ಸನ್ಮಾರ್ಗ ವಾರ್ತೆ-
ಅಹ್ಮದಾಬಾದ್, ಜ. 4: ಭಾರತದ ಸಂವಿಧಾನದ ಕರಡು ತಯಾರಿಸಿದ್ದು ಬಿ.ಆರ್. ಅಂಬೇಡ್ಕರ್ ಆಲ್ಲವೆಂದೂ ಅದನ್ನು ಒಬ್ಬ ಬ್ರಾಹ್ಮಣ ತಯಾರಿಸಿದ್ದರೆಂದೂ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದರು. ಅಹ್ಮದಾಬಾದಿನಲ್ಲಿ ನಡೆದ ಬ್ರಾಹ್ಮಣ ವ್ಯಾಪಾರಿ ಸಮ್ಮೇಳನದಲ್ಲಿ ಅವರು ಮಾತಾಡುತ್ತಿದ್ದರು.60 ದೇಶಗಳ ಸಂವಿಧಾನ ಅಭ್ಯಸಿಸಿ ಭಾರತದ ಕರಡು ಸಂವಿಧಾನಕ್ಕೆ ರೂಪು ನೀಡಲಾಗಿದೆ ಎಂಬುದು ನಿಮಗೆ ಗೊತ್ತೇ?. ಡಾ. ಅಂಬೇಡ್ಕರ್ ಮುಂದೆ ಕರಡು ಮಂಡಿಸಿದ್ದು ಯಾರೆಂದು ಗೊತ್ತಿದೆಯೇ?. ಸಂವಿಧಾನದ ಕುರಿತು ಅಂಬೇಡ್ಕರ್ ಹೆಸರನ್ನು ಗೌರವದಿಂದ ನಾವು ನೋಡುತ್ತೇವೆ. ಆದರೆ ಕರಡಿಗೆ ರೂಪು ನೀಡಿದ್ದು ಬಿ ಎನ್ ರಾವ್ ಎಂಬ ಬ್ರಾಹ್ಮಣ ವ್ಯಕ್ತಿಯಾಗಿದೆ ಎಂದು ಅಂಬೇಡ್ಕರ್ ರೇ ಹೇಳಿದ್ದಾರೆ ಎಂದು ತ್ರಿವೇದಿ ಹೇಳಿದರು.
ಇತರರನ್ನು ಉನ್ನತಿಗೆ ಏರಿಸುವುದರ ಹಿಂದೆ ಯಾವಾಗಲೂ ಬ್ರಾಹ್ಮಣರು ಇದ್ದರು. ಅಂಬೇಡ್ಕರ್ ರನ್ನು ಉನ್ನತಿಗೇರಿಸಿದ್ದು ಬಿ ಆರ್ ರಾವ್ ಆಗಿದ್ದರು. 1949 ನವೆಂಬರ್ 25ರ ಸಂವಿಧಾನ ಅಸೆಂಬ್ಲಿಯಲ್ಲಿ ಅಂಬೇಡ್ಕರ್ ಈ ವಿಷಯವನ್ನು ಒಪ್ಪಿಕೊಂಡಿದ್ದರೆಂದು ತ್ರಿವೇದಿ ಹೇಳಿದರು. ನೋಬೆಲ್ ಪ್ರಶಸ್ತಿ ಗಳಿಸಿದ ಎಂಟು ಭಾರತದವರಲ್ಲಿ ಏಳು ಮಂದಿ ಬ್ರಾಹ್ಮಣರು. ನೋಬೆಲ್ ಪಡೆದ ಅಮೆರಿಕದ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಬ್ರಾಹ್ಮಣನಾಗಿದ್ದಾರೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಬೆಂಕಿ ಅಕಸ್ಮಿಕದ ವೇಳೆ ಹನ್ನೊಂದು ಮಂದಿಯನ್ನು ರಕ್ಷಿಸಿದ ಫಯರ್ಮೆನ್ ರಾಜೇಶ್ ಶುಕ್ಲ ಬ್ರಾಹ್ಮಣ ಎಂದು ತ್ರಿವೇದಿ ಹೇಳಿದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಉಪಸ್ಥಿತರಿದ್ದ ಸಭೆಯಲ್ಲಿ ರಾಜೇಂದ್ರ ತ್ರಿವೇದಿ ಈ ಹೇಳಿಕೆ ನೀಡಿದ್ದಾರೆ.












