ಚೀನಾಗೆ ಹಲವು ಗುರಿಗಳಿರಬಹುದು; ರಕ್ಷಣಾ ಸಚಿವರು ಸ್ಪಷ್ಟಪಡಿಸಬೇಕು- ಮಾಜಿ ರಕ್ಷಣಾ ಸಚಿವ

0
495

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.16: ಲಡಾಕಿನ ಗೊಲ್ವಾನ್ ಕಣಿವೆಯಲ್ಲಿ ಚೀನದಾಳಿ ನಡೆಸಿದ್ದರಲ್ಲಿ ಹಲವು ಗುರಿಗಳಿರಬಹುದು ಎಂದು ಮಾಜಿ ರಕ್ಷಣಾ ಸಚಿವ ಕಾಂಗ್ರೆಸ್ ನಾಯಕ ಎಕೆ ಆಂಟನಿ ಹೇಳಿದರು. ಪೂರ್ವ ಲಡಾಕಿನ ಚೀನದ ಭಾಗದಿಂದ ದಾಳಿ ನಡೆದಿದ್ದು, ಇದರ ಹಿಂದೆ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬ ಸಂದೇಹವಿದೆ ಎಂದು ಆಂಟನಿ ಹೇಳಿದರು. ಮಾಜಿ ರಕ್ಷಣಾ ಸಚಿವ ಎಂಬ ನೆಲೆಯಲ್ಲಿ ಸರಕಾರದ ಸ್ಪಷ್ಟನೆ ಬರುವ ಮೊದಲು ಹೆಚ್ಚು ಮಾತು ಆಡುವಂತಿಲ್ಲ. ಅಧಿಕೃತ ವಿವರಣೆ ಬಂದ ನಂತರ ಏನಾದರೂ ಹೇಳಲು ಸಾಧ್ಯವಿದೆ.

ಭಾರತದ ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುವುದು ಮಾತ್ರ ಚೀನದ ಪ್ರಚೋದನೆಯ ಉದ್ದೇಶ ಎಂದು ಭಾವಿಸುವುದಿಲ್ಲ. ಗಡಿಯಲ್ಲಿ ನಿನ್ನೆ ನಡೆದ ಘರ್ಷಣೆಯ ಸತ್ಯಾಂಶಗಳನ್ನು ಪ್ರಧಾನಿ ಅಥವಾ ರಕ್ಷಣಾ ಸಚಿವರು ಬಹಿರಂಗಪಡಿಸಬೇಕಿದೆ. 1975ರ ನಂತರ ಭಾರತ-ಚೀನ ಗಡಿಯಲ್ಲಿ ಸೈನಿಕರ ನಡುವೆ ಪರಸ್ಪರ ಘರ್ಷಣೆಯ ಸ್ಥಿತಿ ಇದ್ದರೂ ಸಾವು ಸಂಭವಿಸಿರಲಿಲ್ಲ. ಈಗ ಗಡಿಯಲ್ಲಿ ವಾರಗಳಿಂದ ಘರ್ಷಣೆಯ ಸ್ಥಿತಿ ಇದೆ. ಚೀನದ ಸೇನೆ ತಂತ್ರಪ್ರಧಾನವಾದ ಭಾರತದ ಪ್ರದೇಶಗಳಿಗೆ ದಾಟಿ ಬಂದಿವೆ. ಶಾಂತಿಯುತ ಪರಿಹಾರದ ಯತ್ನ ನಡೆಯುತ್ತಿದೆ ಎಂದು ಆಂಟನಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.