ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಪ್ರಮಾಣ ವಚನ ಕಾರ್ಯಕ್ರಮ ಆಹ್ವಾನ ನೀಡುವ ಅಗತ್ಯವಿಲ್ಲ- ಪಾಕ್ ವಿದೇಶ ಸಚಿವ

0
679

ಕರಾಚಿ,ಮೇ 29: ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನದಲ್ಲಿ ಪಾಕಿಸ್ತಾನಕ್ಕೆ ಆಹ್ವಾನವಿಲ್ಲದಿದ್ದರೂ ಎರಡು ದೇಶಗಳ ನಡುವಿನ ಸಂಬಂಧ ಉತ್ತಮ ಪಡಿಸಲು ಅದು ಅಡ್ಡಿಯಾಗದು ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೈಶಿ ಹೇಳಿದರು.

ಕಾಶ್ಮೀರ, ಸಿಯಾಚಿನ್ ವಿಷಯದಲ್ಲಿ ಪರಿಹಾರ ಕಂಡು ಹುಡುಕಲು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ. ಪಾಕಿಸ್ತಾನವನ್ನು ಗುರಿಯಾಗಿಸಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು. ಬಹುಸ್ಥರದ ತಾಂತ್ರಿಕ, ಆರ್ಥಿಕ ಸಹಕಾರ ನೀಡುವ ಬಿಂಸ್‍ಟೆಕ್ ನಾಯಕರನ್ನು ಈ ಸಲ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕರೆಯಲಾಗಿದೆ. ಪಾಕಿಸ್ತಾನ ಸಹಿತ ಸಾರ್ಕ್ ದೇಶದ ಮುಖ್ಯಸ್ಥರನ್ನು 2014ರಲ್ಲಿ ಮೋದಿ ಪ್ರಮಾಣವಚನಕ್ಕೆ ಆಹ್ವಾನಿಸಿದ್ದರು. ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್,ನೇಪಾಳ,ಶ್ರೀಲಂಕಾ ,ಥೈಲಾಂಡ್ ಬಿಂಸ್‌ಟೆಕ್‍ನಲ್ಲಿವೆ. ಕಿರ್ಗಿಸ್ ರಿಪಬ್ಲಿಕ್ ಅಧ್ಯಕ್ಷ, ಮೊರಿಶ್ಯನ್ ಪ್ರಧಾನಿಗೂ ಆಮಂತ್ರಣವಿದೆ. 2014ರಲ್ಲಿ ಪಾಕಿಸ್ತಾನದಿಂದ ಅಂದಿನ ಪ್ರಧಾನಿ ನವಾಝ್ ಶರೀಫ್ ದಿಲ್ಲಿಗೆ ಬಂದಿದ್ದರು. ಪುಲ್ವಾಮ, ಬಾಲಕೋಟ್ ಘಟನೆಯ ಬಳಿಕ ಭಾರತ, ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ.