ಅಖಿಲ ಭಾರತ ಉತ್ಪಾದಕರ ಸಂಘದ (ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಆರ್ಗನೈಸೇಶನ್ (ಎಐಎಂಒ) ಹೊಸ ಸಮೀಕ್ಷೆಯ ಪ್ರಕಾರ, ದೇಶದಾದ್ಯಂತ ವ್ಯಾಪಾರಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) 2014 ರಿಂದಲೂ ಸ್ಥಿರವಾದ ಉದ್ಯೋಗದ ನಷ್ಟ ಮತ್ತು ಕುಸಿತದ ತೊಂದರೆಯನ್ನು ಎದುರಿಸಿದೆ. ನೋಟು ರದ್ದತಿ ಮತ್ತು ಜಿಎಸ್ಟಿ ಅಳವಡಿಕೆಯು ಈ ಮಂದಗತಿಯ ಬೆಳವಣಿಗೆಗೆ ಕಾರಣವಾಗಿದೆ.
ಎಐಎಂಒ ಸಮೀಕ್ಷೆಯು ದೇಶಾದ್ಯಂತ ವ್ಯಾಪಾರಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ 34,700 ಮಾದರಿಗಳನ್ನು ವಿಶ್ಲೇಷಿಸಿದೆ. ಈ ಕ್ಷೇತ್ರಗಳು 2014 ರಿಂದ ಹಿನ್ನಡೆ ಅನುಭವಿಸಿದೆ ಎಂದು ಬಹಿರಂಗಪಡಿಸಿದೆ. ಎಐಎಂಒ ಉತ್ಪಾದನೆ ಮತ್ತು ರಫ್ತು ಚಟುವಟಿಕೆಗಳಲ್ಲಿ ತೊಡಗಿರುವ 3 ಲಕ್ಷಕ್ಕಿಂತಲೂ ಹೆಚ್ಚು ಸೂಕ್ಷ್ಮ, ಸಣ್ಣ ಪ್ರಮಾಣದ ಮತ್ತು ಮಧ್ಯಮ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ಪ್ರತಿನಿಧಿಸುತ್ತದೆ.
ವ್ಯಾಪಾರ ವಿಭಾಗದಲ್ಲಿ ಉದ್ಯೋಗ ನಷ್ಟವು 43% ನಷ್ಟು ಪ್ರಮಾಣದಲ್ಲಿ ನಡೆದಿದ್ದರೆ, ಸೂಕ್ಷ್ಮ ವಿಭಾಗಗಳು 32% ರಷ್ಟು ಉದ್ಯೋಗದ ನಷ್ಟವನ್ನು ಅನುಭವಿಸಿವೆ. ಸಣ್ಣ ವಿಭಾಗಗಳು 35% ರಷ್ಟು ಮತ್ತು ಮಧ್ಯಮ-ಪ್ರಮಾಣದ ಉದ್ಯಮಗಳು 24% ನಷ್ಟವನ್ನು ಅನುಭವಿಸಿವೆ.
2014ರಿಂದ ದೇಶದಾದ್ಯಂತದ ವ್ಯಾಪಾರಿಗಳ ಲಾಭವು ಸುಮಾರು 70% ನಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆಯೆಂದು .AIMO ನ ಅಧ್ಯಕ್ಷ ಕೆ ಇ ರಘುನಾಥನ್ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಮೈಕ್ರೋ ಕೈಗಾರಿಕೆಗಳು ಲಾಭದಲ್ಲಿ 43% ಕುಸಿತವನ್ನು ತೋರಿಸುತ್ತವೆ, ಸಣ್ಣ-ಪ್ರಮಾಣದ ಕೈಗಾರಿಕೆಗಳು 35% ನಷ್ಟು ಇಳಿಕೆ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು 24% ಕುಸಿತವನ್ನು ಎದುರಿಸುತ್ತಿವೆ. ಇದು ಬಹಳ ದೊಡ್ಡ ಪ್ರಮಾಣ, ಈ ವ್ಯಾಪಾರಿಗಳು ಮತ್ತು MSMEsಗಳಲ್ಲಿರುವ ಹಲವಾರು ಕ್ಷೇತ್ರಗಳು ಈಗಾಗಲೇ ಪುನಶ್ಚೇತನಕ್ಕೂ ಮೀರಿ ಹೋಗಿವೆ ಎಂದು ಅವರು ಹೇಳಿದರು.
ಎನ್ಡಿಎ ಸರ್ಕಾರದ ನೋಟು ರದ್ದತಿಯ ಕಾರಣದಿಂದಾಗಿ, ಜಿಎಸ್ಟಿ ಹೇರಿಕೆ, ಹಣಕಾಸಿನ ಲಭ್ಯತೆ ಮತ್ತು ಸರ್ಕಾರಿ ಪಾವತಿ ಬಾಕಿ ಮತ್ತು ಅನುಷ್ಠಾನದ ವಿಷಯಗಳಿಂದಾಗಿ ಈ ಕ್ಷೇತ್ರಗಳನ್ನು ದುರ್ಬಲಗೊಳಿಸಿದೆ “ಎಂದು ಅವರು ಹೇಳಿದರು.
‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’, ‘ಸ್ಟಾರ್ಟ್ ಅಪ್ ಇಂಡಿಯಾ’ ಪ್ರಚಾರಗಳು, ನೋಟು ರದ್ದತಿ , ಜಿಎಸ್ಟಿ ಅಳವಡಿಕೆ ಮತ್ತು ತೆರಿಗೆ ಕಾನೂನುಗಳು, ಎಂಎಸ್ಎಂಇಗಳ ವರ್ಗೀಕರಣದಲ್ಲಿ ಬದಲಾವಣೆ, ಓಲಾ, ಉಬರ್, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮುಂತಾದ ವಿದೇಶಿ ಸ್ವಾಮ್ಯದ ವ್ಯವಹಾರ ಮಾದರಿಗಳ ಪ್ರವೇಶ ಮತ್ತು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಈ ಅಧ್ಯಯನವನ್ನು ಮಾಡಿದ್ದೇವೆ “ಎಂದು ಅವರು ಹೇಳಿದರು.
2014-15ನೇ ಸಾಲಿನಲ್ಲಿ ಉದ್ಯಮದ ಸ್ಥಾನಮಾನವನ್ನು ಇಟ್ಟುಕೊಂಡು, 100 ಉದ್ಯೋಗಿಗಳನ್ನು ಹೊಂದಿದ ವ್ಯಾಪಾರ ಕ್ಷೇತ್ರವು ಈಗ 2018-19ರಲ್ಲಿ 57 ಕ್ಕೆ ಇಳಿದಿದೆ ಎಂದು ತೋರಿಸುತ್ತದೆ.












