ಸನ್ಮಾರ್ಗ ವಾರ್ತೆ
ಪಾಕಿಸ್ತಾನದ ಸಿಂಧ್‌ನಲ್ಲಿರುವ ಐತಿಹಾಸಿಕ ಪ್ರಸಿದ್ಧ ತಾಣವಾದ ಮೊಹೆಂಜೋದಾರೊದ ಪಶ್ಚಿಮ ಭಾಗದಲ್ಲಿ ತಾಮ್ರದ ನಾಣ್ಯಗಳಿಂದ ತುಂಬಿದ ಪಾತ್ರೆ ಪತ್ತೆಯಾಗಿದೆ.
ಸಂಶೋಧನಾ ತಂಡದ ಪ್ರಕಾರ, ತಾಮ್ರದ ನಾಣ್ಯಗಳಿಂದ ತುಂಬಿದ ಮಣ್ಣಿನ ಮಡಕೆಯನ್ನು ಬೌದ್ಧ ದೇವಾಲಯದಲ್ಲಿ ನಿರ್ಮಿಸಲಾದ ಗುಮ್ಮಟಾಕಾರದ ಸ್ತೂಪದಲ್ಲಿ ಸಿಕ್ಕಿರುವುದಾಗಿ ಸಂಶೋದಕರ ತಂಡ ಹೇಳಿದೆ.
500 ವರ್ಷ ಹಳೆಯ ಮೊಹಂಜಾದಾರೊ ನಗರದ ಅವಶೇಷಗಳಿಂದ 93 ವರ್ಷಗಳ ನಂತರ ಮುಖ್ಯ ಪ್ರಾಚ್ಯ ವಸ್ತು ಸಿಕ್ಕಿದೆ. ಐದೂವರೆ ಕಿಲೊ ನಾಣ್ಯಗಳು ಸಿಕ್ಕಿದ್ದು, 1930ರಲ್ಲಿ ಇಲ್ಲಿ 4,348 ತಾಮ್ರದ ನಾಣ್ಯಗಳು ಪತ್ತೆಯಾಗಿದ್ದವು ಎಂದು ಸಂಶೋಧನಾ ತಂಡದ ಸದಸ್ಯ ಶೇಖ್ ಜಾವೇದ್ ಸಿಂಧಿ ತಿಳಿಸಿದರು.
ಈ ನಾಣ್ಯಗಳನ್ನು ಬೇರ್ಪಡಿಸಲು ಒಂದು ತಿಂಗಳು ಬೇಕು. ಮೊದಲು ಸಿಕ್ಕಿದ್ಧ ನಾಣ್ಯಗಳು ಕುಶಾನ ರಾಜರದ್ದಾಗಿದೆ. ಕುಶಾನರಿಗೂ ಈ ನಗರಕ್ಕೂ ವ್ಯಾಪಾರ ರಾಜತಾಂತ್ರಿಕ ಸಾಂಸ್ಕೃತಿಕ ಸಂಬಂಧ ಇತ್ತೆಂಬುದಕ್ಕೆ ತಾಮ್ರದ ನಾಣ್ಯಗಳು ಪುರಾವೆಯಾಗಿದೆ. ಮೊದಲು ಸಿಕ್ಕಿದ ನಾಣ್ಯಗಳು ಕುಶಾನ ರಾಜ ಒಂದನೆಯ ವಾಸುದೇವನ ಕಾಲದ ನಾಣ್ಯಗಳಾಗಿವೆ.