ಮುಂಬೈ,ಮೇ 29:ಜಾತಿ ನಿಂದನೆಗೊಳಗಾಗಿ ನೊಂದು ಪರಿಶಿಷ್ಟ ಜಾತಿ ವಿಭಾಗದ ಪಿಜಿ ಮೆಡಿಕಲ್ ವಿದ್ಯಾರ್ಥಿನಿ ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮೂರು ಮಂದಿ ಸೀನಿಯರ್ ವೈದ್ಯರನ್ನು ಪೊಲೀಸರು ಬಂಧಿಸಿದರು. ಡಾ. ಪಾಯಲ್ ನಾಯರ್ ಹಾಸ್ಪಿಟಲ್ನಲ್ಲಿ ಪಿಜಿ ಎರಡನೆ ವರ್ಷ ವಿದ್ಯಾರ್ಥಿನಿಯಾಗಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಭಕ್ತಿ ಮೆಹರೆ, ಅಂಕಿತಾ ಖಂಡೆವಾಲ್, ಹೇಮಾ ಅಹುಜಾ ಬಂಧನಕ್ಕೊಳಗಾದ ಸೀನಿಯಾರ್ ವೈದ್ಯೆಯರು.
ಮೂವರು ಸೇರಿ ಪಾಯಲ್ಗೆ ನಿರಂತರ ಜಾತಿ ನಿಂದೆ ಮಾಡುತ್ತಿದ್ದರು. ಶಿಕ್ಷಣ ಪೂರ್ಣಗೊಳಿಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು ಎಂದು ಪಾಯಲ್ರ ಅಮ್ಮ ಆಬಿದಾ, ಪತಿ ಡಾ.ಸಲಾನ್ ದೂರಿನಲ್ಲಿ ತಿಳಿಸಿದ್ದಾರೆ. ರ್ಯಾಗಿಂಗ್ ವಿರುದ್ಧ ಸಮಿತಿ ಸರಕಾರಕ್ಕೆ ನೀಡಿದ ತನಿಖಾ ವರದಿಯಲ್ಲಿ ಪಾಯಲ್ ಜಾತಿ ನಿಂದೆಗೊಳಗಾಗಿದ್ದು ಖಚಿತವಾಗಿತ್ತು. ಮೂವರು ವೈದ್ಯೆಯರ ಕಿರುಕುಳ ಕುರಿತು ನಾಯರ್ ಹಾಸ್ಪಿಟಲ್ ಆಡಳಿತದ ಗಮನಕ್ಕೆ ತಂದಾಗ ಕಡೆಗಣಿಸಲಾಗಿತ್ತು. ಆದ್ದರಿಂದ ಆಸ್ಪತ್ರೆಯ ಆಡಳಿತ ಸಮಿತಿಯ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಪಾಯಲ್ರ ಬಂಧುಗಳು ಬಹುಜನ್ ಅಗಾಡಿಯ ಬೆಂಬಲದಲ್ಲಿ ಮಂಗಳವಾರ ಆಸ್ಪತ್ರೆಯ ಮುಂದೆ ಧರಣಿ ನಡೆಸಿದ್ದಾರೆ. ಪಾಯಲ್ರ ಬಂಧುಗಳನ್ನು ಭೇಟಿಯಾಗಲು ಮಹಾರಾಷ್ಟ್ರ ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಮಹಾಜನ್ ಬಂದಿದ್ದರು. ಅವರು ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಆರೋಪಿ ವೈದ್ಯೆಯರನ್ನು ಬಂಧಿಸಲಾಗಿದೆ.












