೂವರೆ ಲಕ್ಷ ರೂಪಾಯಿ ದಂಡ ಪಾವತಿಸಿ ಈ ಪ್ರಕರಣವನ್ನು ಮುಗಿಸಬಹುದು.
ಅಲ್ಲದೆ NIA ಒಂದು ತಂತ್ರವನ್ನು ಹೂಡಿತು. ನಿಗದಿತ ಸಮಯದೊಳಗೆ ಚಾರ್ಜ್ ಶೀಟ್ ಸಲ್ಲಿಸಲಿಲ್ಲ. ಆದ್ದರಿಂದ ನ್ಯಾಯಾಲಯ ಸುಲಭದಲ್ಲಿ ಜಾಮೀನು ನೀಡಿತು. ಹೀಗೆ ಅವರು ತಿಹಾರ್ ಜೇಲಿನಿಂದ ಬಿಡುಗಡೆಗೊಂಡರು. ಇವರಿಗೆ ಒಂದು ತಿಂಗಳ ಕಾಲ ತಮ್ಮ ದೇಶಕ್ಕೆ ಹೋಗಲು ನ್ಯಾಯಾಲಯ ಅನುಮತಿ ನೀಡಿತು.
ಇದಾಗಿ 2026 ಅಕ್ಟೋಬರ್ 23ರಂದು ಅಮೆರಿಕದ ನಾಗರಿಕ ವ್ಯಾನ್ ಡೈಕ್, ಭಾರತಕ್ಕೆ ಬಂದ. ಉಳಿದ ಆರು ಮಂದಿ ಉಕ್ರೇನ್ ನಾಗರಿಕರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯ ಮುಂದಿನ ವರ್ಷದ ಫೆಬ್ರವರಿ 24ರವರೆಗೆ ವಿದೇಶದಲ್ಲಿ ಉಳಿಯಲು ಎಲ್ಲರಿಗೂ ಅನುಮೋದನೆ ನೀಡಿತು.
ಮ್ಯಾನ್ಮಾರ್ ಬಂಡುಕೋರರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡಿದ ಏಳು ಮಂದಿಯನ್ನು ಆರಂಭದಲ್ಲಿ ಬಂಧಿಸಿ ಆ ಬಳಿಕ UAPA ಪ್ರಕರಣವನ್ನೇ ಕೈ ಬಿಟ್ಟು ಮಾಮೂಲು ವೀಸಾ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿ , ಜಾಮೀನು ಸಿಗುವಂತೆ ಮಾಡಿ ಕಳುಹಿಸಿಕೊಟ್ಟದ್ದೇಕೆ ಎಂಬ ಪ್ರಶ್ನೆ ಯನ್ನು ಈಗ ಕೇಳಲಾಗುತ್ತಿದೆ. ಅಮೆರಿಕಾದ ನಾಗರಿಕ ಭಯೋತ್ಪಾದನೆಯ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಈ ರಿಯಾಯಿತಿ ನೀಡಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ. ಅಮೆರಿಕದ ಒತ್ತಡಕ್ಕೆ ಮಣಿದು . ಕೇಂದ್ರ ಸರಕಾರ ಯುಎಪಿಎ ಪ್ರಕರಣವನ್ನು ಕೈಬಿಟ್ಟಿದೆ ಎಂಬ ಆರೋಪವು ಕೇಳಿಬಂದಿದೆ.
ಒಂದು ಕಡೆ ವಿಚಾರಣೆಯೇ ಇಲ್ಲದೆ ಉಮರ್ ಖಾಲಿದ್ ಶರ್ಜಿಲ್ ಇಮಾಮ್ ಅವರನ್ನು ಆರು ವರ್ಷಗಳಿಂದ ಜೈಲಲ್ಲಿ ಇಟ್ಟು ಸತಾಯಿಸಲಾಗ್ತಾ ಇದೆ. ಇನ್ನೊಂದೆಡೆ ಯುಎಪಿಎ ಪ್ರಕರಣವನ್ನೇ ಕೈ ಬಿಟ್ಟು ಆರೋಪಿಗಳನ್ನು ಬಿಡುಗಡೆ ಮಾಡುವುದಕ್ಕೆ ಎನ್ಐಎ ಮುಂದಾಗ್ತಾಯಿದೆ. ಇದು ದೇಶದ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿ ಎಂಬ ಆರೋಪ ಕೇಳಿ ಬಂದಿದೆ.












