ಪಾಕಿಸ್ತಾನದ ಧ್ವಜ ಮಾರಾಟ ಆರೋಪ; ಅಮೆಝಾನ್ ಕಚೇರಿ ದ್ವಂಸಗೊಳಿಸಿದ ರಾಜ್‍ಠಾಕ್ರೆಯ ನವನಿರ್ಮಾಣ ಸೇನೆ

0
138

ಸನ್ಮಾರ್ಗ ವಾರ್ತೆ

ನಾಗ್ಪುರ, ಆ.23: ಇಕಾಮರ್ಸ್ ಸಂಸ್ಥೆ ಅಮೆಝಾನ್ ಕಚೇರಿಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುತ್ತಿಗೆ ಹಾಕಿದ್ದು, ಪಾಕಿಸ್ತಾನದ ಧ್ವಜ ಮಾರಲಾಗುತ್ತಿದೆ ಎಂದು ಆರೋಪಿಸಿ ಎಂಎನ್‍ಎಸ್‍ನ ಕಾರ್ಯಕರ್ತರು ಮಹಾರಾಷ್ಟ್ರದ ನಾಗ್ಪುರದ ಗಣೇಶ್‍ಪತ್ ಪ್ರದೇಶದಲ್ಲಿರುವ ಅಮೆಝಾನ್ ಕಚೇರಿಯನ್ನು ಎಂಎನ್ಎಸ್ ಧ್ವಂಸಗೊಳಿಸಿದೆ.

ವಂದೇ ಮಾತರಂ ಎನ್ನುತ್ತಾ ದಾಳಿಗಿಳಿದ ಎಂಎನ್‍ಎಸ್ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ಹಾನಿ ಮಾಡುವ ಪುಸ್ತಕ ಮಾರುತ್ತಿದೆ ಎಂದು ಆರೋಪಿಸಿ ದಾಂಧಲೆ ಮಾಡಿದೆ. ಪಾಕ್ ದ್ವಜಗಳು ಅಮೆಝಾನ್ ಇಂಡಿ ಲಿಮಿಟೆಡ್ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಎಂಎನ್‍ಎಸ್ ನಾಯಕ ಚಂದು ಲಾಡೆ ಸಂಸ್ಥೆಗೆ ಪತ್ರ ನೀಡಿದ್ದು, ಭಗವತ್ ಗೀತೆಯನ್ನು ನಿಂಧಿಸುವ ಪುಸ್ತಕವನ್ನು ಅಮೆಝಾನ್ ಮಾರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.