ಇಸ್ರೇಲಿ ಬ್ರಾಂಡ್ ಉತ್ಪನ್ನಗಳನ್ನು ತಿಳಿಯಲು ವೆಬ್ಸೈಟ್ ಆರಂಭಿಸಿದ ದಂಪತಿ: ಇಸ್ರೇಲ್ ಗೆ ಬಿಸಿ

0
920

ಸನ್ಮಾರ್ಗ ವಾರ್ತೆ

ಇಸ್ರೇಲನ್ನು ಬೆಂಬಲಿಸುವ ಬ್ರಾಂಡ್‌ಗಳನ್ನು ತಿಳಿಯುವುದಕ್ಕೆ ನೆರವಾಗುವ ವೆಬ್ಸೈಟ್ ಅನ್ನು ಕಾಶ್ಮೀರಿ ಮೂಲದ ಶೆಹ್ ಝಾದ್ ಮತ್ತು ಫೆಲೆಸ್ತೀನಿ ಮೂಲದ ನಾದಿಯ ಎಂಬ ದಂಪತಿಗಳು ಆರಂಭಿಸಿದ್ದಾರೆ. ಡಿಸ್ ಒಕ್ಯುಪೈಡ್ (“DisOccupied”)  ಎಂಬ ಹೆಸರಲ್ಲಿ ಈ ವೆಬ್ ಸೈಟನ್ನು ಇವರು ಆರಂಭಿಸಿದ್ದು ಗಾಝಾದಲ್ಲಿ ಜನಾಂಗ ಹತ್ಯೆ ನಡೆಸುತ್ತಿರುವ ಇಸ್ರೇಲನ್ನು ಬೆಂಬಲಿಸುವ ಕಂಪೆನಿಗಳ ಉತ್ಪನ್ನಗಳನ್ನು ತಿಳಿಯುವುದಕ್ಕೆ ಜನರಿಗೆ ಇದು ನೆರವಾಗಲಿದೆ ಎಂದು ಹೇಳಿದ್ದಾರೆ.

ಯಾವುದೇ ಬ್ರಾಂಡುಗಳ ಬಗ್ಗೆ ವೆಬ್ಸೈಟ್ ನಲ್ಲಿ ಸರ್ಚ್ ನಡೆಸಿದರೆ ಅದು ಇಸ್ರೇಲನ್ನು ಬೆಂಬಲಿಸುತ್ತದೋ ಇಲ್ಲವೋ ಎಂಬುದನ್ನು ಹೇಳುತ್ತದೆ. ಡೂ ನಾಟ್ ಬೈ ಎಂದು ಬರೆದು ಅದು ತೋರಿಸುತ್ತದೆ ಮಾತ್ರ ಅಲ್ಲ ಇದಕ್ಕೆ ಪರ್ಯಾಯವಾಗಿ ಬೇರೆ ಯಾವ ಉತ್ಪನ್ನವನ್ನು ಖರೀದಿಸಬಹುದು ಎಂದು ಕೂಡ ಅದು ಆಪ್ಷನ್ ನೀಡುತ್ತದೆ.

ಕಳೆದ ವಾರ ಅವರ ಸಂದರ್ಶನ ಪ್ರಸಾರವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿತ್ತು. ತಾವು ಫೆಲಸ್ತೀನಿಯರ ಜೊತೆ ನಿಲ್ಲುವುದಕ್ಕಾಗಿ ಈ ವೆಬ್ ಸೈಟ್ ನಿರ್ಮಿಸಿದ್ದೇವೆ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಇಸ್ರೇಲನ್ನು ಬೆಂಬಲಿಸುವ ಕಂಪನಿಗಳ ಉತ್ಪನ್ನಗಳನ್ನು ಖರೀದಿಸಬೇಡಿ ಎಂದವರು ವಿನಂತಿಸಿದ್ದಾರೆ.

2023 ಅಕ್ಟೋಬರ್ ಏಳರ ಬಳಿಕ ಜಾಗತಿಕವಾಗಿ ಇಸ್ರೇಲ್ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಅಸಂಖ್ಯ ಮಂದಿ ಹಿಂದೇಟು ಹಾಕಿದ್ದಾರೆ ಅಸಂಖ್ಯ ಮಂದಿ ಬಹಿಷ್ಕಾರ ಹೇರಿದ್ದಾರೆ.