ಅಮೆರಿಕದ ಅಧ್ಯಕ್ಷರ ಸೈನಿಕ ಅಧಿಕಾರ ತಗ್ಗಿಸಲು ಪ್ರಸ್ತಾವ

0
867

ಸನ್ಮಾರ್ಗ ವಾರ್ತೆ-

ವಾಷಿಂಗ್ಟನ್, ಜ.10: ಅಮೆರಿಕ ಅಧ್ಯಕ್ಷರಿಗಿರುವ ಸೈನಿಕ ಅಧಿಕಾರಗಳನ್ನು ಕಡಿಮೆಗೊಳಿಸುವ ಸಲುವಾಗಿ ಪ್ರಸ್ತಾವವೊಂದನ್ನು ಮತಹಾಕಲಾಗುವುದು. ಇರಾನ್ ವಿರುದ್ಧ ಸೇನಾ ಕ್ರಮಗಳನ್ನು ಬೆಟ್ಟುಮಾಡಿ ಸೈನಿಕ ಕ್ರಮಗಳಿಗೆ ಜನಪ್ರತಿನಿಧಿ ಸಭೆಯಾದ ಕಾಂಗ್ರೆಸ್‍ನ ಅನುಮತಿ ಬೇಕಾಗಿದೆ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.

ದಾಳಿ ನಡೆದರೆ ಮಾತ್ರ ಅಮೆರಿಕ ಅಧ್ಯಕ್ಷರಿಗೆ ಅನುಮತಿ ಕೇಳದೆ ತೀರ್ಮಾನ ಮಾಡಲು ಸಾಧ್ಯವಿದೆ. ಕಾಂಗ್ರೆಸ್‍ನಲ್ಲಿ ಪ್ರಸ್ತಾವ ಪಾಸಾಗಿದ್ದು ಮೇಲ್ಮನೆ ಸೆನೆಟ್‍ನಲ್ಲಿ ಮತಕ್ಕೆ ಹಾಕಲಾಗುವುದು. ರಿಪಬ್ಲಿಕನ್ ಪಾರ್ಟಿಯ ಇಬ್ಬರು ಸದಸ್ಯರು ಪ್ರಸ್ತಾವವನ್ನು ಬೆಂಬಲಿಸಿದ್ದು ಇದು ಸೆನೆಟ್‍ನಲ್ಲಿ ಪಾಸಾಗಲಿದೆ ಎಂದು ವರದಿಯಾಗಿದೆ.