ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಮಾನದಂಡ ಏನು? ನಹಾಸ್ ಮಾಲಾ ಸಹಿತ ತಜ್ಞರ ಪ್ರಶ್ನೆ

0
910

ನವದೆಹಲಿ: ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಂಶೋಧನಾ ಫೆಲೋಷಿಪ್ ನಲ್ಲಿ ಯು.ಜಿ.ಸಿ.ಯ ಇತ್ತೀಚಿನ ಅಧಿಸೂಚನೆಯು ಸಮಸ್ಯೆಯನ್ನು ತಂದೊಡ್ಡಿದೆ. ಹಲವಾರು ಸಂಶೋಧಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಮಾನದಂಡಗಳನ್ನು ಪ್ರಶ್ನಿಸಿದ್ದಾರೆ . ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಅಥವಾ ಯು.ಜಿ.ಸಿ ಯ ನೆಟ್ ಅನ್ನು ಸಾಮಾನ್ಯ ಮಾನದಂಡವಾಗಿ ಮಾಡುವ ತರ್ಕವನ್ನು ಮತ್ತು ಅದರ ‘ಡಿಸೆಂಬರ್ 2017 ಮತ್ತು ಜೂನ್ 2018’ ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ (ಒಂಓಈ)ನಿರ್ದಿಷ್ಟವಾಗಿ ಪರೀಕ್ಷೆಗೊಳಪಡುವುದನ್ನು ಸಂಶೋಧಕರು ಪ್ರಶ್ನಿಸಿದ್ದಾರೆ.

ಯುಜಿಸಿ, ಉನ್ನತ ಶಿಕ್ಷಣ ನಿಯಂತ್ರಕವು, ಕಳೆದ ವಾರ 2 ವರ್ಷಗಳ ಮಧ್ಯಂತರದ ನಂತರ 2018-19 ರ ಶೈಕ್ಷಣಿಕ ವರ್ಷಕ್ಕೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 1,000 ಒಂಓಈ ವಿದ್ಯಾರ್ಥಿವೇತನವನ್ನು ನೀಡಲು ಅಭ್ಯರ್ಥಿಗಳನ್ನು ಆಹ್ವಾನಿಸಿದೆ.

ಆಯೋಗದ ಹಿಂದಿನ ಅಧಿಸೂಚನೆಯು ಫೆಲೋಷಿಪ್ ನ ಮಾನದಂಡವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (ನೆಟ್) ಅರ್ಹತೆಯಾಗಿ ನಿಗದಿಪಡಿಸಿತ್ತು .

ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸಷನ್ ಆಫ್ ಇಂಡಿಯಾದ ಮಾಜಿ ರಾಷ್ಟ್ರಾಧ್ಯಕ್ಷ ನಹಸ್ ಮಾಲಾ ಅವರು ಎಂಎ ಏನ್ ಎಫ್ ಬಗ್ಗೆ ಎಲ್ಲಾ ಮಾನದಂಡಗಳು ಯುಜಿಸಿಯ ದುರಾಡಳಿತವನ್ನು ಸೂಚಿಸುತ್ತದೆ ಮತ್ತು ಈ ಅಧಿಸೂಚನೆಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಅವಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೊಸ ಅಧಿಸೂಚನೆಯಂತೆ, ಡಿಸೆಂಬರ್ 2017 ಮತ್ತು ಜೂನ್ 2018 ರಲ್ಲಿ ನೆಟ್ ಅರ್ಹತೆ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು.

“ಫೆಲೋಷಿಪ್ ಗಾಗಿ ಅರ್ಜಿ ಸಲ್ಲಿಸುವ ಮಾನದಂಡವಾಗಿ ಯುಜಿಸಿ ನೆಟ್ 2017 / ಜೂನ್ 2018 ಅನ್ನು ನಿರ್ಣಯಿಸರುವ ಹಿಂದಿನ ತರ್ಕ ಯಾವುದು? ಮೊದಲು ಅರ್ಹತೆ ಪಡೆದವರು ಯಾವ ತಪ್ಪು ಮಾಡಿದ್ದಾರೆ ?ಅಭ್ಯರ್ಥಿಗಳ ಅರ್ಹತೆ ಸೂಚಿಸುವ ಪರಿಭಾಷೆಯಲ್ಲಿ ಆಗ ನಡೆಸಿದ ನೆಟ್ ಪರೀಕ್ಷೆಗಳ ಮತ್ತು ಈಗ ನಡೆಸಿದ ಪರೀಕ್ಷೆಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ ?” ಎಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಬಯಸಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.

ನೆಟ್ ಬಗ್ಗೆ ಗೊಂದಲ

ಆಯೋಗವು ಬಿಡುಗಡೆಗೊಳಿಸಿದ ನೆಟ್ ಕ್ಲಿಯರೆನ್ಸ್ ಬಗ್ಗೆ ಇನ್ನೊಂದು ಉಪ-ಮಾನದಂಡವು ಅಭ್ಯರ್ಥಿಗಳ ನಡುವೆ ಗೊಂದಲವನ್ನು ಸೃಷ್ಟಿಸಿದೆ.

“2017 ಮತ್ತು ಜೂನ್ 2018 ರಲ್ಲಿ ನಡೆದ ಸಿಬಿಎಸ್ಇ-ಯುಜಿಸಿ-ನೆಟ್ / ಜೆಆರ್ಎಫ್ / ಸಿಎಸ್ಐಆರ್-ನೆಟ್ / ಜೆಆರ್ಎಫ್ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ” ಎಂದು ಸೋಮವಾರ ಯುಜಿಸಿ ಪ್ರಕಟಣೆ ತಿಳಿಸಿದೆ.

ಆದರೆ, ಸಿಎಸ್ಐಆರ್ ನೆಟ್ ಪರೀಕ್ಷೆ ಡಿಸೆಂಬರ್ 17 ಮತ್ತು ಜೂನ್ 28 ರಂದು ನಡೆಯಿತು ಮತ್ತು ಯುಜಿಸಿ ನೆಟ್ ಪರೀಕ್ಷೆ ನವೆಂಬರ್ 2017 ಮತ್ತು ಜುಲೈ 2018 ರಲ್ಲಿ ನಡೆಯಿತು.

ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಎಸ್ಐಆರ್ ನೆಟ್ ಅನ್ನು ನಡೆಸಲಾಗುತ್ತದೆ, ಆದರೆ ಯುಜಿಸಿ ನೆಟ್ ನ್ನು ಮಾನವಿಕ ಹಿನ್ನಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗುತ್ತದೆ.

ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಪಡೆಯುವ ಮೊದಲು ನಾನು ಎಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಬೇಕು? ನಾನು ವಿಜ್ಞಾನ ಸಂಶೋಧಕ ಮತ್ತು ನಾನು ಗೆಟ್ ಮತ್ತು ಜೆಸ್ಟ್ ಅರ್ಹತೆ ಪಡೆದ ನಂತರ ಇಲ್ಲಿದ್ದೇನೆ” ಎಂದು ಮತ್ತೊಂದು ಅರ್ಜಿದಾರರು ಹೇಳಿದರು.

ಅರ್ಜಿ ಸಲ್ಲಿಸಲು ಒದಗಿಸಲಾದ ಸಮಯದ ಕುರಿತು ಮತ್ತೋರ್ವ ಸಂಶೋಧಕರು ದೂರಿದರು. ಅರ್ಜಿದಾರರಿಗೆ ಇಪ್ಪತ್ತು ದಿನಗಳ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ಕೇಳಲಾಗಿದೆ.

”ಅರ್ಜಿ ಸಲ್ಲಿಸಲು ಕೇವಲ 20 ದಿನಗಳ ಅಂತರ ಏಕೆ? ಅದೂ ಸಹ, ಡಿಸೆಂಬರ್ ತಿಂಗಳಲ್ಲಿ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ರಜೆ ಮತ್ತು ಕ್ಷೇತ್ರದ ಕೆಲಸಗಳಿಗಾಗಿ ಹೋಗುತ್ತಾರೆ. ವಿಶ್ವವಿದ್ಯಾನಿಲಯಗಳಲ್ಲಿ, ಮೇಲ್ವಿಚಾರಕರು, ಅಧ್ಯಕ್ಷರು, ಡೀನ್ಸ್ ಮತ್ತು ರಿಜಿಸ್ಟ್ರಾರ್ಗಳ ಸಹಿಗಳನ್ನು ಪಡೆಯಲು ಇದು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ “ಎಂದು ಅವರು ಕೇಳಿದರು.