ಪಂಜಾಬ್‍‌ನಲ್ಲಿ ಅಮರೀಂದರ್ ಸಿಂಗ್‍‌ರಿಗೆ ಚುನಾವಣಾ ನೇತೃತ್ವ

0
406

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಂಬರುವ ವಿಧಾನಸಭೆ ಚುನಾವಣೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್‌ ನೇತೃತ್ವದಲ್ಲಿ ಕಾಂಗ್ರೆಸ್ ಎದುರಿಸಲು ಸಜ್ಜಾಗಿದೆ. ಅವರನ್ನು ಬದಲಾಯಿಸಬೇಕೆಂಬ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಕಿವಿ ಕೊಟ್ಟಿಲ್ಲ. ಹೈಕಮಾಂಡ್ ನಿರ್ಣಯವನ್ನು ಪಂಜಾಬ್ ಉಸ್ತುವಾರಿಯಿರುವ ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಿರುದ್ಧ ನಾಲ್ವರು ಮಂತ್ರಿಗಳು ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳನ್ನೊಳಗೊಂಡ ಗುಂಪು ರಂಗಕ್ಕಿಳಿದಿತ್ತು. ಆದರೆ ಮುಂದಿನ ವರ್ಷ ನಡೆಯುವ ಚುನಾವಣೆಯ ನೇತೃತ್ವವನ್ನು ಅಮರೀಂದರ್ ಸಿಂಗ್‍‌ರಿಗೆ ಕಾಂಗ್ರೆಸ್ ವಹಿಸಿಕೊಟ್ಟಿದೆ.

ಅಮರೀಂದರ್ ಸಿಂಗ್ ವಿರುದ್ಧ ಇರುವವರು ಹೈಕಮಾಂಡಿನೊಂದಿಗೆ ಚರ್ಚಿಸಲು ಮುಂದಾಗಿದ್ದಾರೆ. 2017ರ ಚುನಾವಣೆಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಅಮರೀಂರ್ ಸಿಂಗ್‍ಗೆ ಪಾಲಿಸಲು ಸಾಧ್ಯವಿಲ್ಲ ಎಂದು ಭಿನ್ನಮತೀಯರು ಹೇಳುತ್ತಿದ್ದಾರೆ.

ಆಡಳಿತ ಪಕ್ಷದಲ್ಲಿರುವ ಶಾಸಕರೇ ಚುನಾವಣಾ ಭರವಸೆ ಈಡೇರಿಸದ್ದನ್ನು ತೋರಿಸಿ ಅಮರೀಂದರ್ ಸಿಂಗ್ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಚುನಾವಣಾ ಭರವಸೆ ಈಡೇರಿಸುವ ಶಕ್ತಿ ಅಮರೀಂದರ್‌ರಿಗೆ ಇಲ್ಲವೆಂದು ಅವರು ಹೈಕಮಾಂಡಿನೊಂದಿಗೆ ಚರ್ಚಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದೂ ಸಚಿವ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿದರು.

ಶಾಸಕರು ಒಟ್ಟಾಗಿ ಹೈಕಮಾಂಡನ್ನು ಭೇಟಿಯಾಗಲಿದ್ದಾರೆ. ನವಜೋತ್ ಸಿಂಗ್ ಸಿಧು ರಾಜ್ಯ ಅಧ್ಯಕ್ಷನಾಗಿಯೂ ಸಮಸ್ಯೆ ಪರಿಹರಿಸುವ ಯತ್ನ ಪ್ರಯೋಜನಕ್ಕೆ ಬಂದಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತಿದೆ. ಚುನಾವಣೆಯ ವೇಳೆಗೆ ಕಾಂಗ್ರೆಸ್ ಬಹುದೊಡ್ಡ ಸಮಸ್ಯೆಯಲ್ಲಿ ತೇಲಾಡಬಹುದು ಎಂಬ ಸೂಚನೆಯನ್ನು ಅಲ್ಲಿನ ಈಗ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳು ಬಹಿರಂಗಗೊಳಿಸುತ್ತಿವೆ.