ಅಹಮದಾಬಾದ್ ವಿಮಾನ ದುರಂತ: ಎಸ್.ಐ.ಓ ಸಂತಾಪ

0
1006

ಸನ್ಮಾರ್ಗ ವಾರ್ತೆ

ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ ಎಂದು ಎಸ್ ಐ ಓ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಹಫೀಝ್ ಹೇಳಿದ್ದಾರೆ.

ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ ಹಲವಾರು ಮುಗ್ಧ ಜೀವಗಳನ್ನು ಪ್ರಾಣ ಕಳೆದುಕೊಂಡಿರುವುದು ಪದಗಳಿಗೆ ನಿಲುಕದಷ್ಟು ಹೃದಯವಿದ್ರಾವಕವಾಗಿದೆ ಎಂದ ಅವರು, ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ದುಃಖಿತ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಅಪಘಾತ ಸ್ಥಳದ ದೃಶ್ಯಗಳು ನೋವಿನಿಂದ ಕೂಡಿದ್ದು, ತಮ್ಮ ಪ್ರೀತಿಪಾತ್ರರ ಸುದ್ದಿಗಾಗಿ ಕಾಯುತ್ತಿರುವವರ ಸಂಕಟವನ್ನು ನಾವು ಊಹಿಸಬಲ್ಲೆವು. ಸರ್ಕಾರವು ಸಂಪೂರ್ಣ ತನಿಖೆ ಮತ್ತು ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಈ ದುಃಖದ ಸಮಯದಲ್ಲಿ SIO ಬಾಧಿತ ಕುಟುಂಬದ ಜತೆ ನಿಲ್ಲುವುದರ ಜತೆ ಪ್ರಾರ್ಥಿಸುವುದಾಗಿ ಅವರು ಹೇಳಿದರು.