ಗೋವಾದಲ್ಲಿ ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದ ಕಾಂಗ್ರೆಸ್

0
194

ಸನ್ಮಾರ್ಗ ವಾರ್ತೆ

ಪಣಜಿ: ಗೋವಾದಲ್ಲಿ ಚುನಾವಣೆ ಫಲಿತಾಂಶದ ಮೊದಲೇ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅನುಮತಿ ಕೇಳಿದ್ದು ವಿಶೇಷ. ಆದರೆ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣವಾಗಿದೆ. ರಾಜ್ಯಪಾಲ ಶ್ರೀಧರನ್ ಪಿಳ್ಳೆಯಯವರನ್ನು ಮೂರು ಗಂಟೆಗೆ ಭೇಟಿಯಾಗಲು ಕಾಂಗ್ರೆಸ್ ಅನುಮತಿ ಕೇಳಿದೆ. ಆದರೆ, ರಾಜ್ಯಪಾಲರಿಂದ ಅನುಮತಿ ಲಭಿಸಿಲ್ಲ.

ಈ ವರ್ಷ ಗೋವದಲ್ಲಿ ಬಹುಮತದಿಂದ ಅಧಿಕಾರ ಪಡೆಯುವ ನಿರೀಕ್ಷೆ ಕಾಂಗ್ರೆಸ್‍ಗೆ ಇತ್ತು. ಹಿಂದಿನ ಚುನಾವಣೆಯ ಪ್ರಮಾದವನ್ನು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್‌ನ ಯತ್ನವಿದು. 2017ರಲ್ಲಿ ಗೋವಾದಲ್ಲಿ ದೊಡ್ಡ ಪಕ್ಷವಾಗಿ ಚುನಾವಣೆಯಲ್ಲಿ ಸೀಟು ಪಡೆದರೂ ಮನೋಹರ್ ಪಾರಿಕ್ಕರ್ ಚಾಣಾಕ್ಷತೆಯಿಂದ ಸರಕಾರ ರಚಿಸುವಲ್ಲಿ ಹಿಂದೆ ಬಿದ್ದಿತ್ತು. ಆದರೆ ಸಣ್ಣ ಪಕ್ಷಗಳನ್ನು ಸೇರಿಸಿ ಸರಕಾರ ರಚಿಸುವುದಕ್ಕೆ ಬಿಜೆಪಿ ಮುಂದೆ ಬಂದಿತ್ತು. ರಾಜ್ಯಪಾಲರು ಈ ಪಕ್ಷಗಳ ಸಖ್ಯಕ್ಕೆ ಸರಕಾರ ರಚಿಸಲು ಅನುಮತಿ ಕೊಟ್ಟಿದ್ದರು.