ಸನ್ಮಾರ್ಗ ವಾರ್ತೆ
ಪಶ್ಚಿಮ ದಂಡೆಯ ಫೆಲಸ್ತೀನ್ ಹಳ್ಳಿಯಲ್ಲಿ ಇಸ್ರೇಲ್ ವಸಾಹತುಗಾರರ ದಾಳಿಕೋರರು ನಡೆಸಿದ ಬೆಂಕಿ ಹಚ್ಚುವ ದಾಳಿಯನ್ನು ಯಹೂದಿ ಭಯೋತ್ಪಾದನೆ ಎಂದು ಇಸ್ರೇಲ್ ಭಾವಿ ಪ್ರಧಾನಿ ಗಾಡಿ ಐಸನ್ ಕೋಟ್ ಹೇಳಿದ್ದಾರೆ. ರಾತ್ರಿಯ ವೇಳೆ ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಯು ಎಲ್ಲಾ ಅರ್ಥದಲ್ಲಿಯೂ ಯಹೂದಿ ಭಯೋತ್ಪಾದನೆ ಮತ್ತು ಅದನ್ನು ಹಾಗೆಯೇ ಕರೆಯಬೇಕು ಎಂದು ಅವರು ಹೇಳಿದ್ದಾರೆ.
ಭಯೋತ್ಪಾದಕ ಗುಂಪುಗಳ ಇಂತಹ ವಿದ್ವ0ಸಕ ಚಟುವಟಿಕೆಗಳು ಈ ಪ್ರದೇಶದಲ್ಲಿ ಶಾಂತಿಯನ್ನು ಭಂಗಗೊಳಿಸುತ್ತವೆ ಮತ್ತು ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುತ್ತವೆ. ಇದು ಇಸ್ರೇಲ್ ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
ರಮಲ್ಲ ಬಳಿಯ ದೀರ್ ಆಸ್ ಸುಡಾನ್ ದೀರ್ ಅಬೂ ಮಶಾಲ್ ಕಾಫರ್ ಮಲಿಕ್ ಮತ್ತು ದಕ್ಷಿಣ ಹೆಬ್ರಾನ್ನ ಪ್ರದೇಶಗಳಲ್ಲಿ ದಾಳಿಗಳು ನಡೆದಿದೆ. 8 ವಾಹನಗಳನ್ನು ಸುಟ್ಟು ಹಾಕಲಾಗಿದೆ. ಮನೆಗಳ ಗೋಡೆಗಳ ಮೇಲೆ ಜನಾಂಗೀಯ ನಿಂದನೆಗಳನ್ನು ಬರೆಯಲಾಗಿದೆ.
ಈ ದಾಳಿಗಳನ್ನು ಐಸನ್ ಕೋಟ್ ತೀವ್ರವಾಗಿ ಟೀಕಿಸಿದ್ದಾರೆ. ಉಗ್ರಗಾಮಿ ಯಹೂದಿ ವಸಾಹತುಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತಾಯಿಸಿದ್ದಾರೆ.












