ಅಲ್‍ ಜಝೀರದ ಗಾಝಾ ಚೀಫ್ ವಾಇಲ್ ಅಲ್ ದಹ್‍ದೂಹ್‍ರಿಗೆ ಕೇರಳ ಮೀಡಿಯ ಅಕಾಡಮಿಯ ಪರ್ಸನ್ ಆಫ್ ಇಯರ್ ಪ್ರಶಸ್ತಿ

0
332

ಸನ್ಮಾರ್ಗ ವಾರ್ತೆ

ಕೊಚ್ಚಿ: ಕೇರಳ ಮೀಡಿಯ ಅಕಾಡಮಿಯ ‘ಪರ್ಸನಲ್ ಆಫ್ ದಿ ಇಯರ್’ ಪ್ರಶಸ್ತಿಯು ಅಲ್ ಜಝೀರದ ಗಾಝ ಬ್ಯೂರೊ ಚೀಫ್ ವಾಇಲ್ ದಹ್‍ದೂಹ್ ಅವರಿಗೆ ಸಂದಿದೆ.

ಒಂದು ಲಕ್ಷ ರೂಪಾಯಿ ಪ್ರಶಸ್ತಿ ಪತ್ರ ಮತ್ತು ಫಲಕನ್ನೊಳಗೊಂಡ ಪ್ರಶಸ್ತಿ ಇದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕೇರಳದಿಂದ ಈ ಪ್ರಶಸ್ತಿ ಅಮೂಲ್ಯವಾದುದು ಎಂದು ದಹ್‍ದೂಹ್ ತಿಳಿಸಿರುವುದಾಗಿ ಮೀಡಿಯ ಅಕಾಡಮಿ ಅಧ್ಯಕ್ಷ ಆರ್.ಎಸ್.ಬಾಬು ತಿಳಿಸಿದ್ದಾರೆ.

ಡಿಸೆಂಬರ್‌ನಲ್ಲಿ ಖಾನ್ ಯೂನಿಸ್‍ನ ವಿಶ್ವಸಂಸ್ಥೆಯ ಶಾಲೆಯ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿ ಅಲ್ಲಿ ವರದಿ ಮಾಡುತ್ತಿದ್ದ ವಾಇಲ್‍ರು ಗಾಯಗೊಂಡಿದ್ದರು. ದಾಳಿಯಲ್ಲಿ ಅವರ ಕ್ಯಾಮರಾಮೆನ್ ಸಾಮಿರ್ ಅಬೂದಖ ಕೊಲ್ಲಲ್ಪಟ್ಟಿದ್ದರು. ವಾಇಲ್ ದಹ್‍ದೂಹ್‍ರ ಪತ್ನಿ ಮಕ್ಕಳು ಸಹೋದ್ಯೋಗಿಗಳನ್ನು ಇಸ್ರೇಲ್ ಬೇರೆ ಬೇರೆ ದಾಳಿಯಲ್ಲಿ ಕೊಲೆ ಮಾಡಿತ್ತು.

ಪ್ರೀತಿ ಪಾತ್ರರೆಲ್ಲರೂ ಕೊಲ್ಲಲ್ಪಟ್ಟರೂ ಅಪಾರ ತಾಳ್ಮೆಯಿಂದ ಯುದ್ಧ ಭೂಮಿಯಿಂದ ಇಸ್ರೇಲ್ ಕ್ರೌರ್ಯವನ್ನು ಅಲ್‍ಜಝೀರಕ್ಕೆ ವರದಿ ಮಾಡಿ ಜಗತ್ತಿನ ಮುಂದೆ ವಾಇಲ್ ತಲುಪಿಸಿದ್ದಾರೆ.

ಅಕ್ಟೋರ್ 28ಕ್ಕೆ ನುಸ್ರತ್ ನಿರಾಶ್ರಿತ ಶಿಬಿರದಲ್ಲಿ ದಾಳಿ ಮಾಡಿ ವಾಇಲ್ ಅವರ ಪತ್ನಿ ಮತ್ತು ಹದಿನೈದು ವರ್ಷದ ಮಗ, ಏಳು ವರ್ಷದ ಮಗಳ ಸಹಿತ ಕುಟುಂಬದ ಎಂಟು ಮಂದಿ ಕೊಲ್ಲಲ್ಪಟ್ಟಿದ್ದರು. ಪ್ರೀತಿ ಪಾತ್ರರನ್ನು ಕಳಕೊಂಡ ಸಂಕಷ್ಟದಲ್ಲಿಯೂ ಕ್ಯಾಮರದ ಮುಂದೆ ಅವರು ಮರಳಿದ್ದರು. ಜನವರಿ ಏಳಕ್ಕೆ ನಡೆದ ದಾಳಿಯಲ್ಲಿ ವಾಇಲ್‍ರ ಮತ್ತೊಬ್ಬ ಮಗ ಮತ್ತು ಪತ್ರಕರ್ತ ಹಂಸ ದಹ್‍ದೂಹ್ ಕೊಲ್ಲಲ್ಪಟ್ಟಿದ್ದರು.