ಆರೋಗ್ಯ| ಸೊಳ್ಳೆ ಬತ್ತಿ, ಲಿಕ್ವಿಡ್‌ ಬಳಕೆಯಿಂದ ಅಡ್ಡ ಪರಿಣಾಮ: ಉಸಿರಾಟಕ್ಕೆ ತೊಂದರೆಯಾಗಬಹುದು ಎಚ್ಚರ!

0
1009

ಸನ್ಮಾರ್ಗ ವಾರ್ತೆ

ಸೊಳ್ಳೆಗಳ ಕಾಟದಿಂದ ಪಾರಾಗಲು ವಿವಿಧ ಕಂಪೆನಿಗಳ ವಿವಿಧ ವಸ್ತುಗಳು ಮಾರುಕಟ್ಟೆಯಲ್ಲಿವೆ. ಸೊಳ್ಳೆಗಳನ್ನು ಓಡಿಸಲು ಸೊಳ್ಳೆಬತ್ತಿ ಸೊಳ್ಳೆ ಓಡಿಸುವ ಮಿಷಿನ್, ದುಬಾರಿ ಸೊಳ್ಳೆ ಔಷಧ ಇತ್ಯಾದಿಗಳನ್ನು ಜನರು ಬಳಸುತ್ತಿರುತ್ತಾರೆ.

ಹಾಗಂತ ಸೊಳ್ಳೆಗಳ ಮೇಲೆ ಇವು ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಗೊತ್ತಿಲ್ಲ. ಆದರೆ ಅದನ್ನು ಬಳಸುವವರ ಆರೋಗ್ಯದ ಮೇಲಂತೂ ಇವು ಖಂಡಿತ ಕೆಟ್ಟ ಪರಿಣಾಮ ಬೀರುತ್ತಲೇ ಇದೆ ಎಂಬುದು ದೃಢವಾಗಿದೆ.

ಸೊಳ್ಳೆ ಕಾಟದಿಂದ ಪಾರಾಗಲು ಬಳಸುವ ಉತ್ಪನ್ನಗಳ ಹೊಗೆಯಿಂದ ನಿಮ್ಮ ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ.

ಸೊಳ್ಳೆ ನಿವಾರಕ ಸುರುಳಿಗಳು ಮತ್ತು ಅಗರಬತ್ತಿಗಳಲ್ಲಿ ಕ್ಯಾನ್ಸರ್ ಕಾರಕ ಪದಾರ್ಥಗಳಿವೆ. ಇದರಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ. ಅಲ್ಲದೆ ನೀವು ಮುಚ್ಚಿದ ಕೋಣೆಯಲ್ಲಿ ಸೊಳ್ಳೆಬತ್ತಿ ಯನ್ನು ಬಳಸುತ್ತಿದ್ದರೆ ಅದರ ಹೊಗೆಯೂ ಸಿಗರೇಟುಗಳನ್ನು ಉಸಿರಾಡುವುದಕ್ಕೆ ಸಮಾನವಾಗಿರುತ್ತದೆ.

ಅಲ್ಲದೆ ಈಗ ಹಲವು ಬಗೆಯ ವಸ್ತುಗಳು ಮಾರುಕಟ್ಟೆಗೆ ಬಂದಿದೆ ಅವುಗಳಲ್ಲಿ ಯಾವುದೇ ಹೊಗೆ ಇಲ್ಲ. ಆದರೆ ಅದರಿಂದ ಬಹಳಷ್ಟು ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ.

ಹಾಗೆ ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಕೂಡ ಅಪಾಯಕಾರಿ. ಮುಚ್ಚಿದ ಕೋಣೆಯಲ್ಲಿ ಯಂತ್ರದಿಂದ ಹೊರಬರುವ ವಾಸನೆಯನ್ನು ನಾವು ಉಸಿರಾಡುವಾಗ ಶ್ವಾಸಕೋಶಕ್ಕೆ ಅದು ಹಾನಿ ತಟ್ಟುತ್ತಲೇ ಇರುತ್ತದೆ. ಆದ್ದರಿಂದ ಇವೆಲ್ಲಕ್ಕಿಂತ ಸೊಳ್ಳೆ ಪರದೆಗಳು ಹೆಚ್ಚು ಉತ್ತಮ ಎಂದು ಹೇಳಲಾಗುತ್ತಿದೆ.