18 ದಿವಸಗಳಾಗಿಯೂ ಸಚಿವರಿಲ್ಲ; ಯಡಿಯೂರಪ್ಪ ನೇತೃತ್ವದ ಸರಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹ

0
576

ಬೆಂಗಳೂರು,ಎ. 14: ಅಧಿಕಾರಕ್ಕೆ ಬಂದು ಹದಿನೆಂಟು ದಿವಸಗಳು ಕಳೆದರೂ ಸಚಿವ ಸಂಪುಟ ರಚಿಸದೆ ಏಕವ್ಯಕ್ತಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ರಂಗಪ್ರವೇಶಿಸಿದೆ. ಈ ವಿಷಯದಲ್ಲಿ ರಾಜ್ಯಪಾಲ ವಜೂಭಾಯಿವಾಲರವರ ಮೌನಕ್ಕೆ ಕಾಂಗ್ರೆಸ್ ಅತೃಪ್ತಿ ಸೂಚಿಸಿದೆ. ಇಷ್ಟು ದಿನಗಳಾದರು ಸಚಿವ ಸಂಪುಟ ರಚನೆಯಾಗಿಲ್ಲ. ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾವನ್ನು ಹೊರದಬ್ಬಬೇಕೆಂದು ಕಾಂಗ್ರೆಸ್ ವಕ್ತಾರ ಉಗ್ರಪ್ಪ ಹೇಳಿದರು.

ಜುಲೈ 26ಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಸಚಿವರಿಲ್ಲದೆ ಅವರೊಬ್ಬರೇ ರಾಜ್ಯವನ್ನು ಆಳುತ್ತಿದ್ದಾರೆ. ಸಂವಿಧಾನದ ಆಶಯದಂತಿರುವ ಸರಕಾರ ಇದೀಗ ರಾಜ್ಯದಲ್ಲಿ ಇಲ್ಲವಾಗಿದೆ. ಮುಖ್ಯಮಂತ್ರಿಯನ್ನು ಸಚಿವರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಕರ್ನಾಟಕ ನೆರೆಹಾವಳಿಯಿಂದ ಕಂಗೆಟ್ಟಿರುವಾಗ ನೆರೆ ಪರಿಹಾರ ಚಟುವಟಿಕೆಗಳನ್ನು ಏಕೀಕರಿಸುವುದಕ್ಕೂ ಸಚಿವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಉಗ್ರಪ್ಪ ಹೇಳಿದರು.