ರಾಜತಾಂತ್ರಿಕ ಘರ್ಷಣೆ: ಕೆನಡದ ಸ್ಟೂಡೆಂಟ್ ವೀಸಾ ಆಕಾಂಕ್ಷಿಗಳು ಅನಿಶ್ಚಿತ ಸ್ಥಿತಿಯಲ್ಲಿ

0
432

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಭಾರತ ಕೆನಡದ ನಡುವೆ ರಾಜತಾಂತ್ರಿಕ ಸಂಬಂಧ ಕೆಟ್ಟದ್ದರಿಂದ ಕೆನಡದಲ್ಲಿ ಸ್ಟೂಡೆಂಟ್ ವೀಸಾಕ್ಕೆ ಅರ್ಜಿ ಸಲ್ಲಿಸುವುದು, ಅದು ಸ್ವೀಕಾರಗೊಳ್ಳುವ ವಿಚಾರದಲ್ಲಿ ಕಾಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಭಾರತದ ವಿದ್ಯಾರ್ಥಿಗಳಿಗೆ ರಾಜತಾಂತ್ರಿಕ ಘರ್ಷಣೆ ಹೆಚ್ಚು ಬಾಧಕಗೊಳ್ಳಲಿದೆ.

ಹಲವು ಭಾರತೀಯ ವಿದ್ಯಾರ್ಥಿಗಳು ಕೆನಡದ ವಿವಿಧ ವಿಶ್ವವಿದ್ಯಾನಿಲಯ, ಕಾಲೇಜುಗಳಲ್ಲಿ ಕಲಿಯುತ್ತಿದ್ದು ಖಾಲಿಸ್ತಾನದ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ರ ಕೊಲೆಯಿಂದ ಭಾರತ ಕೆನಡದ ನಡುವೆ ಪರಸ್ಪರ ರಾಜತಾಂತ್ರಿಕ ಹೊಯ್ದಾಟ ಶುರುವಾಗಿದೆ.

ಸೋಮವಾರ ಕೆನಡ ಭಾರತದ ವಿದೇಶ ಸಚಿವ ಮೆಲಾನಿ ಜೋಳಿ ಭಾರತದ ರಾಜತಾಂತ್ರಿಕರಿಗೆ ಕೂಡಲೇ ಕೆನಡ ಬಿಟ್ಟು ತೆರಳು ಸೂಚಿಸಿದ್ದೇನೆ ಎಂದು ಘೋಷಿಸಿದರು. ನಂತರ ಮಂಗಳವಾರ ಮುಂದಿನ ಐದು ದಿನಗಳಲ್ಲಿ ದೇಶ ತೊರೆಯಲು ಕೆನಡದ ಉನ್ನತ ರಾಜತಾಂತ್ರಿಕನಿಗೆ ಭಾರತವೂ ಹೇಳಿದೆ.

ಇದೇ ವೇಳೇ ನಿಜ್ಜಾರ್ ರ ಕೊಲೆಯಲ್ಲಿ ತನ್ನ ಪಾತ್ರ ಇದೆ ಎಂಬ ಕೆನಡದ ಪ್ರಧಾನಿ ಹೇಳಿಕೆಯನ್ನು ಭಾರತ ತಳ್ಳಿ ಹಾಕಿದೆ. ಕೆನಡದ ವಿಶ್ವವಿದ್ಯಾಲಯದಲ್ಲಿ ಕಲಿಯಲು ಯೋಜನೆ ರೂಪಿಸಿದ್ದ ಭಾರತದ ವಿದ್ಯಾರ್ಥಿಗಳಿಗೆ ಈ ರಾಜತಾಂತ್ರಿಕ ಒರೆಸಾಟ ಅಡಚಣೆಯಾಗಿ ಪರಿಣಮಿಸಿದೆ. ಇವರೀಗ ಬದಲಿ ಸಾಧ್ಯತೆಯನ್ನು ಹುಡುಕುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೆನಡದ ವರ್ಷ ಬಜೆಟ್ಟಿನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಗಣನೀಯ ಕೊಡುಗೆ ಕೊಡುತ್ತಾ ಬಂದಿದೆ. ಈಗ ಈ ಅವಕಾಶ ಭಾರತದ ವಿದ್ಯಾರ್ಥಿಗಳು ಕಳಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.