ಜರ್ಮನಿಯ ಕಮ್ಯೂನಿಸ್ಟ್ ಪಾರ್ಟಿ ನಾಯಕಿಯಾಗಿ ಅಮೀರಾ ಮುಹಮ್ಮದ್ ಅಲಿ ಆಯ್ಕೆ

0
1099

ಸನ್ಮಾರ್ಗ ವಾರ್ತೆ

ಬರ್ಲಿನ್,ನ.13: ಜರ್ಮನಿಯ ಪ್ರತಿಪಕ್ಷ ಪಾರ್ಟಿಯಾದ ಡಿ ಲಿಂಕ್‌ನ ನಾಯಕಿಯಾಗಿ ಹಾಂಬರ್ಗ್‌ನ ಅಮೀರಾ ಮುಹಮ್ಮದ್ ಅಲಿ ಆಯ್ಕೆಯಾಗಿದ್ದಾರೆ. ಅಮೀರಾ 2017ರಿಂದ ಓಲ್ಡನ್ ಬರ್ಗ್‌ನ ಪಾರ್ಲಿಮೆಂಟ್ ಸದಸ್ಯೆಯಾಗಿದ್ದಾರೆ. ಡಿಟ್ಟಮರ್ ಬಾರ್ಷ್ ಪಾರ್ಲಿಮೆಂಟರಿ ಪಾರ್ಟಿಯ ಇನ್ನೋರ್ವ ನಾಯಕನಾಗಿ ಆಯ್ಕೆಯಾಗಿದ್ದಾರೆ.

1980ರಲ್ಲಿ ಹಾಂಬರ್ಗ್‌ನಲ್ಲಿ ಜನಿಸಿದ ಅಮೀರಾರ ತಂದೆ ಈಜಿಪ್ಟ್‌ನ ಪ್ರಜೆಯಾಗಿದ್ದು, ತಾಯಿ ಜರ್ಮನಿ ಪ್ರಜೆಯಾಗಿದ್ದಾರೆ. ಕಮ್ಯೂನಿಸ್ಟ್ ಪಾರ್ಟಿಯ ಯುವ ವಿಭಾಗದ ನಾಯಕಿಯಾಗಿ ಅವರು ರಾಜಕೀಯಕ್ಕೆ ಬಂದಿದ್ದರು. ಹೈಡಲ್ ಬರ್ಗ್ ಯುನಿವರ್ಸಿಟಿಯಿಂದ ಕಾನೂನು ಪದವಿ ಪಡೆದಿದ್ದಾರೆ.