ಜೋಷಿಮಠದ ಬಳಿಕ ಆಲಿಗಢದ ಮನೆಗಳಲ್ಲಿಯೂ ಬಿರುಕು: ಸ್ಥಳೀಯರಲ್ಲಿ ಆತಂಕ

0
335

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಖಂಡದ ಜೋಷಿಮಠದಲ್ಲಿ ಭೀತಿ ಸೃಷ್ಟಿಸಿದ ಭೂಕುಸಿತಕ್ಕೆ ಸಮಾನವಾದ ಘಟನೆ ಅಲಿಗಢದಲ್ಲಿಯೂ ಘಟಿಸುತ್ತಿದೆ. ಆಲಿಗಢದ ಕನ್‍ವಾರಿಗಂಜ್‍ನ ಮನೆಗಳಲ್ಲಿ ಈಗ ಬಿರುಕು ಬಿಟ್ಟಿವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಕೆಲವು ಮನೆಗಳಲ್ಲಿ ಬಿರುಕು ಕಂಡು ಬರುತ್ತಿದೆ. ಮುನ್ಸಿಪಲ್ ಕಾರ್ಪೊರೇಷನ್‍ಗೆ ತಿಳಿಸಿದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರು ಮನೆಗಳು ಕುಸಿದು ಬೀಳುವ ಭೀತಿಯ ನಡುವೆಯೇ ಜೀವನ ನಡೆಸುತ್ತಿದ್ದಾರೆ.

ರಾಜ್ಯ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಬೃಹತ್ ಪೈಪ್‍ಗಳನ್ನು ಹೂಳುತ್ತಿದೆ. ಈ ಪೈಪ್‍ಗಳ ಕಾರಣದಿಂದ ಮನೆಗಳಲ್ಲಿ ಬಿರುಕು ಸೃಷ್ಟಿಯಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಕನ್‍ವಾರಿಗಂಜ್ ಪ್ರದೇಶದಲ್ಲಿನ ಕೆಲವು ಮನೆಗಳಲ್ಲಿ ಬಿರುಕು ಕಂಡು ಬಂದಿದ್ದು, ನಾವು ಪರಿಶೀಲನೆ ‌ನಡೆಸಿದ್ದೇವೆ ಎಂದು ಪೌರ ಸಮಿತಿ ತಿಳಿಸಿದೆ. ಜೊತೆಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಸಮಿತಿ ತಿಳಿಸಿದೆ.