ರಷ್ಯ-ಉಕ್ರೇನ್ ಯುದ್ಧ ಸುಮಿಯಿಂದ ಇಂದು ಮರಳಲಿರುವ ವಿದ್ಯಾರ್ಥಿಗಳು

0
210

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಎರಡು ವಾರಗಳಿಂದ ಉಕ್ರೇನಿನ ಸುಮಿ ಪಟ್ಟಣದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು ಗುರುವಾರ ದಿಲ್ಲಿಗೆ ಆಗಮಿಸುತ್ತಾರೆ. ಉಕ್ರೇನಿನಿಂದ ಅವರು ಕೂಡಲೇ ಸ್ವದೇಶಕ್ಕೆ ಮರಳುವವರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಅಲ್ಲಿ 694 ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗುತ್ತಿದ್ದು ಅವರನ್ನು ಉಕ್ರೇನ್ ಗಡಿ ದಾಟಿಸಲಾಗುವುದು ಎಂದು ಭಾರತದ ಉಕ್ರೇನಿನ ದೂತವಾಸ ಹೇಳಿದೆ. ಉಕ್ರೇನಿನ ಪ್ರಜೆಗಳನ್ನು ತೆರವು ಗೊಳಿಸಲು ಯುದ್ಧ ವಿರಾಮವನ್ನು ರಷ್ಯ ಘೋಷಿಸಿತ್ತು. ಇದೇ ವೇಳೆ ಉಕ್ರೇನ್ ಅಧ್ಯಕ್ಷ ರಷ್ಯದ ಬೇಡಿಕೆಗೆ ಮಣಿಯುವಂತೆ ಕಂಡು ಬಂದಿದೆ.

ನ್ಯಾಟೊಕ್ಕೆ ಹತ್ತಿರುವಾಗುವ ವಿಷಯ ಈಗ ಇಲ್ಲ. ಅದಕ್ಕೆ ಧೈರ್ಯ ಇಲ್ಲ ಎನ್ನುವಂತೆ ಉಕ್ರೆನಿನ ಅಧ್ಯಕ್ಷರು ಟ್ವೀಟ್ ಮಾಡಿದ್ದು, ಬಹುತೇಕ ಯುದ್ಧ ಕೊನೆಗೊಳ್ಳುವ ಸ್ಥಿತಿ ಇದೆ ಎನ್ನಲಾಗುತ್ತಿದೆ. ರಷ್ಯ ಅಧ್ಯಕ್ಷ ಪುಟಿನ್, ಉಕ್ರೇನ್ ನ್ಯಾಟೊ ಸೇರಲು ಹೊರಟಿದ್ದೇ ಯುದ್ಧಕ್ಕೆ ಕಾರಣವೆಂದೂ ಈಗಾಲೇ ತಿಳಿಸಿದ್ದಾರೆ‌. ಭಾರತೀಯ ವಿದ್ಯಾರ್ಥಿಗಳನ್ನು ಬಸ್‍ನ ಮೂಲಕ ಗಡಿಗೆ ತಲುಪಿಸಲಾಗುವುದು ಎಂದು ಭಾರತ ದೂತವಾಸದ ಮೂಲಗಳು ಹೇಳಿವೆ.