ಕಪ್ಪುವಂಶೀಯನನ್ನು ಹಗ್ಗದಲ್ಲಿ ಕಟ್ಟಿ ನಡೆದಾಡಿಸಿದ ಅಮೆರಿಕದ ಪೊಲೀಸ್: ಎಲ್ಲೆಡೆ ಖಂಡನೆ

0
632

ವಾಷಿಂಗ್ಟನ್, ಆ. 8: ಅಮೆರಿಕನ್ ಪೊಲೀಸ್ ಕಪ್ಪುವಂಶೀಯ ಯುವಕನನ್ನು ಹಗ್ಗದಲ್ಲಿ ಕಟ್ಟಿ ನಡೆದಾಡಿಸುವ ಚಿತ್ರ ವೈರಲ್ ಆಗಿದೆ. ಅಮೆರಿಕನ್ ಪೊಲೀಸ್ ನ ಇಬ್ಬರು ಅಧಿಕಾರಿಗಳು ಕುದುರೆಯ ಮೇಲೆ ಕುಳಿತು ಒಬ್ಬ ಯುವಕನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಯುವಕನ ಕೈ ಕಟ್ಟಿಡಲಾಗಿದ್ದು ಹಗ್ಗದ ಒಂದು ತುದಿ ಕುದುರೆಯ ಮೇಲೆ ಇರುವ ಒಬ್ಬ ಪೊಲೀಸನ ಕೈಯಲ್ಲಿದೆ. ಬಿಳಿವಂಶದ ಪೊಲೀಸರು ಕಪ್ಪುವಂಶದ ಯುವಕನ ಮೇಲೆ ಈ ರೀತಿ ಕ್ರೌರ್ಯವೆಸಗಿರುವುದು ತೀವ್ರ ವಿವಾದ ಸೃಷ್ಟಿಸಿದ್ದು ಟೆಕ್ಸಾಸ್‍ನ ಗಲ್‍ವೆಸ್ಟರ್ನ್‍ನಲ್ಲಿ ಘಟನೆ ನಡೆದಿತ್ತು.

ಆಫ್ರಿಕನ್ ಅಮೆರಿಕನ್ನರ ಮೇಲೆ ಬಿಳಿವಂಶೀಯರು ನಡೆಸುತ್ತಿದ್ದ ದಾಳಿ ಮತ್ತು ಗುಲಾಮ ಪದ್ಧತಿಯನ್ನು ಈ ಚಿತ್ರ ನೆನಪಿಸುತ್ತಿದೆ ಎಂದು ವ್ಯಾಪಕ ಟೀಕೆ ಹರಿದು ಬಂದಿದೆ. ಚಿತ್ರವು ವಿವಾದಕ್ಕೆ ಕಾರಣವಾದ್ದರಿಂದ ಗಾಲ್‍ವೆಸ್ಟರ್ನ್‍ನ ಪೊಲೀಸ್ ಮುಖ್ಯಸ್ಥರು ಕ್ಷಮಾಪಣೆ ನಡೆಸಿದ್ದು ಇದು ಕೂಡ ಟೀಕೆಗೆ ತುತ್ತಾಯಿತು.

ಡೊನಾಲ್ಡ್ ನೀಲ್ ಎಂಬಾತನ್ನು ಬಂಧಿಸಿದ್ದ ಪೊಲೀಸರು ಆತನ ಕೈಗೆ ಕೋಳ ತೊಡಿಸುವ ಬದಲು ಹಗ್ಗಕಟ್ಟಿದ್ದು ಸರಿಯಲ್ಲ. ಆತನನ್ನು ಕುದುರೆಯಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ಬದಲು ಕಾರಿನಲ್ಲಿ ಕರೆದುಕೊಂಡು ಹೋಗಬೇಕಿತ್ತು ಎಂದು ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥರು ಹೇಳಿದ್ದರು. ಇವರ ಈ ಹೇಳಿಕೆಯನ್ನೇ ಹಲವಾರು ಮಂದಿ ಪ್ರಶ್ನಿಸಿದ್ದಾರೆ.