ಸನ್ಮಾರ್ಗ ವಾರ್ತೆ
ಟೆಹ್ರಾನ್: ಇಸ್ರೇಲ್ ವಾಯುಪಡೆಯು ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಶುಕ್ರವಾರ ಮುಂಜಾನೆ ಟೆಹ್ರಾನ್ ನ ಈಶಾನ್ಯದಲ್ಲಿ ಸ್ಫೋಟಗಳು ವರದಿಯಾಗಿವೆ ಎಂದು ಇರಾನ್ ನ ಸರ್ಕಾರಿ ಸ್ವಾಮ್ಯದ ನೂರ್ ನ್ಯೂಸ್ ದೃಢಪಡಿಸಿದೆ.
ಅಮೆರಿಕದ ಇಬ್ಬರು ಅಧಿಕಾರಿಗಳು ‘ಇಸ್ರೇಲ್ ಇರಾನ್ ನಲ್ಲಿ ದಾಳಿಗಳನ್ನು ನಡೆಸಿದೆ’ ಎಂದು ರಾಯಿಟರ್ಸ್ಗೆ ದೃಢಪಡಿಸಿದ್ದಾರೆ. ಈ ದಾಳಿಯಲ್ಲಿ ಅಮೆರಿಕ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಇಸ್ರೇಲ್ ಇರಾನ್ ಮೇಲೆ ದಾಳಿಯ ನಂತರ ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಡ್ಜ್ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಶೀಘ್ರದಲ್ಲೇ ಇಸ್ರೇಲ್ ಮತ್ತು ಅದರ ನಾಗರಿಕರನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕ್ಯಾಟ್ಸ್ ಎಚ್ಚರಿಸಿದ್ದಾರೆ.
ಇಸ್ರೇಲ್ನೊಂದಿಗೆ ಹೆಚ್ಚಿದ ಉದ್ವಿಗ್ನತೆಯ ನಂತರ, ದೇಶದ ವಾಯು ರಕ್ಷಣಾ ವ್ಯವಸ್ಥೆಯು ಸಂಪೂರ್ಣ ಎಚ್ಚರಿಕೆಯಿಂದಿದೆ ಎಂದು ಇರಾನ್ ನ ಅಧಿಕೃತ ದೂರದರ್ಶನವು ವರದಿ ಮಾಡಿದೆ.
ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕ್ಯಾಬಿನೆಟ್ ಮಟ್ಟದ ಸಭೆಯನ್ನು ಕರೆಯಲಿದ್ದಾರೆ ಎಂದು CNN ವರದಿ ಮಾಡಿದೆ.
ಇರಾನಿನಲ್ಲಿ ಹೆಚ್ಚುತ್ತಿರುವ ಪರಮಾಣು ಪುಷ್ಟಿಕರಣ ಕಾರ್ಯಕ್ರಮದ ಕುರಿತು ರವಿವಾರ ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಒಮಾನ್ ನಲ್ಲಿ ಆರನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದ ಮಧ್ಯೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯು ಗಂಭೀರ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ.












