ಸನ್ಮಾರ್ಗ ವಾರ್ತೆ
ಕೊಲ್ಕತಾ,ಆ.14: ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಭಾರತವನ್ನು’ಹಿಂದೂ ಪಾಕಿಸ್ತಾನ್’ ಮಾಡಲಿದೆ ಎಂದು ವಿವಾದ ಹೇಳಿಕೆ ನೀಡಿದ್ದ ಶಶಿ ತರೂರ್ ವಿರುದ್ಧ ಕೊಲ್ಕತಾ ಕೋರ್ಟು ಆರೆಸ್ಟ್ ವಾರಂಟ್ ಹೊರಡಿಸಿದೆ. ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟಿನಿಂದ ಶಶಿ ತರೂರ್ರವರಿಗೆ ವಾರಂಟ್ ಹೊರಡಿಸಲಾಗಿದೆ.
ಶಶಿ ತರೂರ್ ದೇಶವನ್ನು ಅಪಮಾನಿಸಿದ್ದಾರೆ.ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡಿದ್ದಾರೆ. ಜಾತ್ಯತೀತತೆಯನ್ನು ನಾಶಪಡಿಸಲು ಶ್ರಮಿಸಿದ್ದಾರೆ ಎಂದು ಆರೋಪಿಸಿ ವಕೀಲ ಸುಮೀತ್ ಚೌಧರಿ ಸಲ್ಲಿಸಿದ್ದ ಅರ್ಜಿಯಲ್ಲಿ ಆಗಸ್ಟ್ 14ಕ್ಕೆ ಕೋರ್ಟಿನಲ್ಲಿ ಹಾಜರಿರುವಂತೆ ಕೋರ್ಟು ಆದೇಶ ಹೊರಡಿಸಿತ್ತು. ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ, ರಾಜ್ಯಸಭೆಯಲ್ಲಿ ಬಹುಮತ ಸಿಕ್ಕರೆ ಹೊಸ ಸಂವಿಧಾನ ಅಸ್ತಿತ್ವಕ್ಕೆ ಬರಲಿದೆ ಮತ್ತು ಭಾರತವನ್ನು ‘ಹಿಂದೂ ಪಾಕಿಸ್ತಾನ’ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ತರೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.












