✍️ ಅರಫಾ ಮಂಚಿ
ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಮಹಾರಾಷ್ಟç ರಾಜಕೀಯದ ತಲ್ಲಣ ಸೃಷ್ಟಿಯಾಗಿದೆ ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಅಮಿತ್ಶಾರ ಗಾಳಕ್ಕೆ ಶರದ್ ಪವಾರ್ ಸಿಗ್ತಾರ? ಮತ್ತು ಅವರ ಸಂಸದರು ಡಿಲಿಮಿಟೇಶನ್ ಮಸೂದೆಯನ್ನು ಬೆಂಬಲಿಸ ಬಹುದಾ ಇದು ಚರ್ಚೆಗಳ ಪ್ರಮುಖ ಪೊಯಿಂಟು. ಅಂದರೆ ಡಿಲಿಮಿಟೇಶನ್ ಪರಿಣಾಮವನ್ನು ಸಂಕ್ಷೇಪಿಸಿ ಹೇಳುವುದಾದರೆ ದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಬಹುಪಾಲು ಬಿಜೆಪಿ ಪ್ರಾಬಲ್ಯ ಇರುವ ಉತ್ತರಭಾರತದ ರಾಜ್ಯಗಳಿಗೆ ಹೋಗುತ್ತಿವೆ. ದಕ್ಷಿಣ ಭಾರತದ ಸಂಸದರ ಸಂಖ್ಯೆ ಈಗಿರುವುದಕ್ಕಿಂತಲೂ ಕಡಿಮೆ ಆಗುತ್ತದೆ. ಹೌದು, ದೇಶವನ್ನು 2050ರ ವರೆಗೆ ತಮ್ಮ ಲಿಮಿಟ್ನಲ್ಲಿರಿಸುವ ಬಿಜೆಪಿಯ ಮಹತ್ವಾಕಾಂಕ್ಷೆಗೆ ಇದು ಅತ್ಯಗತ್ಯ.
ನಿಮಗೂ ಗೊತ್ತು, ಕಳೆದ ಎಪ್ರಿಲ್ನ ಪಾರ್ಲಿಮೆಂಟ್ ಸೆಶನ್ನಲ್ಲಿ ಮೂರು ಮಸೂದೆಗಳ ಗೊಂಚಲು ಮಂಡಿಸಿದ್ದು. ಮಹಿಳಾ ಮೀಸಲಾತಿ, ಕ್ಷೇತ್ರಗಳ ಪುನರ್ವಿಂಗಡಣೆ, ಸಂವಿಧಾನ ತಿದ್ದುಪಡಿ. ಈ ಮಸೂದೆಯನ್ನು ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಮುಖ ಪ್ರತಿಪಕ್ಷ ಪಾರ್ಟಿಗಳು ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯ ಕೂಟ ಸೋಲಿಸಿದ್ದು. ಅಂದಿನ ತಮಿಳ್ನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಸೂದೆ ಪಾಸಾಗದಂತೆ ನೋಡಿ ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮತ್ತು ಅವರು ವಿಪಕ್ಷಗಳನ್ನು ಒಟ್ಟಾಗಿಸಲು ನಿರಂತರ ಶ್ರಮಿಸಿದ್ದು. ಜೊತೆಗೆ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ನಿಲುವು ಮಸೂದೆ ಬಿದ್ದು ಹೋಗುವಲ್ಲಿ ನಿರ್ಣಾಯಕವಾಗಿತ್ತು. ತಮಿಳ್ನಾಡಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸ್ಟಾಲಿನ್ ಈಗ ಯಾವ ನಿರ್ಧಾರ ತೆಗೆದುಕೊಳ್ಳಬಹುದು.
ಬಿಜೆಪಿಯ ಮಹತ್ವಾಕಾಂಕ್ಷೆ ಏನದು?
ತುಂಬ ಸಿಂಪಲ್, ದೇಶವನ್ನು ಸುದೀರ್ಘ ಕಾಲ ತನ್ನ ಲಿಮಿಟ್ನಲ್ಲಿರಿಸುವುದು. ಸಂಘಿ ವಿಚಾರಧಾರೆಯಂತೆ ದೇಶವನ್ನು ತಮ್ಮ ಹಿತಕ್ಕೆ ಬಳಸುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜನರನ್ನು ತಮ್ಮ ಆಶಯಗಳಿಗೆ ಬಗ್ಗಿಸುವುದು ಎಂದೂ ಆಗುತ್ತದೆ. ದೇಶದ ಇತಿಹಾಸ, ಸಂವಿಧಾನದ ಆಶಯ, ಧಾರ್ಮಿಕ ಸೌಹಾರ್ದ ಇವ್ಯಾವುದಕ್ಕೂ ಬಿಜೆಪಿ ಬೆಲೆ ಕೊಡುವುದಿಲ್ಲ. ಇದನ್ನು ಸಂಪೂರ್ಣ ಅಸ್ತಿತ್ವಕ್ಕೆ ತರಲು ಇನ್ನೂ ಒಂದು ಇಪ್ಪತೈದು ವರ್ಷ ಕಾಲಾವಧಿ ಬೇಕಾಗಬಹುದು. ಆದ್ದರಿಂದ ಇವಿಎಂ ಮತ್ತು ಡಿಲಿಮಿಟೇಶನ್ ಬಿಜೆಪಿ ಸರಕಾರ 50 ವರ್ಷಗಳ ವರೆಗೆ ಮುಂದುವರಿಯಲು ಸಾಕು ಎಂಬ ಚರ್ಚೆಗಳು ವಾಸ್ತವಿಕತೆಯತ್ತ ಬೆರಳು ತೋರಿಸುತ್ತಿದೆ ಎನ್ನಬಹುದು. ಈ ಲೆಕ್ಕಾಚಾರ ಏನೇ ಇದ್ದರೂ ಡಿಲಿಮಿಟೇಶನ್ ಬಿಲ್ ಮುಂದಿನ ಚಳಿಗಾಲದ ಪಾರ್ಲಿಮೆಂಟ್ ಸೆಶನ್ನಲ್ಲಿ ಬರುತ್ತೆ ಎಂದು ವರದಿಗಳು ಪ್ರತಿಪಾದಿಸುತ್ತಿವೆ. ವರದಿಗಳ ಆಧಾರದಲ್ಲಿ ಸರಕಾರದ ಅಜೆಂಡ ಪಾಸಾಗಿಸುವುದಕ್ಕೆ ಮಹಾರಾಷ್ಟçದಲ್ಲಿ ಆಟ ಶುರುವಾದದ್ದು ಎಂದು ಹೇಳಬಹುದು.
ದೇಶದ ಒಟ್ಟು ರಾಜಕೀಯ ಪರಿಸ್ಥಿತಿ ಇಂದು ಎಪ್ರಿಲ್ನಂತಿಲ್ಲ. ಮುಖ್ಯವಾಗಿ ತಮಿಳ್ನಾಡಿನ ರಾಜಕೀಯದಲ್ಲಿ ನಟ ವಿಜಯ್ ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಲ್ಲಿ ವಿಜಯ್ ಅನ್ನು ಬೆಂಬಲಿಸುತ್ತಿದೆ. ಪ್ರತಿಕ್ರಿಯೆಯಲ್ಲಿ ಇಂಡಿಯ ಕೂಟದಿಂದ ಡಿಎಂಕೆ ಹೊರಬಂತು. ಮರಾಠ ಸಾಮ್ರಾಟ್ ಶರದ್ ಪವಾರ್ ಅವರ ಎನ್ಸಿಪಿ ಎರಡು ತುಂಡಾಗಿದೆ. ಒಂಬತ್ತು ಸಂಸದರಲ್ಲಿ ಆರು ಮಂದಿ ಶರದ್ಪವಾರ್ ಜೊತೆಗಿರುವುದು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹೋಳಾಗಿದೆ. ಮಮತಾರ 23ರಲ್ಲಿ 20 ಸಂಸದರು ಎನ್ಡಿಎಗೆ ಬೆಂಬಲ ಕೊಡುತ್ತಿದ್ದಾರೆ. ಡಿಲಿಮಿಟೇಶನ್ ಪಾಸು ಮಾಡಿಸಬಹುದು. ಸಮಯ ಸನ್ನಿವೇಶ ತಮಗೆ ಪೂರಕವಾಗಿದೆ ಎಂದು ಬಿಜೆಪಿ ನಿರ್ಧರಿಸಲು ಬಲವಾದ ಕಾರಣ ಇದುವೇ ಆಗಿರುತ್ತದೆ. ಹೇಗೂ ಶರದ್ ಅವರ ಸಹೋದರ ಸಂಬಂಧಿ ದಿವಂಗತ ಅಜಿತ್ ಪವಾರ್ ಅವರ ಎನ್ಸಿಪಿ ಮಹಾರಾಷ್ಟçದಲ್ಲಿ ಬಿಜೆಪಿಯೊಂದಿಗೆ ಸೇರಿ ಸರಕಾರದಲ್ಲಿ ಭಾಗಿಯಾಗಿದೆ. ಅಜಿತ್ ಬಣದಲ್ಲಿ ಮೂವರು ಸಂಸದರು ಇದ್ದಾರೆ, ಬೆಂಲಿಸುತ್ತಾರೆ. ಅಮಿತ್ ಶಾ ದಾಳ ಉರುಳಿಸಿದಕ್ಕೆ 85 ವರ್ಷದ ವಯೋವೃದ್ಧ ಶರದ್ ಮಣಿಯಬಹುದು. ಮಹಾರಾಷ್ಟ್ರದಲ್ಲಿ ಹೀಗೆ ಈ ಪರಿಸ್ಥಿತಿಯನ್ನು ಅವಲೋಕಿಸಿ ಅಮಿತ್ಶಾ ಗೇಮ್ಗಿಳಿದದ್ದು ಎಂದು ಚರ್ಚೆಗಳಿವೆ. ಹೌದು ಸಂವಿಧಾನ ತಿದ್ದುಪಡಿ ಡಿಲಿಮಿಟೇಶನ್ ಪಾಸಾಗಲು ಈಗಿನ ಲೆಕ್ಕದಲ್ಲಿ 3/2ರಷ್ಟು ವೋಟುಗಳು ಬೇಕು. ಕಳೆದ ಸಲ 54 ವೋಟು ಕಡಿಮೆ ಆಗಿದ್ದು. ಅಲ್ಲಿಲ್ಲಿಂದ ವೋಟುಗಳನ್ನು ಅಮಿತ್ ಶಾ ಹೆಕ್ಕಿಕೊಳ್ತಾರಾ? ಈ ಆಟದಲ್ಲಿ, ನೋಡಬೇಕು. ಇನ್ನೊಂದು ಕಡೆ ಎಲ್ಲರೂ ವೋಟು ಹಾಕ್ಬೇಕಂತಿಲ್ಲ. ಮಸೂದೆಯನ್ನು ವೋಟಿಗೆ ಹಾಕುವಾಗ ಕೆಲವರು ಅಧಿವೇಶನಕ್ಕೆ ತಪ್ಪಿಸಿಕೊಂಡರೂ ಆಗುತ್ತದೆ. ಅಥವಾ ಒಟ್ಟು 360 ವೋಟುಗಳು ಪರಬಿದ್ದರೆ ಈ ಮಸೂದೆ ಪಾಸ್ ಆಗುತ್ತದೆ. ಆ ಮೇಲೆ ಮೋದಿ ಅಧಿಕಾರ ಬಿಟ್ಟು ಹೋದರೂ ಬಿಜೆಪಿಯ ಗದ್ದುಗೆ ಅಲುಗಾಡಿಸುವವರಿರುವುದಿಲ್ಲ.
ಶರದ್ ಪವಾರ್ ಬಿಗ್ ಸ್ಟಾಂಡ್:
ಆದರೆ ಶರದ್ ಪವಾರ್ ಅವರನ್ನು ಒಪ್ಪಿ ಸುವುದು ಬಿಜೆಪಿಗೆ ನುಂಗಲಾಗದ ಬಿಸಿ ತುಪ್ಪ. ಅಮಿತ್ ಶಾರ ತಾಳಕ್ಕೆ ಮರಾಠ ಸಾಮ್ರಾಟ್ ಶರದ್ ಹೆಜ್ಜೆ ಹಾಕುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ತಾನು ತಾನು ಕೊನೆ ಉಸಿರಿನವರೆಗೂ ಬಿಜೆಪಿಗೆ ಬೆಂಬಲಿಸುವುದಿಲ್ಲ ಎಂದು ಅವರು ಖಡಾಖಡಿ ನಿಂತಿದ್ದಾರೆ ಎಂದು ಕೆಲವು ವರದಿಗಳು ಇವೆ. ಇದರರ್ಥ ಮೇಲ್ನೋಟದಲ್ಲೇ ಡಿಲಿಮಿಟೇಶನ್ ಪಾಸಾಗುವುದಿಲ್ಲ ಅಂತಲೂ ಆಗುತ್ತದೆ. ಇದೇ ಪವಾರ್, ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಸೇರಿದ್ದಾಗ ಶರದ್ ಪವಾರ್ ಬಣದ ಆರು ಸಂಸದರನ್ನು ತೆಕ್ಕೆಗೆಳೆಯಲು ಮೊದಲು ಅಮಿತ್ ಶಾ ತಂತ್ರ ಹೆಣೆದದ್ದು ಮತ್ತು ವಿಫಲವಾಗಿದ್ದು ವರದಿಯಾಗಿತ್ತು. ಪವಾರ್ ಆರೋಗ್ಯ ಹುಷಾರಿಲ್ಲದ ಸಮಯ ನೋಡಿ ಅವರ ಪಾರ್ಟಿಯನ್ನು ಮತ್ತೊಂದ್ಸಲ ಒಡೆಯುವ ಪ್ರಯತ್ನ ಇದಾಗಿತ್ತು. ಬೇಗ ಬೇಗ ಡಿಸ್ಚಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಮರಳಿದ ಪವಾರ್ ಅವರು ಯಾವತ್ತೂ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆಯೊಂದಿಗೆ ಅಮಿತ್ಶಾರಿಗೆ ಖಡಕ್ ಸಂದೇಶ ಕೊಟ್ಟರು. ಆನಂತರ ಎರಡೂ ಎನ್ಸಿಪಿಗಳ ವಿಲೀನದ ವದಂತಿ ಚರ್ಚೆಯನ್ನು ಮಾಧ್ಯಮಗಳ ಮೂಲಕ ಮುನ್ನೆಲೆಗೆ ಹರಿಯಬಿಟ್ಟದ್ದೆನ್ನಲಾಗುತ್ತಿದೆ.
ಹೌದು, ಡಿಲಿಮಿಟೇಶನ್ ಆಗಲು ಎಷ್ಟು ಬೆಂಬಲ ಇರಬೇಕು:
ಮೊದಲೇ ಹೇಳಿದಂತೆ ಕಳೆದ ಎಪ್ರಿಲ್ನಲ್ಲಿ ಡಿಮಿಲೇಟೇಶನ್ ಸೋಲು ಹೀಗಾಗಿತ್ತು. ಸಂಸತ್ತಿನಲ್ಲಿ ಹಾಜರಿದ್ದ ಸಂಸದರ ಮೂರನೇ ಎರಡು ಬಹುಮತ ಬೇಕಿತ್ತು ಅಂದರೆ ಅಂದು 352 ಸಂದರು ಬೆಂಬಲಿಸ ಬೇಕಿತ್ತು. ಮಸೂದೆಯನ್ನು ಮತಕ್ಕೆ ಹಾಕಿದಾಗ 54 ಮತ ಗಳ ಕಡಿಮೆ ಇದ್ದವು. ಡಿಲಿಮಿಟೇಶನ್ ಮಸೂದೆ ಕಾನೂನು ರೂಪಕ್ಕೆ ಬರಲು ವಿಫಲವಾಯಿತು.
ಡಿಲಿಮಿಟೇಶನ್ಗೆ ದಕ್ಷಿಣ ರಾಜ್ಯಗಳ ವಿರೋಧ ಯಾಕೆ?:
ಹೌದು, ಇದಕ್ಕೆ ಬಲವಾದ ಒಂದು ಕಾರಣ ಇದು, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಂದ ಸಂಸತ್ಸದರ ಸಂಖ್ಯೆ ಕಡಿಮೆ ಆಗುತ್ತದೆ. ಅಂದರೆ ರಾಜಕೀಯ ಪ್ರಾತಿನಿಧ್ಯ ಮತ್ತು ಸಂಸತ್ತಿನಲ್ಲಿನ ಪ್ರಭಾವ ಗಣನೀಯವಾಗಿ ಇಳಿಮುಖಗೊಳ್ಳುತ್ತದೆ. ದಕ್ಷಿಣ ಭಾರತದ ರಾಜ್ಯಗಳು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಹೀಗಾಗಿ ಡಿಲಿಮಿಟೇಶನ್ನು ವಿರೋಧಿಸುತ್ತಿವೆ.
ದಕ್ಷಿಣದ ರಾಜ್ಯಗಳ ಜನರು ಬಹುತೇಕ ಸ್ಟ್ರಿಕ್ಟಿಲಿ ಜನಸಂಖ್ಯಾ ನಿಯಂತ್ರಣ ಮಾಡಿದ್ದಾರೆ. ಈ ನಿರ್ಧಾರದಿಂದಾಗಿ ಜನಸಂಖ್ಯಾಧಾರಿತ ಕ್ಷೇತ್ರ ವಿಂಗಡಣೆ ಅಂದರೆ ಅದು “ಶಿಕ್ಷೆ” ತರ. ಅಂದರೆ ಕಳೆದ 50 ವರ್ಷಗಳಲ್ಲಿ ದಕ್ಷಿಣ ರಾಜ್ಯಗಳು ಕುಟುಂಬ ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿ ಯಾಗಿ ನಿಯಂತ್ರಿಸಿವೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳ ಜನಸಂಖ್ಯೆ ವೇಗವಾಗಿ ಬೆಳೆದಿದೆ. ಈಗ ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಹಂಚಿಕೆ ಮಾಡಿದರೆ.
ಪ್ರಸ್ತುತ ಲೋಕಸಭೆಯ 543 ಸ್ಥಾನಗಳಲ್ಲಿ ದಕ್ಷಿಣ ಭಾರತದ 5 ರಾಜ್ಯಗಳು 129 ಸ್ಥಾನಗಳನ್ನು (ಸುಮಾರು 24%) ಹೊಂದಿವೆ. ಒಂದು ವೇಳೆ ಜನಸಂಖ್ಯೆ ಆಧಾರದಲ್ಲಿ ಲೋಕಸಭೆಯ ಸ್ಥಾನಗಳನ್ನು 850ಕ್ಕೆ ಹೆಚ್ಚಿಸಿದರೆ, ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತವೆ. ಇದರಿಂದ ದಕ್ಷಿಣ ರಾಜ್ಯಗಳ ಸ್ಥಾನಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾದರೂ, ಒಟ್ಟು ಸಂಸತ್ತಿನಲ್ಲಿ ಅವುಗಳ ಶೇಕಡಾವಾರು ಪಾಲು 24% ರಿಂದ ಸುಮಾರು 19% ಕ್ಕೆ ಕುಸಿಯುವ ಅಪಾಯವಿದೆ. ಉತ್ತರ ಭಾರತದ ಕೆಲವೇ ದೊಡ್ಡ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ, ದಕ್ಷಿಣ ಭಾರತದ ರಾಜ್ಯಗಳ ಬೆಂಬಲವಿಲ್ಲದೆಯೇ ಯಾವುದೇ ಪಕ್ಷವು ಕೇಂದ್ರದಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ರಾಷ್ಟ್ರೀಯ ನೀತಿ ನಿರೂಪಣೆಯಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ದುರ್ಬಲವಾಗುತ್ತದೆ ಎಂಬ ಆತಂಕವಿದೆ.
ತೆರಿಗೆ ಹಂಚಿಕೆ ಮತ್ತು ಆರ್ಥಿಕ ಅನ್ಯಾಯ:
ದಕ್ಷಿಣ ರಾಜ್ಯಗಳು ದೇಶದ ಜಿಡಿಪಿ (GDP) ಮತ್ತು ಕೇಂದ್ರದ ತೆರಿಗೆ ಸಂಗ್ರಹಕ್ಕೆ ಅತೀ ಹೆಚ್ಚು ಕೊಡುಗೆ ನೀಡುತ್ತವೆ. ಈಗಾಗಲೇ ಹಣಕಾಸು ಆಯೋಗದ ತೆರಿಗೆ ಹಂಚಿಕೆಯಲ್ಲಿ ಜನಸಂಖ್ಯೆಯನ್ನು ಮಾನದಂಡವಾಗಿ ಬಳಸುವುದರಿಂದ ತಮಗೆ ಕಡಿಮೆ ಅನುದಾನ ಸಿಗುತ್ತಿದೆ ಎಂಬ ಅಸಮಾಧಾನ ದಕ್ಷಿಣ ರಾಜ್ಯಗಳಲ್ಲಿದೆ. ಈಗ ರಾಜಕೀಯ ಪ್ರಾತಿನಿಧ್ಯವೂ ಕಡಿಮೆಯಾದರೆ, ಕೇಂದ್ರದಿಂದ ತಮ್ಮ ಹಕ್ಕಿನ ಅನುದಾನ ಮತ್ತು ಯೋಜನೆಗಳನ್ನು ಪಡೆಯುವುದು ಇನ್ನಷ್ಟು ಕಷ್ಟವಾಗುತ್ತದೆ. ಮೊದಲೇ ಹೇಳಿರುವಂತೆ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ಸ್ಥಾನಗಳು ಕಡಿಮೆಯಾಗುವುದು ಮತ್ತು ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗುವುದು. ಅದು ದೇಶದ ಫ್ಯಾಮಿಲಿ ಫ್ಲಾನಿಂಗ್ಗೆ ಸಹಕರಿಸಿದ ರಾಜ್ಯಗಳಿಗೆ ನೀಡುವ ಶಿಕ್ಷೆ. ಜನ ಸಿಗಬಹುದಾದ ಸೌಲಭ್ಯ ವಂಚಿತರಾಗುತ್ತಾರೆ. ಇದು ಅವರಿಗೂ ಕಾಲಿಗೆ ಗುದ್ದಲಿ ಹಾಕಿಕೊಂಡAತೆ.
ಪ್ರತಿಪಕ್ಷ ಮಸೂದೆ ಸೋಲಿಸಿದ್ದಕ್ಕೆ ರಾಹುಲ್ ಗಾಂಧಿ ಹೇಳಿದ ಕಾರಣಗಳು:
ಡಿಲಿಮಿಟೇಶನ್ ಬಗ್ಗೆ ಸಂಸತ್ತಿನಲ್ಲೇ ಇದು ಮಹಿಳಾ ಮಸೂದೆಯಲ್ಲ. ಇದಕ್ಕೂ ಮಹಿಳಾ ಸಬಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಳೆದ ಎಪ್ರಿಲ್ನಲ್ಲಿ ಹೇಳಿದ್ದು. 2023ರಲ್ಲಿ ಇದೇ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದೆ. ಆದ್ದರಿಂದ ಅದನ್ನು ಡಿಲಿಮಿಟೇಶನ್ಗೆ ಜೋಡಿಸಿದ್ದು ಸರಕಾರದ ಸಂಚು ಎಂದಿದ್ದರು.
ರಾಹುಲ್ ಮಾತು ನಿಜ. ಡಿಲಿಮಿಟೇ ಶನ್ ಸರಕಾರಕ್ಕೆ ಬೇಕು. ಜನರಿಗೆ ಅದು ಅಗತ್ಯವಿಲ್ಲ. ಅವರಿಗೆ ಉದ್ಯೋಗ, ವಸತಿ, ಸಮನಾವಕಾಶ ಮುಂತಾದ ಮೂಲಭೂತ ಹಕ್ಕುಗಳು ನಿರಾಕರಿಸಲ್ಪಡಬಾರದು ಅಷ್ಟೇ. ಆದರೆ ಡಿಲಿಮಿಟೇಶನ್ ಮುಖ್ಯವಾಗಿ ದಕ್ಷಿಣ ರಾಜ್ಯಗಳಿಗೆ ಇದನ್ನೂ ನಿರಾಕರಿಸು ತ್ತಿದೆ. ಬಿಜೆಪಿಯ ಆಡಳಿತ ವಿಧಾನವೇ ಅಲ್ಪಸಂಖ್ಯಾತ ಅದರಲ್ಲೂ ಮುಸ್ಲಿಂ ವಿರೋಧಿ. ಕ್ರೈಸ್ತರು ದಲಿತರನ್ನು ಇವರ ಪಟಾಲಂ ಬಿಟ್ಟಿಲ್ಲ. ದಿನನಿತ್ಯ ಮತಾಂತರ ಗೋಹತ್ಯೆ ಇತ್ಯಾದಿ ಪ್ರವರಗಳ ಮೂಲಕ ಈ ವಿಭಾಗದ ಮೇಲೆ ದಾಳಿ ನಡೆಸಿ ಹದ್ದು ಬಸ್ತಿನಲ್ಲಿಡುವ ಪ್ರಯತ್ನ ನಡೆಯುತ್ತದೆ.
ಇವೆಲ್ಲವೂ ಈಗಲೂ ಡಿಲಿಮಿಟೇಶನ್ ಇಲ್ಲದೆ ನಡೆಯುತ್ತಿದೆ. ಇನ್ನು ಮತದಾರರ ಕ್ಷೇತ್ರಗಳ ಪುನರ್ವಿಂಗಡಣೆ ಆಗಿ ಉತ್ತರದ ರಾಜ್ಯಗಳಿಗೆ ಬಹುಪಾಲು ಸಂಸದಸ್ಯರ ಆಯ್ಕೆ ಅವಕಾಶ ಸಿಕ್ಕರೆ ಬಿಜೆಪಿ ಉಭಯ ಸಂಸತ್ತಿನಲ್ಲಿ ಬಿಜೆಪಿ ಬಹುತೇಕ ಬಹುಮತ ಗಳಿಸುತ್ತದೆ. ಇದು 2050ರ ವರೆಗೂ ಮುಂದುವರಿಯುತ್ತಾ ಹೋದರೆ ದೇಶದ ಭವಿಷ್ಯ? ಹೌದು ಈ ವಿಶೇಷ ಧರ್ಮ ವಿಭಾಗಗಳು ಮೂಲೊತ್ಪಾಟಿಸಲ್ಪಡುವುದು ಖಚಿತ. ಬಿಜೆಪಿ ಸಂಘಪರಿವಾರಕ್ಕೆ ಇದು ಬೇಕು. ಇದಕ್ಕಾಗಿ ಶಾರ ಡಿಲಿಮಿಟೇಶನ್ ಆಟ.
ಕೊನೆಯದಾಗಿ ಹೇಳುವುದಿದ್ದರೆ:
ದೇಶವನ್ನೇ ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸಲು ಸಂವಿಧಾನವನ್ನೇ ನಿರ್ನಾಮ ಮಾಡಲು ಬಿಜೆಪಿಗೆ ಬಿಡಬಾರದು. ದಕ್ಷಿಣ ಭಾರತದ ಹಕ್ಕು ಮೊಟಕುಗೊಳ್ಳಬಾರದು.












