ಬಹರೇನ್: ವಲಸಿಗರಿಗಾಗಿ ಆರೋಗ್ಯ ವಿಮೆ

0
174

ಸನ್ಮಾರ್ಗ ವಾರ್ತೆ

ವಲಸಿಗರಿಗಾಗಿ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯು ಬಹರೇನ್ ನಲ್ಲಿ ಅಕ್ಟೋಬರ್ 31 ರಿಂದ ಹಂತ ಹಂತವಾಗಿ ಜಾರಿಗೆ ಬರಲಿದೆ. ಇದು ವಿಮಾ ಕಂಪನಿಗಳ ಮೂಲಕ ಪ್ರಾಥಮಿಕ ಮಾಧ್ಯಮಿಕ ತಜ್ಞ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಒಳಗೊಂಡ ಕಡ್ಡಾಯ ಮೂಲಭೂತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರುತ್ತದೆ.

ಬಹರೇನ್ ನಾಗರಿಕರು ಮನೆ ಕೆಲಸಗಾರರು ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ವಲಸಿಗರು ಮತ್ತು ಅವರ ಅವಲಂಬಿತರಿಗೆ ಪ್ರಸ್ತುತ ಲಭ್ಯವಿರುವ ಆರೋಗ್ಯ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.