ವೆಸ್ಟ್‌ಬ್ಯಾಂಕ್‌: ಇಸ್ರೇಲ್ ಸೇನಾ ಗುಂಡಿನ ದಾಳಿಗೆ ಅಲ್ ಜಝೀರಾ ಪತ್ರಕರ್ತೆ ಬಲಿ

0
333

ಸನ್ಮಾರ್ಗ ವಾರ್ತೆ

ವೆಸ್ಟ್ ಬ್ಯಾಂಕ್: ಅಲ್ ಜಝೀರಾ ವರದಿಗಾರ್ತಿ ಶರೀನ್ ಅಬು ಅಕ್ಲೆ ಎಂಬವರನ್ನು ವೆಸ್ಟ್‌ಬ್ಯಾಂಕಿನಲ್ಲಿ ಇಸ್ರೇಲಿನ ಸೇನಾ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ವೆಸ್ಟ್‌ಬ್ಯಾಂಕ್ ಇಸ್ರೇಲ್ ಅತಿಕ್ರಮಿತ ಫೆಲಸ್ತೀನ್ ಪ್ರದೇಶವಾಗಿದ್ದು ಇಲ್ಲಿ ಪತ್ರಕರ್ತೆಯನ್ನು ಇಸ್ರೇಲ್ ಹತ್ಯೆ ಮಾಡಿದ ವಿವರವನ್ನು ಫೆಲಸ್ತೀನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೃತ ಪತ್ರಕರ್ತೆ ಫೆಲಸ್ತೀನಿನವರು. ಕೊಲೆ ಮಾಡಲಾದ ಪರಿಸ್ಥಿತಿಯನ್ನು ಈಗ ತಿಳಿಸುವುದಿಲ್ಲ. ಆದರೆ ಶರೀನ್‍ರ ತಲೆಗೆ ಗುಂಡು ಗುರಿಯಿಡುತ್ತಿರುವ ದೃಶ್ಯಗಳು ಇದೆ ಎಂದು ಅಲ್‍ ಜಝೀರಾ ಸುದ್ದಿ ಚ್ಯಾನೆಲ್ ತಿಳಿಸಿದೆ. ಅತಿಕ್ರಮಿತಿ ವೆಸ್ಟ್‌ಬ್ಯಾಂಕಿನ ಉತ್ತರದ ಜೆನಿನಿಯಲ್ಲಿ ಇಸ್ರೇಲ್ ದಾಳಿ ಮಾಡಿದೆ. ಪತ್ರಕರ್ತೆ ವರದಿ ಮಾಡುತ್ತಿರುವ ವೇಳೆ ಈ ಕ್ರೂರ ಕೃತ್ಯವನ್ನು ಎಸಗಿದೆ ಎಂದು ರಮಲ್ಲಾದ ಅಲ್‍ ಜಝೀರಾ ವರದಿಗಾರ್ತಿ ನಿದಾ ಇಬ್ರಾಹೀಂ ತಿಳಿಸಿದರು. 2000 ಸಹೋದ್ಯೋಗಿಗಳನ್ನು ಈ ಘಟನೆ ಕಂಪಿಸುವಂತೆ ಮಾಡಿದೆ ಎಂದು ಅವರು ಹೇಳಿದರು.

ಇನ್ನೊಬ್ಬ ಪತ್ರಕರ್ತನಿಗೆ ಇಸ್ರೇಲ್ ಸೇನೆಯ ಗುಂಡು ತಗುಲಿದೆ. ಜೆರುಸಲೇಮ್ ಕೇಂದ್ರ ಕಚೇರಿಯಿರುವ ಅಲ್‍ಖುದ್ಸ್ ದಿನಪತ್ರಿಕೆ ವರದಿಗಾರ ಅಲಿ ಸಮೌದಿ ಎಂಬವರಿಗೆ ಗುಂಡು ತಗಲಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.