ಗಜೇಂದ್ರಗಡ: ಸೌರ್ಹಾದ ಇಫ್ತಾರ್‌ ಕೂಟ

0
212

ಸನ್ಮಾರ್ಗ ವಾರ್ತೆ

ಗಜೇಂದ್ರಗಡ: ಗೋಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸಾಮೂಹಿಕ ಸೌರ್ಹಾದ ಇಫ್ತಾರ್‌ ಕೂಟ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಂ.ಪಂ. ಮಾಜಿ ಅಧ್ಯಕ್ಷರಾದ ಬಸವರಾಜ ಮೂಲಿಮನಿ ಮಾತನಾಡಿ, ರಮಝಾನ್ ಮಾಸವು ಅತ್ಯಂತ ವೈಶಿಷ್ಟ ಪೂರ್ಣವಾದ ಮಾಸವಾಗಿದ್ದು ಮುಸ್ಲಿಮರು ಅತ್ಯಂತ ಪ್ರಾಧಾನ್ಯತೆಯೊಂದಿಗೆ ರಮಝಾನ್ ಉಪವಾಸ ಆಚರಿಸುತ್ತಾರೆ. ಈ ಪ್ರಯುಕ್ತ ನಡೆಯುವ ಇಫ್ತಾರ್‌ ಕೂಟಗಳು ಸಮಾಜಕ್ಕೆ ಸಾಮಾಜಿಕ ಸಾಮರಸ್ಯ ಸಂದೇಶ ಬೀರುವ ಆಚರಣೆಯಾಗಿದೆ. ಇಫ್ತಾರ್‌ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಬೀರಲು ಸಾಧ್ಯ ಎಂದರು.

ಉರ್ದು ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಐ ಬಾಗವಾನ ಅವರು ಮಾತನಾಡಿ ‘ಇಫ್ತಾರ್ ಕೂಟಗಳು ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಬರುವಲ್ಲಿ ಸಹಕಾರಿಯಾಗಿವೆ. ಇಂತಹ ಇಫ್ತಾರ್ ಕೂಟಗಳಲ್ಲಿ ಎಲ್ಲಾ ಹಿಂದೂ ಮುಸ್ಲಿಮರು ಭಾಗವಹಿಸಿ ಸೌಹಾರ್ದತೆ ಬೆಳೆಸುವ ಅಗತ್ಯ ಇದೆ’ ಎಂದರು.

ಶಿಕ್ಷಕ‌ ಆರ್ ಕೆ ಬಾಗವಾನ ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾಜಿಕ ಬದ್ಧತೆಯಲ್ಲಿ ಸೌಹಾರ್ದತೆ ಮೆರೆಯೋಣ, ಸಹೋದರತ್ವ ಮೆರೆಯೋಣ. ವೈಶಿಷ್ಟ ವ್ಯತ್ಯಾಸವಿರುವ ವಿಭಿನ್ನ ಸಮುದಾಯಗಳು ಸೇರಿ ಒಂದು ಸಾಮಾಜಿಕ ಸಾಮರಸ್ಯ ಮತ್ತು ಬದ್ಧತೆಯನ್ನು ಅರಸುವ ನಮ್ಮ ಸಮಾಜವು ವೈವಿಧ್ಯಮಯ ಜನಾಂಗ, ಭಾಷೆ, ಧರ್ಮ ಹಾಗೂ ಸಂಸ್ಕೃತಿಯನ್ನು ಒಳಗೊಂಡಿದೆ ಇವುಗಳಲ್ಲೇ ಒಂದು ಸಮಸ್ಕ್ರತ ನಡವಳಿಕೆ ಮತ್ತು ಭಾಷೆ ಇಲ್ಲದ ವ್ಯಕ್ತಿಗಳು ಒಟ್ಟಾಗಿ ಬಾಳಲು ಸಾಧ್ಯವಿಲ್ಲ. ಈ ಭಿನ್ನತೆಯನ್ನು ಅರಿಯುವುದು ಮತ್ತು ಮೆರೆಯುವುದು ಸಮಾಜಿಕವಾಗಿ ಒಂದು ಅಗತ್ಯ ಪ್ರಯತ್ನ. ಸೌಹಾರ್ದತೆ ಮೆರೆಯೋಣ ಎಂದರು.

ಶೇಖರಪ್ಪ ಎಗರಿ, ಐ ಎಚ್ ಬಾಗವಾನ, ಹುಸೇನಸಾಬ ಬಡಿಗೇರ, ಸಿಂಕದರ್ ಬಾಗವಾನ, ಶಂಕ್ರಯ್ಯ ಮೇಟಿಮಠ, ಕೆ ಕೆ ಬಾಗವಾನ, ಬಸಪ್ಪ ಗುಂಡೆ ಗ್ರಾಂ.ಪಂ. ಸದಸ್ಯರಾದ ಇಮಾಮಸಾಬ ಬಾಗವಾನ, ಗೌಡೇಶ ಗುಂಡೆ, ರುದ್ರೇಶ ಕೆರಿ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here