ಕಾಶ್ಮೀರ: ನಾಯಕರ ಬಂಧನಕ್ಕೆ ಆತಂಕ ವ್ಯಕ್ತಪಡಿಸಿದ ಅಮೆರಿಕ, ವಿಶ್ವಸಂಸ್ಥೆ

0
1027

ವಾಷಿಂಗ್ಟನ್, ಆ. 6: ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ ಕೇಂದ್ರ ಸರಕಾರದ ಕ್ರಮವನ್ನು ಅಮೆರಿಕ ಖಂಡಿಸಿದೆ. ಸಾಂವಿಧಾನಿಕ ಸ್ಥಾನಮಾನವಾದ 370ನೇ ವಿದಿಯನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಮೊದಲು ರಾಜಕೀಯ ನಾಯಕರನ್ನು ಗೃಹಬಂಧದಲ್ಲಿರಿಸಿದ್ದು ಆತಂಕಕ್ಕೆ ಕಾರಣವಾಗಿದೆ. ವ್ಯಕ್ತಿಯ ಹಕ್ಕುಗಳು, ಕಾಶ್ಮೀರಿಗಳ ಆತಂಕಗಳನ್ನು ಪರಿಗಣಿಸಬೇಕಾಗಿದೆ. ಎರಡು ದೇಶಗಳು ಗಡಿಯಲ್ಲಿ ಶಾಂತಿ ಪಾಲಿಸಬೇಕೆಂದು ಅಮೆರಿಕ ರಾಜ್ಯ ಇಲಾಖೆ ವಕ್ತಾರೆ ಮಾರ್ಗನ್ ಅಕ್ಟಾಗಸ್ ಹೇಳಿಕೆ ನೀಡಿದ್ದಾರೆ.

ಕಾಶ್ಮೀರದ ಹೊಸ ಪರಿಸ್ಥಿತಿಯಲ್ಲಿ ಎರಡು ದೇಶಗಳು ಸಂಯಮ ಪಾಲಿಸಬೇಕೆಂದು ವಿಶ್ವಸಂಸ್ಥೆಯೂ ತಿಳಿಸಿದೆ. ವಲಯದ ಘರ್ಷಣೆಯ ಸಾಧ್ಯತೆಯನ್ನು ಆತಂಕದಿಂದ ನೋಡಬೇಕಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಟ್ವಿಜ್ವಾರ್ ಹೇಳಿದ್ದು, ಗಡಿಯಲ್ಲಿ ಸೈನಿಕರ ಹೆಚ್ಚಳದ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿ ಸಂಘರ್ಷದ ಸ್ಥಿತಿ ನಿರ್ಮಾಣವಾಗದಿರಲಿಕ್ಕಾಗಿ ಮೆಹಬೂಬ ಮುಫ್ತಿ, ಉಮರ್ ಅಬ್ದುಲ್ಲ, ಸಜ್ಜಾದ್ ಲೋನ್, ಮುಹಮ್ಮದ್ ಯೂಸುಫ್ ತರಿಗಾಮಿಯವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಘರ್ಷಣಾಸ್ಥಿತಿ ಎದುರಿಸಲು 8000 ಸಿಆರ್‍ಪಿಎಫ್ ಸೈನಿಕರನ್ನು ಕೂಡ ಕಳೆದ ದಿವಸ ಕೇಂದ್ರಸರಕಾರ ಕಾಶ್ಮೀರಕ್ಕೆ ನಿಯೋಜಿಸಿದೆ.