ಹೊಸದಿಲ್ಲಿ, ಆ. 7: ಬಿಜೆಪಿ ನಾಯಕಿ, ಕೇಂದ್ರದ ಮಾಜಿ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ದೇಹ ಸಂಸ್ಕಾರ ಕಾರ್ಯ ಇಂದು ಸಂಜೆ ಮೂರು ಗಂಟೆಗೆ ದಿಲ್ಲಿ ಲೋದಿ ರಸ್ತೆ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.
ಬೆಳಗ್ಗೆ ಹನ್ನೊಂದು ಗಂಟೆಗೆ ದಿಲ್ಲಿ ಜಂತರ್ ಮಂತರ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿ ಅಲ್ಲಿಂದ 12 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಗೆ ತರಲಾಗುವುದು. ಮೂರು ಗಂಟೆಯವರೆಗೆ ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ನಂತರ ಲೋಧಿ ರಸ್ತೆ ವಿದ್ಯುತ್ ಚಿತಾಗಾರದಲ್ಲಿ ಪೂರ್ಣ ಅಧಿಕೃತ ಗೌರವಗಳೊಂದಿಗೆ ಮೃತದೇಹ ಸಂಸ್ಕಾರ ನಡೆಯಲಿದೆ. ಮಂಗಳವಾರ ರಾತ್ರೆ ಹೃದಯಾಘಾತದಿಂದಾಗಿ ದಿಲ್ಲಿಯ ಆಲ್ಇಂಡಿಯ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಸುಷ್ಮಾ ಮೃತಪಟ್ಟಿದ್ದಾರೆ. ಕಿಡ್ನಿ ಶಸ್ತ್ರಕ್ರಿಯೆಗೊಳಗಾದ ಬಳಿಕ ಕೆಲವು ಕಾಲ ಸುಷ್ಮಾ ರಾಜಕೀಯದಿಂದ ದೂರವಿದ್ದರು.












