ಸನ್ಮಾರ್ಗ ವಾರ್ತೆ
ಕಾಬೂಲ್,ನ.13: ಕೈದಿಗಳ ಹಸ್ತಾಂತರದ ಭಾಗವಾಗಿ ತಾಲಿಬಾನಿನ ಮೂವರು ಉನ್ನತ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗುವುದು ಎಂದು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಗನಿ ತಿಳಿಸಿದರು.
ಮೂರು ವರ್ಷ ಮೊದಲು ತಾಲಿಬಾನ್ ಅಪರಹಿಸಿದ್ದ ಅಮೆರಿಕ, ಆಸ್ಟ್ರೇಲಿಯನ್ ಪ್ರೊಫೆಸರ್ಗಳ ಬಿಡುಗಡೆಗೆ ಬದಲಿಯಾಗಿ ತಾಲಿಬಾನ್ ನಾಯಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಅಶ್ರಫ್ ಗನಿ ತಿಳಿಸಿದ್ದಾರೆ.
ತಾಲಿಬಾನ್ ನಾಯಕರಾದ ಅನಸ್ ಹಖ್ಖಾನಿ, ಹಾಜಿಮಾಲಿ ಖಾನ್, ಹಾಫಿಝ್ ರಾಶಿದ್ರನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ.
ಕಾಬೂಲಿನ ಅಮೆರಿಕನ್ ಯುನಿವರ್ಸಿಟಿಯ ಸಮೀಪದಿಂದ 2016ರಲ್ಲಿ ಅಪರಹಣ ನಡೆಸಲಾದ ಅಮೆರಿಕ-ಆಸ್ಟ್ರೇಲಿಯಗಳ ತಿಮೊತಿ ವಿಕಸ್, ಕೆವಿನ್ ಕಿಂಗ್ರನ್ನು ತಾಲಿಬಾನ್ ಬಿಡುಗಡೆಗೊಳಿಸಲಿದೆ.
ಅಪಹರಣ ನಡೆದ ಬಳಿಕ ತಾಲಿಬಾನ್ ವೀಡಿಯೊ ಬಿಡುಗಡೆಗೊಳಿಸಿ ಪ್ರೊಫೆಸರ್ಗಳು ತಮ್ಮ ಕಸ್ಟಡಿಯಲ್ಲಿದ್ದಾರೆಂದು ತಿಳಿಸಿತ್ತು. ಪ್ರೊಫೆಸರ್ಗಳನ್ನು ಬಿಡುಗಡೆಗೊಳಿಸಿದರೆ ತಾಲಿಬಾನ್ ನಾಯಕರ ಬಿಡುಗಡೆ ಮಾಡಲಾಗುವುದು ಎಂದು ಅಫ್ಘಾನಿಸ್ತಾನದ ಅಧ್ಯಕ್ಷರು ಶರ್ತ ಇಟ್ಟಿದ್ದರು. ಅಫ್ಘಾನಿಸ್ತಾನದ ಅಮೆರಿಕನ್ ಯನಿವರ್ಸಿಟಿಯಲ್ಲಿ ಹೊರ ದೇಶಗಳ ಹಲವು ಪ್ರೊಫೆಸರ್ಗಳು ಇದ್ದಾರೆ.












