ಕಾನೂನು ಉಲ್ಲಂಘನೆ ಎಂದು ತಿಳಿದಿದ್ದೂ ರೈಲ್ವೆ ಫ್ಲಾಟ್‍ಪಾರಂಗೆ ಆಟೊ ಚಲಾಯಿಸಿದ ಚಾಲಕ: ಕಾರಣ ಗೊತ್ತಾದರೆ ನೀವು ಸೆಲ್ಯೂಟ್ ಹೊಡೆಯುವಿರಿ-ವೀಡಿಯೊ

0
1106

ಮುಂಬೈ, ಆ. 8: ರೈಲ್ವೆ ಸ್ಟೇಶನ್ ಪ್ಲಾಟ್‍ಪಾಮ್‍ನಲ್ಲಿ ಸಾಗರ್ ಕಿಂಲೇಕರ್ ಗವಾದ್ ಎನ್ನುವ ಆಟೋ ಚಾಲಕ ಆಟೊ ಚಲಾಯಿಸುತ್ತ ಬಂದಾಗ ಎಲ್ಲರೂ ಆಶ್ಚರ್ಯಗೊಂಡಿದ್ದರು. ಇದು ಕಾನೂನು ಉಲ್ಲಂಘನೆ ಎಂದು ತಿಳಿದೇ ಆಟೊ ಚಾಲಕ ಪ್ಲಾಟ್ ಪಾರಂಗೆ ಆಟೋ ಹತ್ತಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ ತಾಯಿ ಮಗುವನ್ನು ರಕ್ಷಿಸುವುದು ಕಾನೂನಿನ ಕುಣಿಕೆಗಿಂತ ದೊಡ್ಡದೆಂದು ಅವರು ತಿಳಿದಿದ್ದರು. ರೈಲಿನಿಂದ ಇಳಿದ ಗರ್ಭಿಣಿಯನ್ನು ಆಟೊದಲ್ಲಿ ಆಸ್ಪತ್ರೆಗೆ ಸಾಗರ್ ಕರೆದುಕೊಂಡು ಹೋದರು. ಮಹಿಳೆಗೆ ಹೆರಿಗೆಯಾಗಿ ತಾಯಿ ಮಗು ಆರೋಗ್ಯದಿಂದಿದ್ದಾರೆ. ಮುಂಬೈನ ವಿರಾರ್ ರೈಲ್ವೆ ಸ್ಟೇಶನ್‍ನಲ್ಲಿ ರವಿವಾರ ಈ ಘಟನೆ ನಡೆದಿದೆ.

ಗರ್ಭಿಣಿಯಾದ ಮಹಿಳೆ ಮತ್ತು ಪತಿ ಪ್ರಯಾಣಿಸಿದ ರೈಲು ವಿರಾರ್ ಗೆ ಬಂತು. ಆಗ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಂಡು ಬಂತು. ವಿಪರೀತ ಮಳೆಯಾದ್ದರಿಂದ ಇವರ ರೈಲು ಮುಂದೆ ಚಲಿಸದೆ ನಿಂತಿತ್ತು. ದಿಕ್ಕೆಟ್ಟ ಪತಿ ಸಹಾಯ ಯಾಚಿಸಿದರು. ಹೊರಗೆ ಬಂದಾಗ ಸಾಗರ್ ರ ಆಟೊ ಹೊರಗೆ ಇತ್ತು. ವಿಷಯದ ಗಂಭೀರತೆ ಅರ್ಥಮಾಡಿಕೊಂಡ ಸಾಗರ್ ಪ್ಲಾಟ್‍ಫಾರಂಗೆ ಆಟೋ ತಂದು ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಿದರು.