ಹೊಸದಿಲ್ಲಿ, ಆ. 8: ಕಾಶ್ಮೀರದ ನಾಯಕರನ್ನು ಭೇಟಿಮಾಡಲು ಬಂದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಹಿಂದಕ್ಕೆ ಕಳುಹಿಸಲಾಗಿದೆ. ಸುರಕ್ಷತೆಯ ಸಮಸ್ಯೆ ಇರುವುದರಿಂದ ದಿಲ್ಲಿಗೆ ಮರಳುವಂತೆ ಅವರಿಗೆ ತಿಳಿಸಲಾಗಿದೆ. ಜಮ್ಮುಕಾಶ್ಮೀರದ ಕಾಂಗ್ರೆಸ್ ನಾಯಕರೊಡನೆ ಮಾತಾಡುವುದಕ್ಕಾಗಿ ಆಝಾದ್ ಬಂದಿದ್ದರು. ಜಮ್ಮು ಕಾಶ್ಮೀರದ ಹೊಸ ಬೆಳವಣಿಗೆಯ ಕುರಿತು ಶ್ರೀನಗರದಲ್ಲಿ ಚರ್ಚಿಸಲು ನಿರ್ಧರಿಸಲಾಗಿತ್ತು. ಜಮ್ಮುಕಾಶ್ಮೀರದ ಜನರು ತುಂಬ ದುಃಖದಲ್ಲಿದ್ದಾರೆ.
ಅವರ ದುಃಖದಲ್ಲಿ ಪಾಲ್ಗೊಳ್ಳುವುದು ಮತ್ತು ಅವರ ಜೊತೆ ಇದ್ದೇವೆ ಎಂದು ತಿಳಿಸಲಿಕ್ಕಾಗಿ ತಾನು ಕಾಶ್ಮೀರಿಕ್ಕೆ ಹೋಗುವುದು. ಇದೇ ಮೊದಲ ಬಾರಿ 22 ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ ಎಂದು ಗುಲಾಂ ನಬಿ ಆಝಾದ್ ಹೇಳಿದರು. ಸುರಕ್ಷಾ ವ್ಯವಸ್ಥೆಯ ಮೇಲ್ನೋಟವನ್ನು ವಹಿಸಲು ಕಾಶ್ಮೀರಕ್ಕೆ ಬಂದಿದ್ದ ಭದ್ರತಾ ಸಲಹೆಗಾರ ಅಜಿತ್ ಢೋವಲ್ ಸಿ ಆರ್ಪಿಎಫ್ ಜವಾನರೊಡನೆ ಇರುವುದು ಮತ್ತು ಸ್ಥಳೀಯರ ಜೊತೆ ಆಹಾರ ಸೇವಿಸುವ ವೀಡಿಯೊ ನಿನ್ನೆ ಹೊರಬಂದಿತ್ತು. ಹಣಕೊಟ್ಟು ಹೀಗೆ ಯಾರೂ ಮಾಡಬಹುದು ಎಂದು ಗುಲಾಂ ನಬಿ ಆಝಾದ್ ಇದಕ್ಕೆ ಪ್ರತಿಕ್ರಿಯಿಸಿದ್ದರು. ಇದು ಕಾಶ್ಮೀರ ತಣ್ಣಗಿದೆ ಎಂದು ತಿಳಿಸುವ ಯತ್ನವಾಗಿದೆ ಎಂದು ಅವರು ಆರೋಪಿಸಿದ್ದರು.












