ಸನ್ಮಾರ್ಗ ವಾರ್ತೆ-
ಲಕ್ನೊ, ಜ.10: ಉತ್ತ ರಪ್ರದೇಶದ ವಾರಣಾಸಿ ಸಂಸ್ಕøತ ವಿಶ್ವವಿದ್ಯಾನಿಲಯದ ಯೂನಿಯನ್ ಚುನಾವಣೆಯಲ್ಲಿ ಎಬಿವಿಪಿಗೆ ಭಾರೀ ಆಘಾತವಾಗಿದೆ. ಚುನಾವಣೆ ನಡೆದ ನಾಲ್ಕು ಸೀಟುಗಳನ್ನು ಎನ್ಎಸ್ಯು(ಐ) ಗೆದ್ದುಕೊಂಡಿತು. ಪ್ರಧಾನಿ ನರೇಂದ್ರ ಮೋದಿಯ ಸ್ವಕ್ಷೇತ್ರ ವಾರಣಾಸಿಯಲ್ಲಿ ಎಬಿವಿಪಿಗೆ ಭಾರೀ ಹಿನ್ನಡೆಯಾಗಿದೆ.
ಎನ್ಎಸ್ಯು(ಐ) ಅಭ್ಯರ್ಥಿಗಳಾದ ಶಿವಂ ಶುಕ್ಷ ಅಧ್ಯಕ್ಷರಾಗಿ, ಚಂದನ್ ಕುಮಾರ್ ಮಿಶ್ರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅವನೀಶ್ ಪಾಂಡೆ ಪ್ರಧಾನ ಕಾರ್ಯದರ್ಶಿ ಮತ್ತು ರಜನೀ ಕಾಮತ್ ದುಬೆ ಲೈಬ್ರರಿಯನ್ ಆಗಿ ಆಯ್ಕೆಯಾದರು.
ಎಬಿವಿಪಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಕ್ಯಾಂಪಸ್ನಲ್ಲಿ ಘರ್ಷಣೆ ಸಾಧ್ಯತೆಯಿದ್ದು ವಿಜಯಾಚರಣೆಯನ್ನು ಮಾಡಬಾರದೆಂದು ಅಧಿಕಾರಿಗಳು ಸೂಚಿಸಿದ್ದಾರೆ. ವಿಜಯಿಗಳನ್ನು ಪೊಲೀಸ್ ರಕ್ಷಣೆಯಲ್ಲಿ ಅವರ ಮನೆಗಳಿಗೆ ತಲುಪಿಸಲಾಗಿದೆ.












