ಎಲುಬಿನ ಮಜ್ಜೆ ನಶಿಸುವ ರೋಗ ಬಾಧಿಸಿದ್ದರೂ ಮಲಗಿದ್ದಲ್ಲಿಂದಲೇ ಪೇಪರ್ ಪೆನ್ ನಿರ್ಮಿಸುವ ಅನೀಶ್

0
1230

ಸನ್ಮಾರ್ಗ ವಾರ್ತೆ

ಮುಂಡೂರ್,ಮೇ.5: ಎಲುಬಿನ ಮಜ್ಜೆ ನಶಿಸುವ ಅಪೂರ್ವ ರೋಗ ಬಾಧಿತರಾಗಿ ಮಲಗಿಲ್ಲೇ ಹಾಸಿಗೆ ಹಿಡಿದಿರುವ ಅನೀಶ್ ದುಡಿಮೆಗೆ ದಾರಿಯನ್ನು ಪೇಪರ್ ಪೆನ್ ತಯಾರಿಸುವ ಮೂಲಕ ಮಾಡಿಕೊಂಡಿದ್ದಾರೆ.

ಮಲಗಿರುವಲ್ಲಿಂದ ಅಲ್ಲಾಡಲೂ ಆಗದ ಪರಿಸ್ಥಿತಿಯಿದೆ. ಕಾಲುಗಳಿಗೆ ಚಲನೆಯಿಲ್ಲ ಆದರೂ ಅವರು ಪೇಪರ್ ಪೆನ್ ನಿರ್ಮಿಸಿ ಸ್ವಾಭಿಮಾನ ಮೆರೆದಿದ್ದಾರೆ.

ಎಲುಬಿನ ಮಜ್ಜೆ ನಶಿಸುವ ರೋಗ ಪೀಡಿತರಾಗಿರುವ ಅವರು ಮ್ಯಾಗಝಿನ್ ಪೇಪರ್ ಪೆನ್‍ಗಳಿಗೆ ಆರು ರೂಪಾಯಿ, ಕ್ರಾಫ್ಟ್ ಪೇಪರ್ ಪೆನ್‍ಗಳಿಗೆ ಎಂಟು ರೂಪಾಯಿ ಬೆಲೆ ನಿಗದಿಗೊಳಿಸಿದ್ದಾರೆ.

ಪ್ಲಾಸ್ಟಿಕ್ ನಿಷೇಧ ಬಂದರೆ ತನ್ನ ಪೇಪರ್ ಪೆನ್ ನಿರ್ಮಾಣ ಕುಟುಂಬಕ್ಕೆ ಆಸರೆಯಾಗಬಹುದು ಎಂಬ ನಿರೀಕ್ಷೆ ಅನೀಶ್‍ರಲ್ಲಿದೆ. ಲಾಕ್‍ಡೌನ್‍ನಲ್ಲಿ ಪೆನ್ನುಗಳಿಗೆ ಆರ್ಡರ್ ಪಡೆಯುವುದು ಮತ್ತು ತಲುಪಿಸುವುದು ತುಂಬ ಕಷ್ಟ. ಆದ್ದರಿಂದ ಸ್ವಲ್ಪ ಅವರ ವ್ಯಪಾರಕ್ಕೆ ಹಿನ್ನಡೆಯಾಗಿದೆ.

ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ