ಕೇರಳಂ ರಾಜ್ಯಪಾಲರ ಸಸ್ಯಾಹಾರ ಆದೇಶ ಎಷ್ಟು ಸರಿ?

0
213

✍️ ಅಮಾನ್

ಕೇರಳದ ರಾಜ್ಯಪಾಲರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ತಕ್ಷಣ ಓಂ ಪ್ರಕಾಶ್ ಮಾತುರ್ ಅವರು ಲೋಕ ಭವನದಲ್ಲಿ ಮಾಂಸಹಾರಕ್ಕೆ ನಿಷೇಧ ಹೇರಿದ್ದಾರೆ. ಲೋಕಭವನ್ ಎಂಬುದು ರಾಜ್ಯಪಾಲರ ಭವನವಾಗಿದ್ದು ಈ ಅಡುಗೆ ಮನೆಯಲ್ಲಿ ಮಾಂಸ ಅಥವಾ ಮೀನು ಬೇಯಿಸಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಮಾತ್ರ ಅಲ್ಲ ರಾಜಸ್ಥಾನದಿಂದ ವಿಶೇಷ ಅಡುಗೆಯವರನ್ನು ತಂದು ರಾಜಸ್ಥಾನಿ ಶೈಲಿಯ ಸಸ್ಯಹಾರಿ ಖಾದ್ಯಗಳನ್ನು ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ರಾಜ ಭವನಕ್ಕೆ ಭೇಟಿ ನೀಡುವ ಅತಿಥಿಗಳಿಗೂ ಸಸ್ಯಹಾರವೇ ಆಹಾರವಾಗಿ ಸಿಗುತ್ತದೆ. ಅಡುಗೆ ಮನೆಯ ಆಹಾರ ಮುಖ್ಯವಾಗಿ ರಾಜ್ಯಪಾಲರಿಗೆ, ಅವರ ವೈಯಕ್ತಿಕ ಸಿಬ್ಬಂದಿಗೆ ಮತ್ತು ಕೆಲವು ಆಯ್ದ ಅಧಿಕಾರಿಗಳಿಗೆ ಅತಿಥಿಗಳಿಗೆ ನೀಡಲಾಗುತ್ತದೆ. ಎಲ್ಲವೂ ಇನ್ನು ಮುಂದೆ ಕಡ್ಡಾಯವಾಗಿ ಸಸ್ಯಹಾರ ಮಾತ್ರವೇ ಇರುತ್ತದೆ.

ಸಿಬ್ಬಂದಿಗಳು ಮನೆಯಿಂದ ಆಹಾರ ತರಬಹುದು ಅಥವಾ ಹೊರಗೆ ಹೋಗಿ ತಿನ್ನಬಹುದು ಎಂದು ತಿಳಿಸಲಾಗಿದೆ. ಈ ಹಿಂದಿನ ರಾಜ್ಯಪಾಲರ ಕಾಲದಲ್ಲಿ ಮೀನು ಮಾಂಸ ಖಾದ್ಯಗಳು ಅಡುಗೆ ಮನೆಯಲ್ಲಿ ತಯಾರಾಗುತ್ತಿದ್ದವು.

1972 ರಿಂದ ಆರ್ ಎಸ್ ಎಸ್ ಪ್ರಚಾರಕರಾಗಿ ಕೆಲಸ ಮಾಡಿರುವ ಮಾತುರ್ ಅವರು ತುರ್ತು ಪರಿಸ್ಥಿತಿ ಕಾಲದಲ್ಲಿ ಜೈಲಲ್ಲಿ ಇದ್ದರು. ನಂತರ ಬಿಜೆಪಿ ಸೇರಿದ್ದರು. ರಾಜಸ್ಥಾನ ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿಯಾದ್ರು. ಆ ಬಳಿಕ 2008ರಲ್ಲಿ ರಾಜಸ್ಥಾನ ಬಿಜೆಪಿಯ ಅಧ್ಯಕ್ಷರಾದರು. ಕೇಂದ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. ರಾಷ್ಟ್ರೀಯ ಮಹಾ ಕಾರ್ಯದರ್ಶಿಯಾದ್ರು. ಮಾತ್ರ ಅಲ್ಲ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದರು. ರಾಜಸ್ಥಾನದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ನೇಮಕವಾದರು. ಗುಜರಾತ್ ಮಧ್ಯಪ್ರದೇಶ ಉತ್ತರಾಖಂಡ್ ಮಹಾರಾಷ್ಟ್ರ ಛತ್ತೀಸ್ಗಢ ಮುಂತಾದ ರಾಜ್ಯಗಳಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರ್ ಎಸ್ ಎಸ್ ಕಾಲದಿಂದಲೇ ಇವರಿಗೆ ಸಂಬಂಧ ಇತ್ತು. ಈವರೆಗೆ ಸಿಕ್ಕಿಂ ರಾಜ್ಯಪಾಲರಾಗಿದ್ದ ಇವರು ಅಕ್ಟೋಬರ್ 23ರಂದು ಕೇರಳದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮಾತುರ್ ಅವರ ಕಡ್ಡಾಯ ಸಸ್ಯಹಾರವನ್ನು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿರೋಧಿಸಿವೆ. ಇದು ಸಂಘ ಪರಿವಾರದ ಅಜೆಂಡ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆರೋಪಿಸಿದ್ದಾರೆ. ಕೇರಳವು ವೈದ್ಯಮಯ ಆಹಾರ ಸಂಸ್ಕೃತಿಗೆ ಹೆಸರಾಗಿದೆ, ಇಲ್ಲಿಯ ಆಹಾರ ಮೀನು ಎಂದು ವೇಣುಗೋಪಾಲ್ ಹೇಳಿದ್ದಾರೆ. ಇದೇ ವೇಳೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ, ಗೋವಿಂದನ್ ಅವರು ರಾಜ್ಯಪಾಲರ ಈ ಸಸ್ಯಹಾರ ಆದೇಶವನ್ನು ಪ್ರಶ್ನಿಸಿದ್ದಾರೆ. ವೈಯಕ್ತಿಕ ಆಯ್ಕೆಯನ್ನು ಇತರರ ಮೇಲೆ ಹೇರುವುದು ಸರಿಯಲ್ಲ ಎಂದವರು ಹೇಳಿದ್ದಾರೆ.

ಇನ್ನು ಮುಂದೆ ಕೇರಳ ರಾಜ್ಯಪಾಲರ ಭವನಕ್ಕೆ ಹೋದರೆ ಬರಿ ಸಸ್ಯಹಾರ ಮಾತ್ರ ಸಿಗಲಿದೆ. ರಾಜ್ಯಪಾಲರಿಗಾಗಿ ಅತಿಥಿಗಳು ಅವರ ಆಹಾರ ಕ್ರಮದ ಹೇರಿಕೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ.