ಅಮೆರಿಕದಲ್ಲಿ ಪ್ರತಿಭಟನೆ ತೀವ್ರವಾಗಿದ್ದು ಹೀಗೆ- ಇದಕ್ಕೇ

0
323

ಸನ್ಮಾರ್ಗ ವಾರ್ತೆ

ಅರಫಾ ಮಂಚಿ

ಕಪ್ಪು ವರ್ಣೀಯರ ವಿರುದ್ಧ ಪೊಲೀಸರ ಬೇಟೆಯನ್ನು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕೆಂಟಕಿಯ ಲೂಯಿಸ್ ವಿಲ್ಲದಲ್ಲಿ ಪೊಲೀಸರ ಗುಂಡಿಗೆ ಏಳು ಮಂದಿ ಗಾಯಗೊಂಡರು. ಒಬ್ಬನ ಆರೋಗ್ಯ ಸ್ಥಿತಿ ಚಿಂತಾನಜನಕವಾಗಿತ್ತು. ಮಾರ್ಚ್ 13 ರಂದು 26 ವರ್ಷದ ಬ್ರಿಯಾನ ಟೇಲರ್ ಎಂಬ ಮಹಿಳೆಯ ಮನೆಗೆ ನುಗ್ಗಿ ಪೊಲೀಸರು ಗುಂಡು ಇಟ್ಟು ಕೊಂದರು. ಎಮರ್ಜೆನ್ಸಿ ಮೆಡಿಸಿ ನ್ ಕ್ಷೇತ್ರದ ತಜ್ಞೆ ಬ್ರಿಯಾನ. ಮಧ್ಯರಾತ್ರೆ ನುಗ್ಗಿದ ಪೊಲೀಸರು ತುರತುರನೆ ಗುಂಡು ಹಾರಿಸಿದ್ದಾರೆ. ಎಂಟು ಬುಲೆಟ್‍ಗಳು ಆಕೆಯ ದೇಹವನ್ನು ನುಗ್ಗಿತ್ತು. ಮನೆಯಲ್ಲಿ ಮಾದಕ ವಸ್ತು ಇಟ್ಟಿದ್ದಾರೆಂಬ ಒಂದು ಆರೋಪದಡಿಯಲ್ಲಿ ಇವೆಲ್ಲ ನಡೆದುದು. ಆದರೆ ಅವರ ಮನೆಯಲ್ಲಿ ಎಷ್ಟೇ ಹುಡುಕಾಡಿದರೂ ಅದು ಸಿಕ್ಕಿಲ್ಲ. ಅಂದರೆ, ಪೊಲೀಸರು ಕೇವಲ ಜನಾಂಗೀಯ ದ್ವೇಷಕ್ಕಾಗಿ ಮಹಿಳೆಯ ಕಪ್ಪು ಬಣ್ಣಕ್ಕಾಗಿ ಗುಂಡಿನ ಮಳೆಗೆರೆದರು.

ತದನಂತರ ಜಾರ್ಜ್ ಫ್ಲಾಯ್ಡ್ ಹತ್ಯೆ. ಪೊಲೀಸರು ಕೊರಳು ಅಮುಕಿ ಕೊಂದುದು. ಅಮೆರಿಕದ ಪೊಲೀಸರು ಅರೆಸ್ಟ್ ಮಾಡುವು ದೆಂದರೆ ನೆಲಕ್ಕೆ ಮಗುಚಿ ಹಾಕಿ ಕೊರಳಿಗೆ ಮೊಣಕಾಲು ಇಟ್ಟು ಅದುಮುವುದು ಎಂದು ತಿಳಿದಂತಿದೆ. ಹೀಗೆ ಉಸಿರುಗಟ್ಟಿಸಿ ಫ್ಲಾಯ್ಡ್‍ರನ್ನು ಅವರು ಕೊಂದರು. ಕಪ್ಪು ವರ್ಣೀಯರ ವಿರುದ್ಧ ಹಲವು ಬಿಳಿ ವರ್ಣೀಯರಿಗೆ ಆಕ್ರೋಶ ಕೋಪ ತಾಪ ಎಲ್ಲ ಅಲ್ಲಿ ಇದೆ. ಅಮೆರಿಕದಲ್ಲಿ ಬಿಳಿಯರೇ ಹೆಚ್ಚು. ಕಪ್ಪು ಬಣ್ಣದವರ ಸಂಖ್ಯೆ 14% ಅಷ್ಟೇ. ಭಾರತದಲ್ಲಿ ಮುಸ್ಲಿಮರಿದ್ದಂತೆ ಅಲ್ಲಿ ಕಪ್ಪು ಬಣ್ಣದವರು ಎಂದು ತಿಳುವಳಿಕೆಗಾಗಿ ಇಲ್ಲಿ ಹೇಳಬಹುದು.

ಹಾಗಿದ್ದರೆ ಕಪ್ಪು ವರ್ಗದವರಿಗೆ ಮರಣ ದಂಡನೆಯೇ. ಬ್ರಿಯಾನಾ ಎಮರ್ಜೆನ್ಸಿ ಮೆಡಿಸಿನ್ ಕ್ಷೇತ್ರದಲ್ಲಿ ತಜ್ಞೆ. ನಾರ್ಕೋಟಿಕ್ ಸೆಲ್‍ನವರು ಮಹಿಳೆಯನ್ನು ಅನ್ಯಾಯವಾಗಿ ಕೊಂದು ಹಾಕಿ ದರು. ಇದನ್ನು ಪ್ರತಿಭಟಿಸಿ 600ರಷ್ಟು ಮಂದಿ ಕೆಂಟಕಿಯ ಮುಖ್ಯ ನಗರ ಲೂಯಿಸ್ ವಿಲ್ಲದ ಪೊಲೀಸ್ ಠಾಣೆಗೆ ಮೆರವಣಿಗೆ ಮಾಡಿದ್ದರು. ಪೊಲೀಸರು ಅವರ ಮೇಲೆ ಲಾಠಿ ಬೀಸಿದರು. ಅಶ್ರುವಾಯು ಸಿಡಿಸಿದರು. ಒಬ್ಬಳನ್ನು ಸಾಯಿಸಿದ ಪೊಲೀಸರು ಮತ್ತೆ ಕೆಲವರನ್ನು ಸಾಯಿಸಬಹುದು ಎಂಬ ಧೈರ್ಯ ತಂದು ಕೊಂಡದ್ದು ಅಮೆರಿಕದಲ್ಲಿ ಜನಾಂಗೀಯ ಮೇಲ್ಮೈಯ ಮೇರುತ್ವ ಎಲ್ಲಿಗೆ ತಲುಪಿನಿಂತಿದೆ ಎಂಬುದನ್ನು ತಿಳಿಸುತ್ತದೆ. ಕ್ರೈಸ್ತರೇ ಹೆಚ್ಚು ಅಮೆರಿಕದಲ್ಲಿರುವುದು. ಅವರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ವಂಶೀಯ ಪಾಪ ಎಂದೇ ಇದನ್ನು ಹೇಳುತ್ತಾರೆ. ಆದರೆ ಅದನ್ನು ಜನಾಂಗೀಯವಾದಿಗಳು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಗೆ ಬಿಡುತ್ತಾರೆ ಮತ್ತು ಕಪ್ಪು ಬಣ್ಣದವರು, ಮುಸ್ಲಿಮರು ಸಿಕ್ಕರೆ ದೌರ್ಜನ್ಯ ಮಾಡುತ್ತಾರೆ. ಇಂತಹ ವಾದಿಗಳು ಪೊಲೀಸ್ ನಂತಹ ಜನರ ಸುರಕ್ಷೆಯ ಇಲಾಖೆಗಳೊಳಗೆ ನುಸುಳಿದ್ದಾರೆ. ಈಗ ಇಂತಹ ವಾದಗಳವರೇ ಜಗತ್ತಿನ ಆಯ ಕಟ್ಟಿನಲ್ಲಿ ಕೂತಿದ್ದಾರೆ. ನಮ್ಮ ಭಾರತವೂ ಇದಕ್ಕೆ ಹೊರತಲ್ಲ. ಇವರದ್ದೆಲ್ಲ ಅಮಾನವೀಯ ವಾದ. ಮನುಷ್ಯರನ್ನು ಮತ್ತು ಮನುಷ್ಯತ್ವವನ್ನು ಗೌರವಿಸದ ಕ್ರೂರಿಗಳು. ಪೋಪ್ ಹೇಳಿದರೆಂದು ಇವರು ಶಾಂತವಾಗುವ ಕುಲವಲ್ಲ.

ಜಾರ್ಜ್ ಪ್ಲಾಯ್ಡ್ ಕೊಲೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕಗೊಂಡಿದೆ. ಪ್ರತಿ ಭಟನಾಕಾರರು ಮಿನಿಯ ಪೊಲೀಸ್ ಠಾಣೆಗೆ ಬೆಂಕಿಯಿಟ್ಟರು. ಪ್ರತಿಭಟನೆಯನ್ನು ವರದಿ ಮಾಡಲು ಬಂದ ಸಿಎನ್‍ಎನ್ ಪತ್ರಕರ್ತ ಒಮರ್ ಜಿಮೆನೆಸ್‍ರಿಗೆ ಲೈವ್ ಆಗಿ ಪ್ರತಿಭಟನೆ ವರದಿ ಮಾಡಿರುವುದಕ್ಕೆ ಪೊಲೀಸರು ಕೋಳ ತೊಡಿಸಿದರು. ಪೋಟೊ ಜರ್ನಲಿಸ್ಟ್ ಪ್ರೊಡ್ಯೂಸರ್ ರನ್ನೂ ಆರೆಸ್ಟ್ ಮಾಡಲಾಗಿತ್ತು. ವರದಿಗಾರರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಕೋಳ ತೊಡಿಸು ತ್ತಿರುವ ದೃಶ್ಯಗಳೂ ಹೊರಬಂದಿವೆ.

ಜನಾಂಗೀಯ ದ್ವೇಷ ಅಮೆರಿಕದಲ್ಲಿ ಎತ್ತರ ಸ್ಥಾಯಿಯಲ್ಲಿದೆ. ಅದಕ್ಕೆ ಒಂದು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅವರು ಗಲಾಟೆ ತಡೆಯುವ ಬದಲು ಬಲಪ್ರಯೋಗಿಸುವ ಮಾತಾಡಿದ್ದೇ ಹೆಚ್ಚು. ಆಯಾ ರಾಜ್ಯಗಳು ಅಲ್ಲ ಲ್ಲಿನ ಪ್ರತಿಭಟನೆಯನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಸೇನೆಯನ್ನು ಇಳಿಸುವೆ ಎನ್ನುವ ಟ್ರಂಪ್‍ಗೆ ವಾಷಿಂಗ್ಟನ್ ಮೇಯರ್ ಸರಿಯಾದ ಉತ್ತರವನ್ನೇ ಕೊಟ್ಟರು. ಟ್ರಂಪ್‍ರ ಸೇನೆಗೆ ನಮ್ಮಲ್ಲಿ ಜಾಗ ಇಲ್ಲ. ಹೌದು ಅನ್ಯಾಯ ಮಾಡಿ, ಮತ್ತೂ ಅನ್ಯಾಯವನ್ನೇ ಮಾಡುವೆ ಎಂದು ಹೇಳಿದರೆ ಅಧ್ಯಕ್ಷನಾದರೇನೂ ಪೊಲೀಸನಾದರೇನೂ ಅದನ್ನು ಲೆಕ್ಕಿಸಬೇಕಿಲ್ಲ ಎಂಬುದು ಮೇಯರ್ ಅಭಿ ಪ್ರಾಯ ವಾಗಿರಬಹುದು. ಆದರೂ ಅಲ್ಲಿ ಸೇನೆ ಬೀದಿಗಳಿ ದಿದೆ. ನಮ್ಮ ಸಂಗಡಿಗರಿಂದ ಫ್ಲಾಯ್ಡ್ ಕೊಲೆಯಾಗಿ ದ್ದಕ್ಕೆ ಅಮೆರಿಕದ ಪೊಲೀಸರು ಪ್ರತಿಭಟನಾಕಾರರ ಮುಂದೆ ಮೊಣಕಾಲೂರಿ ಕ್ಷಮೆಯಾಚಿಸಿದ್ದಾರೆ. ಹಾಗಂತ ಪ್ರತಿಭಟನೆ ತಣ್ಣಗಾಗಿಯೂ ಇಲ್ಲ. ಅಮೆರಿಕದಲ್ಲಿ ಈಗಲೂ ಕಪ್ಪು ವರ್ಗದವರಿಂದ ಪ್ರತಿಭಟನೆ ಆಗುತ್ತಿದೆ. ಕಪ್ಪು ವರ್ಣೀಯರು ಮರಣ ದಂಡನೆ ವಿಧಿಸುವುದಕ್ಕಿರುವವರಲ್ಲ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದಾರೆ. ಬಣ್ಣದ, ಧರ್ಮದ ಆಧಾರದಲ್ಲಿ ಕೊಲ್ಲುವ ಕೆಲಸಕ್ಕೆ ಆಡಳಿತ ಯಂತ್ರವೇ ಇಳಿದರೆ ಆಡಳಿತ ಚುಕ್ಕಾಣಿ ಹಿಡಿದವರು ಟ್ರಂಪ್‍ರಂತೆ ಸಮರ್ಥಿಸಿ ಕೊಂಡರೆ ಪರಿಸ್ಥಿತಿ ಕೈಮೀರಿ ಹೋದೀತು.

ಅಮೆರಿಕ ಪೊಲೀಸರಿಗೆ ತರಬೇತಿ ಇಸ್ರೇಲಿನಿದ್ದಿರ ಬಹುದು. ಕೊಲ್ಲು ಕೊಲ್ಲು ಕೊಲ್ಲು. ಅಮೆರಿಕ ಪ್ರಜಾಪ್ರಭುತ್ವ ದೇಶವೇ ಆದರೂ ಸರಕಾರ, ಪೊಲೀಸರು, ಸೇನೆ, ಧರ್ಮ, ವಂಶೀಯ ಉಗ್ರವಾದಿಗಳು ಸೇರಿ ಅಲ್ಲಿಯೂ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಲಿಂಚಿಂಗನ್ನೂ ಮಾಡುತ್ತಿದ್ದಾರೆ. ಇಷ್ಟೆಲ್ಲ ರಾದ್ಧಾಂತ ಆಗಿಯೂ ಕಪ್ಪು ವರ್ಣೀಯ ರನ್ನು ಪ್ರತಿನಿಧಿಸಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ. ಕಪ್ಪು ಬಣ್ಣದವರಿಗೆ ಬದುಕಲು ಹಕ್ಕಿಲ್ಲ ಎಂಬ ನಿಲುವನ್ನು ವೈಟ್ ಸುಪ್ರೀಮಿಸಿಸ್ಟ್‍ಗಳು, ಜನಾಂಗೀಯ ವಾದಿಗಳು ಮತ್ತು ಕೆಲವು ಕಾನೂನು ಪಾಲಕರು ಹೊಂದಿದ್ದಾರೆ. 2014ರಲ್ಲಿ ಮಿಶೆಲ್ ಬ್ರೌನ್ ಎಂಬ ಯುವಕನನ್ನು ಕೊಂದ ಅದೇ ಜನಾಂಗೀಯವಾದಿ ಪೊಲೀಸರು ಜಾರ್ಜ್ ಫ್ಲಾಯ್ಡ್‍ರನ್ನು ಉಸಿರುಗಟ್ಟಿಸಿ ಕೊಂದರು. ಜಾರ್ಜ್ ಫ್ಲಾಯ್ಡ್ ಅನ್ನು ಜಗತ್ತೇ ಎತ್ತಿಕೊಂಡಿದೆ. ಇದೇ ವೇಳೆ ಫೆಲಸ್ತೀನಿನಲ್ಲಿ ಓಟ್ಟಿಸಂ ಪೀಡಿತ ಒಬ್ಬ ಯುವಕನನ್ನು ಝೀಯೋನಿಸ್ಟ್ ಜನಾಂಗಿಯ ವಾದಿ ಪೊಲೀಸರು ನಿಷ್ಠುರವಾಗಿ ಕೊಂದು ಹಾಕಿದ್ದಾರೆ. ಮೂವತ್ತೆರಡು ವರ್ಷದ ಇಯಾದ್ ರೌಹಿ ಅಲ್ ಹಲಾಕ್‍ನಿಗಿದ್ದಿದ್ದು ಕೇವಲ ಆರು ವರ್ಷದ ಬಾಲಕನ ಮಾನಸಿಕ ಸ್ಥಿತಿಯಾಗಿತ್ತು.

ಜರುಸಲೇಮಿನ ಲಯನ್ಸ್ ಗೇಟ್ ಏರಿಯದಲ್ಲಿ ಇಯಾದ್‍ನ ಹತ್ಯೆಯಾಯಿತು. ಇಯಾದ್‍ನ ಕೈಯಲ್ಲಿ ಪಿಸ್ತೂಲಿನಂತಹದ್ದಿತ್ತು ಎಂದು ನಂತರ ಸ್ಪಷ್ಟೀಕರಣ ಬಂತು. ತಮ್ಮ ಕೊಲೆಗೆ ಅವರು ತರುವ ಇಂತಹ ಹಲವು ಸಮರ್ಥನೆಗಳಿವೆ. ಫ್ಲಾಯ್ಡ್‍ಗೂ ಅವರು ಮಾದಕ ವ್ಯಸನಿ ಎಂದು ಚಿತ್ರಿಸಲು ಹೊರಟು ಸೋತರು. ಅಮೆರಿಕದಲ್ಲಿ ಪೊಲೀಸ ರಾಟ ನಡೆಯಲಿಲ್ಲ. ಈ ಜನಾಂಗೀಯ ಮೇಲ್ಮೈಯ ವ್ಯಸನ ಇದೆಯಲ್ಲ ಕೊರೊನಾ ರೋಗಕ್ಕಿಂತಲೂ ಅಪಾಯಕಾರಿ. ಅದು ಅಮೆರಿಕ ದಲ್ಲೂ ಇದೆ. ಭಾರತದಲ್ಲೂ ಇದೆ. ವಾದ ಎತ್ತಿಕೊಂಡು ಹೋಗುವವರು ಸತ್ಯದ ಎದುರು ನಿಲ್ಲಲಾಗದಾಗ ದಮನಕ್ಕಿಳಿಯುತ್ತಾರೆ. ಅಂತಿಮ ವಾಗಿ ನಾಶವಾಗುವುದು ಅವರೇ. ಹಾಗಂತ ಪವಿತ್ರ ಕುರ್‍ಆನ್ ಶಿಕ್ಷಣವಿದೆ.

ಓದುಗರೇ, sanmarga ಪೇಜ್ ಅನ್ನು Like ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.