ಯುಟ್ಯೂಬ್ ನೋಡಿ ಹೆರಿಗೆ: ಯುವತಿ ನಿಧನ

0
174

ಸನ್ಮಾರ್ಗ ವಾರ್ತೆ

ಚೆನ್ನೈ, ಆ. 23: ಯುಟ್ಯೂಬ್ ನಲ್ಲಿ ಹೆರಿಗೆ ಮಾಡಿಸುವುದನ್ನು ನೋಡಿ ಮನೆಯಲ್ಲಿ ಹಾಗೆ ಮಾಡಿದ ಪರಿಣಾಮ 27 ವರ್ಷದ ಮಹಿಳೆಯು ಅಧಿಕ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ತಮಿಳ್ನಾಡಿನ ಕೃಷ್ಣಗಿರಿ ಪುಲಿಯಂಪಟ್ಟಿಯ ಮದೇಶ್ ಎಂಬಾತನ ಪತ್ನಿ ಎಂ ಲೋಕನಾಯಕಿ ಮೃತಪಟ್ಟ ಮಹಿಳೆಯಾಗಿದ್ದು, ಪತಿ ಮದೇಶ್‍ನನ್ನು (30) ಪೊಲೀಸರು ಬಂಧಿಸಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಪುಲಿಯಂ ಪಟ್ಟಿಯ ಮನೆಯಲ್ಲಿ ಮಂಗಳವಾರ ಬೆಳಗ್ಗೆ 4:30ಕ್ಕೆ ಹೆರಿಗೆ ನೋವು ಆರಂಭವಾಗಿತ್ತು. ಪತಿಯೇ ಮುಂದೆ ನಿಂತು ಮನೆಯಲ್ಲಿಯೇ ಹೆರಿಗೆ ಮಾಡಿಸಿದ್ದ. ಹೆರಿಗೆಯಾದ ನಂತರ ಅಧಿಕ ರಕ್ತಸ್ರಾವದಿಂದ ಮಹಿಳೆಯ ಆರೋಗ್ಯ ತೀರ ಬಿಗಡಾಯಿಸಿತು.

ಬೆಳಗ್ಗೆ 10:30ಕ್ಕೆ ಪತ್ನಿ ಮತ್ತು ನವಜಾತ ಶಿಶುವನ್ನು ಹತ್ತಿರದ ಆಸ್ಪತ್ರೆಗೆ ಕರೆತರಲಾಯಿತು .ಆದರೆ ಆಗಲೇ ಬಾಣಂತಿ ಮೃತಪಟ್ಟಿದ್ದರು. ನಂತರ ವೈದ್ಯಾಧಿಕಾರಿ ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಹೊಕ್ಕಳ ಬಳ್ಳಿಯನ್ನು ಕತ್ತರಿಸದೆಯೇ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.