ದುಬೈ: 17 ಕೋಟಿ ರೂಪಾಯಿಗೆ ವಾಹನ ನಂಬರ್ ಪ್ಲೇಟ್ ಹರಾಜು

0
275

ಸನ್ಮಾರ್ಗ ವಾರ್ತೆ

ದುಬೈನಲ್ಲಿ ವಾಹನಗಳ ನಂಬರ್ ಹರಾಜು ಎಂಬುದು ಅಲ್ಲಿನ ಶ್ರೀಮಂತಿಕೆಯ ಮೆರೆದಾಟವೂ ಹೌದು. ಇದೀಗ ದುಬೈನಲ್ಲಿ ನಡೆದ 121ನೇ ಮುಕ್ತ ಹರಾಜಿನಲ್ಲಿ ಶ್ರೀಮಂತರು ತಮ್ಮ ಶ್ರೀಮಂತಿಕೆಯನ್ನು ಹರಾಜಿಗೆಟ್ಟಿದ್ದಾರೆ. ಸಿಸಿ 44 ನಂಬರ್ ಪ್ಲೇಟ್ ಅತಿ ಹೆಚ್ಚು ಬೆಲೆಗೆ ಖರೀದಿಗೆ ಒಳಗಾಗಿದೆ.

ಈ ನಂಬರ್ ಪ್ಲೇಟ್ ಅನ್ನು 17 ಕೋಟಿ 37 ಲಕ್ಷ ರೂಪಾಯಿ ಕೊಟ್ಟು ವ್ಯಕ್ತಿ ಖರೀದಿಸಿದ್ದಾರೆ. ಬಿಬಿ18 ನಂಬರ್ ಪ್ಲೇಟ್ 16 ಕೋಟಿ 37 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಬಿಬಿ 80 ಸಂಖ್ಯೆಯ ನಂಬರ್ ಪ್ಲೇಟ್ 17 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಹೀಗೆ ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ ಆಯೋಜಿಸಿದ್ದ ಹರಾಜಿನಲ್ಲಿ ಒಟ್ಟು 170 ಕೋಟಿ 35 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ದುಬೈ ಪ್ರಾಧಿಕಾರ ತಿಳಿಸಿದೆ.

ಹಿಲ್ಟನ್ ದುಬೈ ಅಲ್ ಹಪ್ತೂರ್ ಸಿಟಿಯಲ್ಲಿ ಹರಾಜು ನಡೆದಿದ್ದು ಎರಡು ಮೂರು ನಾಲ್ಕು ಮತ್ತು ಐದು ಅಂಕೆಗಳ ಸಂಯೋಜನೆಯನ್ನು ಒಳಗೊಂಡಿರುವ 60 ವಿಶಿಷ್ಟ ವಾಹನ ನಂಬರ್ ಪ್ಲೇಟ್ ಗಳನ್ನು ಹರಾಜು ಮಾಡಲಾಗಿದೆ.