ಮುಂಬೈ: ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್ ಮೇಲೆ ಯುವಕನೊಬ್ಬ ಕಲ್ಲು ಎಸೆದ ಘಟನೆ ನಡೆದಿದೆ. ಬಿಜೆಪಿ ಸರ್ಕಾರದ ವಿಕಸಿತ ಭಾರತ್ ಕಾರ್ಯಕ್ರಮದ ಪೋಸ್ಟರ್ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ನಾಗಪುರದ ಚಂದ್ರಮಣಿ ಬಸ್ ನಿಲ್ದಾಣದಲ್ಲಿ ಹಾಕಲಾಗಿದ್ದ ಪೋಸ್ಟರ್ ಮೇಲೆ ಯುವಕ ಕಲ್ಲು ತೂರಾಟ ನಡೆಸಿದ್ದಾನೆ. ತಾನು ಪ್ರಯಾಣಿಸುತ್ತಿದ್ದ ಬೈಕ್ ನಿಲ್ಲಿಸಿದ ಬಳಿಕ ಮೂವತ್ತರ ಆಸುಪಾಸಿನವರಂತೆ ಕಾಣುತ್ತಿದ್ದ ಯುವಕ ಮೋದಿ ಹಾಗೂ ಬಿಜೆಪಿ ನಾಯಕರಿರುವ ಪೋಸ್ಟರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಮೋದಿಯವರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯವೂ ದೃಶ್ಯಾವಳಿಗಳಲ್ಲಿ ಕಂಡು ಬರುತ್ತಿದೆ.
ಘಟನೆಯ ನಂತರ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಹಿತೇಂದ್ರ ಪಿಟಾಡಿಯಾ ಅವರು ಮೋದಿಯನ್ನು ಟೀಕಿಸಿದ್ದು, ಈ ವೀಡಿಯೊ ಪೊಸ್ಟ್ ಮಾಡಿ ಪ್ರಧಾನಿಯ ವಿರುದ್ಧ ಜನರ ವಿರೋಧ ಎಂದು ಬರೆದುಕೊಂಡಿದ್ದಾರೆ.
https://x.com/HitenPithadiya/status/1740067597855654191?s=20












