‘ಮ್ಯಾನ್‍ಹೋಲ್’ ಶುಚಿಗೊಳಿಸುವ ರೊಬೋಟ್: ಆನಂದ್ ಮಹೀಂದ್ರರಿಂದ ಜೆನ್ ರೊಬೊಟಿಕ್ಸ್‌ನಲ್ಲಿ ಹೂಡಿಕೆ

0
524

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ಜಗತ್ತಿನಲ್ಲೆ ಮೊತ್ತಮೊದಲ ಮ್ಯಾನ್‍ಹೋಲ್‍ಗಳನ್ನು ಶುಚೀಕರಿಸುವ ರೊಬೊಟ್ ತಯಾರಿಸಿ ಗಮನಸೆಳೆದ ಜೆನ್ ರೊಬೊಟಿಕ್ಸ್ ಇನ್ನೊವೇಶನ್ಸ್ ಪ್ರೈವೇಟ್ ಲಿಮಿಟೆಡ್‍ಗೆ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಹೂಡಿಕೆ ಮಾಡಿದ್ದಾರೆ. ತಿರುವನಂತಪುರಂ ಕೇಂದ್ರವಾಗಿ ಜೆನ್ ರೋಬೊಟಿಕ್ಸ್‌ನಲ್ಲಿ ಅವರು 2.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಬಾಂಡಿಕೂಟ್ ಎಂಬ ರೊಬೊಟ್‍ಗಳನ್ನು ಉಪಯೋಗಿಸಿ ಮ್ಯಾನ್‍ಹೋಲ್‍ಗಳು, ಕೊಳಚೆಗುಂಡಿಗಳನ್ನು ಸುರಕ್ಷಿತವಾಗಿ ಶುಚಿಗೊಳಿಸಬಹುದು. ಇಂತಹ ಕೆಲಸ ಮಾಡುವಾಗ ಇರುವ ಅಪಾಯವನ್ನು ದೂರವಿಡಲು ಈ ರೀತಿ ಸಾಧ್ಯವಿದೆ. ಜೆನ್ ರೊಬೊಟಿಕ್ಸ್‌ನ ರೊಬೊಟನ್ನು ಈಗ ದೇಶದಲ್ಲಿ 11 ರಾಜ್ಯಗಳಲ್ಲಿ ಉಪಯೋಗಿಸಲಾಗುತ್ತಿದೆ. ಕಂಪೆನಿಗೆ ಬಂದ ಹೊಸ ಹೂಡಿಕೆ ಹೊಸ ಯೋಜನೆಯ ವ್ಯಾಪನಕ್ಕೆ ಸಹಾಯಕವಾಗಬಹುದು ಎಂದು ಜೆನ್ ರೊಬೊಟಿಕ್ ನಿರೀಕ್ಷೆ ವ್ಯಕ್ತಪಡಿಸಿದೆ.

ಆನಂದ್ ಮಹೀಂದ್ರರ ಒಂದು ಟ್ವೀಟ್ ಜೆನ್ ರೊಬೊಟಿಕ್ಸ್‌ಗೆ ತಿರುವಾಗಿ ಪರಿಣಮಿಸಿದೆ. ಮಾನವ ಶ್ರಮ ಇಲ್ಲದಂತೆ ಗಟಾರಗಳನ್ನು ಶುಚೀಗೊಳಿಸುವ ಕುರಿತ ಆಶಯ ಇದ್ದರೆ ನಾನು ಅದಕ್ಕೆ ಹಣ ಹೂಡಲು ತಯಾರೆಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದರು. ಒಂದು ಶುಚೀಕರಣ ಕಾರ್ಮಿಕ ಗಟಾರ ಕ್ಲೀನ್ ಮಾಡುವ ವೇಳೆ ಮೃತಪಟ್ಟ ಸುದ್ದಿಯನ್ನು ಹಂಚಿಕೊಂಡು ಅವರು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಜೆನ್ ರೊಬೊಟಿಕ್ಸ್ ಸಿಇಒ ಎಂಕೆ. ವಿಮಲ್ ಗೋವಿಂದ ಮಹೀಂದ್ರರನ್ನು ಸಂಪರ್ಕಿಸಿ ತಮ್ಮ ಆಶಯವನ್ನು ವಿವರಿಸಿದ್ದರು.

ಆನಂದ್ ಮಹೀಂದ್ರರ ಟ್ವೀಟ್ ನೋಡಿದ ಕೂಡಲೇ ನಾವು ಅವರನ್ನು ಸಂಪರ್ಕಿಸಿದೆವು. ಟ್ವೀಟ್‍ನಲ್ಲಿ ಹೇಳಿರುವಂತೆ ರೊಬೊಟ್ ತಯಾರಿಕೆ, ಮಾರ್ಕೆಟಿಂಗ್‍ಗೆ ಅವರು ಹೂಡಿಕೆ ಮಾಡುವ ಮಾತು ಕೊಟ್ಟಿದ್ದಾರೆ. ಅವರು ಉತ್ತಮ ಉದ್ಯಮಿಗಳಲ್ಲಿ ಒಬ್ಬರು. ಅವರ ಅನುಭವ, ನೆಟ್‍ವರ್ಕ ನಮ್ಮ ವ್ಯಾಪಾರ ಹೆಚ್ಚಿಸಲು ಬಹಳ ಸಹಾಯಕವಾಗಬಹುದು. ಅವರ ಹೆಸರೇ ನಮ್ಮ ಕಂಪೆನಿಗೆ ಸಿಕ್ಕ ಪುರಸ್ಕಾರವಾಗಿದೆ ಎಂದು ಜೆನ್ ರೊಬೊಟಿಕ್ಸ್‌ನ ಸಹಸಂಸ್ಥಾಪಕ ರಾಶಿದ್ ಕೆ. ಹೇಳಿದ್ದಾರೆ.

ಕೇರಳದ ಕುಟ್ಟಿಪುರ ಎಂಇಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಸಹಪಾಠಿಗಳಾಗಿದ್ದ ಎಂಕೆ ವಿಮಲ್‍ ಗೋವಿಂದ್, ಕೆ. ರಾಶಿದ್, ಎನ್‍ಪಿ ನಿಖಿಲ್, ಅರುಣ್ ಜಾರ್ಜ್ ಸೇರಿ ಬಿಟೆಕ್ ಕಲಿಯುವಾಗಲೇ ಜೆನ್ ರೊಬೊಟಿಕ್ಸ್ ಕಂಪೆನಿಯನ್ನು ಹುಟ್ಟುಹಾಕಿದ್ದರು.